ಕನಕದಾಸರು ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ ಮಹಾಸಂತ

| Published : Nov 19 2024, 12:53 AM IST

ಕನಕದಾಸರು ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ ಮಹಾಸಂತ
Share this Article
  • FB
  • TW
  • Linkdin
  • Email

ಸಾರಾಂಶ

೧೬ನೇ ಶತಮಾನದ ಪೂಜ್ಯಸಂತ ಮಹಾಕವಿ ಮತ್ತು ದಾರ್ಶನಿಕ ಕವಿ ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯೆನೇನಾದರೂ ಬಲ್ಲಿರಾ ಎಂದು ಸಮಾಜದಲ್ಲಿ ಸಮಾನತೆಯನ್ನು ತರಲು ಪ್ರಯತ್ನಿಸಿದ ಮಹಾಸಂತರು ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್. ಬಿ. ತಿಪ್ಪಣ್ಣನವರ ಹೇಳಿದರು.

ಹಿರೇಕೆರೂರು: ೧೬ನೇ ಶತಮಾನದ ಪೂಜ್ಯಸಂತ ಮಹಾಕವಿ ಮತ್ತು ದಾರ್ಶನಿಕ ಕವಿ ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯೆನೇನಾದರೂ ಬಲ್ಲಿರಾ ಎಂದು ಸಮಾಜದಲ್ಲಿ ಸಮಾನತೆಯನ್ನು ತರಲು ಪ್ರಯತ್ನಿಸಿದ ಮಹಾಸಂತರು ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್. ಬಿ. ತಿಪ್ಪಣ್ಣನವರ ಹೇಳಿದರು.ಪಟ್ಟಣ ಸಿಇಎಸ್ ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಅಧೀನ ಸಹಯೋಗದಲ್ಲಿ ಕನಕದಾಸರ ೫೩೭ನೇ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಬಾಡ ಗ್ರಾಮದಲ್ಲಿ ಜನಿಸಿದ ಇವರು ತಮ್ಮ ಕೀರ್ತನೆಗಳ ಮೂಲಕ ನಾಡಿನಾದ್ಯಂತ ಸಂಚರಿಸಿ ಭಾವೈಕ್ಯತೆಯನ್ನು ಸಮಾಜದಲ್ಲಿತರಲು ಪ್ರಯತ್ನಿಸಿದರು. ದಾಸಕೂಟದ ಶ್ರೇಷ್ಠ ದಾಸರಾಗಿ ಕನ್ನಡ ಸಾಹಿತ್ಯಕ್ಕೆ ತಮ್ಮಕೊಡುಗೆಯನ್ನು ನೀಡಿ ಹರಿದಾಸರಲ್ಲಿ ಶ್ರೇಷ್ಠರೆನಿಸಿದ ಇವರ ಜೀವನ ಆದರ್ಶ ಪ್ರಾಯವಾದದ್ದು, ಇಂಥವರ ಬದುಕು ನಮಗೆಲ್ಲರಿಗೂ ಮಾರ್ಗದರ್ಶನವಾಗಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಸ್. ಬಿಚನ್ನಗೌಡ್ರ, ದಾನೇಶ ತುಮ್ಮಿನಕಟ್ಟಿ, ಎಂ.ಜಿ. ಕಡಕಟ್ಟಿ, ಆರ್.ಹೆಚ್. ಬೆಟ್ಟಳ್ಳೇರ, ಆರ್.ಹೆಚ್. ಪೂಜಾರ, ಬಿ.ವ್ಹಿ. ಸನ್ನೇರ, ಸತೀಶ ಬಣಕಾರ, ರವಿ ಬಡಳ್ಳಿ, ಆರ್.ಎಂ. ಕರೇಗೌಡ, ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.