ಜ್ಞಾನಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ

| Published : Nov 15 2024, 12:31 AM IST

ಜ್ಞಾನಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

1956ನೇ ನವೆಂಬರ್ ಹಲವು ಪ್ರಾಂತ್ಯಗಳು, ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕದ ಏಕೀಕರಣವಾದ ದಿನ ಮತ್ತು ನವೆಂಬರ್ 14ರಂದು ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ನಾವು ಮಕ್ಕಳ ದಿನಾಚರಣೆ ಎಂದು ಆಚರಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಮೆಣಸಗೆರೆ ಜ್ಞಾನಮುದ್ರ ವಿದ್ಯಾ ಮಂದಿರ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.

ಭಾರತೀ ಕಾಲೇಜಿನ ಹೆಲ್ತ್ ಸೈನಸ್‌ ನಿರ್ದೇಶಕ ತಮಿಜ್‌ಮಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1956ನೇ ನವೆಂಬರ್ ಹಲವು ಪ್ರಾಂತ್ಯಗಳು, ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕದ ಏಕೀಕರಣವಾದ ದಿನ ಮತ್ತು ನವೆಂಬರ್ 14ರಂದು ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ನಾವು ಮಕ್ಕಳ ದಿನಾಚರಣೆ ಎಂದು ಆಚರಿಸುತ್ತಿದ್ದೇವೆ ಎಂದರು.

ಮಕ್ಕಳು ತಾಯಿಯ ಬಗ್ಗೆ ಹೇಗೆ ಪ್ರೀತಿ ತೋರಿಸುತ್ತೀರಿ ಅದೇ ರೀತಿ ತಾಯಿ ನಾಡಿಗೆ ಪ್ರೀತಿ ಗೌರವವನ್ನು ಸಲ್ಲಿಸುವುದರ ಜೊತೆಗೆ ಜಲನೆಲವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕೆಂದು ಕಿವಿಮಾತು ಹೇಳಿದರು.

ಶಾಲೆ ಸಂಸ್ಥಾಪಕ ಅಧ್ಯಕ್ಷೆ ಶಿವಮ್ಮಶಿವಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಾಲೆ ತೆರೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದರು.

ವಿದ್ಯಾರ್ಥಿಗಳು ಕನ್ನಡ ಭಾವುಟ ಹಿಡಿದು, ಕೆಂಪು-ಹಳದಿ ಉಡುಪುಗಳನ್ನು ತೊಟ್ಟು ನೃತ್ಯ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರೆ, ಕ್ಕೂ ಹೆಚ್ಚು ಮಕ್ಕಳು ಜವಾಹರ್‌ಲಾಲ್ ನೆಹರು ಅವರ ಪೇಟವನ್ನು ತೊಟ್ಟು ಆಕರ್ಷಣೆಗೆ ಒಳಗಾದರು.

ವಿವಿಧ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಶಾಲೆ ಆಡಳಿತಾಧಿಕಾರಿ ಪ್ರಭಾವತಿ, ಸಂಸ್ಥಾಪಕರಾದ ಸೌಮ್ಯರಾಜೇಶ್, ಮುಖ್ಯಶಿಕ್ಷಕಿ ಕೆ.ಎಸ್.ಶೃತಿ, ಟ್ರಸ್ಟಿ ತೇಜಸ್ವಿನಿ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.