ಸಾರಾಂಶ
ಕನಕದಾಸರು 15ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆಯ ವಿರುದ್ಧ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಮಹಾಪುರುಷ ಎಂದು ಶ್ರೀರಾಂಪುರ ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ್ ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ್ ಅಭಿಮತ
---ಕನ್ನಡಪ್ರಭ ವಾರ್ತೆ ಮೈಸೂರು
ಕನಕದಾಸರು 15ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆಯ ವಿರುದ್ಧ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಮಹಾಪುರುಷ ಎಂದು ಶ್ರೀರಾಂಪುರ ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ್ ಹೇಳಿದರು.ಶ್ರೀರಾಂಪುರದ ಕಲ್ಯಾಣ ಮಂಟಪದಲ್ಲಿ ಮಹಾದೇವಪುರದ ಶ್ರೀ ಕಾಗಿನೆಲೆ ಡೆವಲಪ್ಮೆಂಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನಿಂದ ನಡೆದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಹಾಗೂ 2024ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕುರುಬ ಜನಾಂಗದಲ್ಲಿ ಹುಟ್ಟಿದ ಕನಕದಾಸರು ಶಿಕ್ಷಣ ಕಲಿತಿದ್ದರಿಂದ ನಳಚರಿತ್ರೆ, ರಾಮಧಾನ್ಯಚರಿತ್ರೆ, ಹರಿಭಕ್ತಸಾರ, ಕೀರ್ತನೆಗಳು ಮುಂಡಿಗೆಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಿದವರು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿರಿ. ಶಿಕ್ಷಣ ಯಾರು ಕದಿಯಲಾರದ ವಸ್ತುವಾಗಿದ್ದು, ಜ್ಞಾನವೊಂದಿದ್ದರೆ ಎಲ್ಲಿಯಾದರು ಬದುಕಬಹುದು ಎಂದ ಅವರು ಕನಕದಾಸರ ತತ್ವ ಆದರ್ಶಗಳನ್ನು ಎಲ್ಲರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ಸಮಿತಿಯ ಉಪಾಧ್ಯಕ್ಷ ಎಸ್.ಕೆ. ರಾಮೇಗೌಡ, ನಿರ್ದೇಶಕರಾದ ಕೆ.ಎಚ್. ಕುಮಾರ್, ಬಿ. ಸತೀಶ್, ಶಿವಕುಮಾರ್, ಸೋಮಣ್ಣ, ಆರ್. ಗುರುರಾಜ್, ಜಿ. ರಘುಕುಮಾರ್, ಕೆ. ಸುರೇಶ್, ಶಿವಮ್ಮ, ವಾಣಿಶ್ರೀ ಅಶ್ವಿನಿರೇವಣ್ಣ, ಶಂಕರ್, ಬಸವರಾಜು ಇದ್ದರು.