ಸಾರಾಂಶ
ಸುದ್ದಿಗೋಷ್ಠಿಯಲ್ಲಿ ಬಸವ ಹರಳಯ್ಯ ಸ್ವಾಮೀಜಿ ಮಾಹಿತಿಕನ್ನಡಪ್ರಭ ವಾರ್ತೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಮಹಾ ಶಿವಶರಣ ಶ್ರೀ ಹರಳಯ್ಯಗುರುಪೀಠದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ನ.28 ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ಶರಣರ ಕಲ್ಯಾಣ ಕ್ರಾಂತಿ ವಿಜಯೋತ್ಸವ, ಶ್ರೀ ಮಹಾ ಶಿವಶರಣ ಹರಳಯ್ಯ ಚಲನಚಿತ್ರದ ಟ್ರೈಲರ್ ಬಿಡುಗಡೆ, ಶ್ರೀ ಮಹಾ ಶಿವಶರಣ ಹರಳಯ್ಯ ಪ್ರಶಸ್ತಿ ಪ್ರದಾನ, ಆಂತರ್ಜಾತಿ ವಿವಾಹವಾದ ಆದರ್ಶ ದಂಪತಿಗಳಿಗೆ ಸನ್ಮಾನ, 3 ದಿನಗಳ ನಾಟಕೋತ್ಸವ ಹಾಗೂ ಜೀ ಕನ್ನಡ ವಾಹಿನಿಯ ಪುಟಾಣಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದರು.ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹಾ ಶಿವಶರಣ ಹರಳಯ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದ್ದು, ಈ ಭಾರಿ ಈ ಪ್ರಶಸ್ತಿಗೆ ಬಿ.ಡಿ.ಜತ್ತಿಯವರ ಮಗ ಅರವಿಂದ ಜತ್ತಿಯವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು 25 ಸಾವಿರ ರು.ಗಳ ಬಹುಮಾನ ಹೊಂದಿದೆ. ಮಧುವರಸ ಪ್ರಶಸ್ತಿಗೆ ಡಾ.ಗೊ.ಚನ್ನಬಸಪ್ಪರವರು ಆಯ್ಕೆಯಾಗಿದ್ದಾರೆ ಎಂದು ತಿಳಿಸದರು.
ಕಾರ್ಯಕ್ರಮದ ಧ್ವಜಾರೋಹಣವನ್ನು ಬೇಲಿ ಮಠದ ಶ್ರೀ ಶಿವರುದ್ರ ಶ್ರೀಗಳು, ಮುರುಘಾಮಠದ ಶ್ರೀ ಬಸವಪ್ರಭು ಶ್ರೀಗಳು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು, ಮೈಸೂರಿನ ಶಿವಯೋಗಿ ಶ್ರೀ ಉರಿಲಿಂಗಿಸಿದ್ದೇಶ್ವರ ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಕಾಶ ಶ್ರೀಗಳು ನೇರವೇರಿಸಲಿದ್ದಾರೆ. ಶ್ರೀ ಮಹಾಶಿವಶರಣ ಚಲನಚಿತ್ರದ ಟ್ರೈಲರ್‌ನ್ನು ಇಳಕಲ್‍ನ ಗುರು ಮಹಾಂತಪ್ಪ ಶ್ರೀಗಳು, ಪೂನಾದ ರವಿದಾಸ ಮಹಾ ಸಂಸ್ಥಾನದ ಸಂತ ಶ್ರೀ ಸುಖದೇವ ಮಹಾರಾಜ್ ಬಿಡುಗಡೆ ಮಾಡಲಿದ್ದಾರೆ ಎಂದರು.ಸಚಿವರುಗಳಾದ ಕೆ.ಎಚ್. ಮುನಿಯಪ್ಪ, ಡಿ.ಸುಧಾಕರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶರಣು ಪ್ರಕಾಶ್ ಪಾಟೀಲ್, ಆರ್.ಬಿ.ತಿಮ್ಮಾಪುರ, ಮಾಜಿ ಎಂ.ಎಲ್.ಸಿ. ಹನುಮಂತಯ್ಯ, ಧರ್ಮಸೇನ, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ, ಎನ್ ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಡಾ.ಎಂ.ಚಂದ್ರಪ್ಪ, ರಘುಮೂರ್ತಿ, ಮಾಜಿ ಸಂಸದ ಜನಾರ್ಧನಸ್ವಾಮಿ, ಡಾ.ಗೋ.ಚನ್ನಬಸಪ್ಪ, ನಾಗಮೋಹನ ದಾಸ್, ರವಿಂದ್ರಭಟ್ಟ, ಬಂಜಗೆರೆ ಜಯಪ್ರಕಾಶ್, ಮಲ್ಲಿಕಾ ಘoಟಿ, ಗುರುಮೂರ್ತಿ, ಎನ್.ಮೂರ್ತಿ ಮುಂತಾದವರು ಉಪಸ್ಥಿತರಿರಲಿದ್ದಾರೆ.
ಹುಣಸೂರಿನ ವಿರಕ್ತಮಠದ ಮೋಕ್ಷಪತಿ ಮಹಾ ಸ್ವಾಮೀಜಿ, ಚನ್ನಗಿರಿಯ ಪಾಂಡೋಮಟ್ಟಿಯ ಗುರುಬಸವ ಶ್ರೀಗಳು, ಅಥಣಿಯ ಶಿವಬಸವ ಶ್ರೀಗಳು, ಮೈಸೂರಿನ ಚಿದರಹಳ್ಳಿಯ ಮಲ್ಲಿಕಾರ್ಜನ ಶ್ರೀಗಳು, ಚಿದರಹಳ್ಳಿಯ ಮರಳು ಶಂಕರ ಮಠದ ಸಿದ್ದಬಸವ ಶ್ರೀಗಳು, ನೆಲಮಂಗಲದ ಡಾ.ಬಸವ ರಮಾನಂದ ಶ್ರೀಗಳು ಭಾಗಿಯಾಗಲಿದ್ದಾರೆ ಎಂದು ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ್, ತಾಲೂಕು ಅಧ್ಯಕ್ಷ ವೀರಭದ್ರಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಕಣಮಪ್ಪ ಭಾಗವಹಿಸಿದ್ದರು.