ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದಿಂದ ೨೬ ಎಕರೆ ಜಮೀನಿನಲ್ಲಿ ಶೇ.೫೦- ೫೦ ರ ಅನುಪಾತದಲ್ಲಿ ವಸತಿ ಯೋಜನೆಯನ್ನು ಕೈಗೊಳ್ಳಲು ೨೫ ಕೋಟಿ ರು.ಗಳ ವೆಚ್ಚದ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಮಂಜೂರಾತಿ ಪಡೆಯುವ ವಿಶ್ವಾಸವನ್ನು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಗೋಪಾಲರೆಡ್ಡಿ ವ್ಯಕ್ತಪಡಿಸಿದರು.ಕೆಜಿಎಫ್‌ನ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬೇತಮಂಗಲ ಹೋಬಳಿಯ ಗುಟ್ಟಹಳ್ಳಿ ಮತ್ತು ಗರುಡ್ರಾದ್ರಿಹಳ್ಳಿ ಸರ್ವೇ ನಂಬರ್‌ಗಳಲ್ಲಿ ವಸತಿ ಯೋಜನೆಗೆ ೨೬ ಎಕರೆ ಭೂಮಿ ರೈತರಿಂದ ವಶಪಡಿಸಿಕೊಂಡು, ಶೇ.೫೦-೫೦ರ ಅನುಪಾಥದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು, ಬಡಾವಣೆಯ ಅಭಿವೃದ್ದಿಗೆ ೨೫ ಕೋಟಿ ರೂ.ಗಳ ಅವಶ್ಯವಿದ್ದು, ಅಗತ್ಯವಿರುವ ಸಂಪನ್ಮೂಲಕ್ಕೆ ಸರ್ಕಾರದ ಅನುಮತಿ ಪಡೆಯಲಾಗುವುದು ಎಂದರು.ವಾಣಿಜ್ಯ ಸಂಕೀರ್ಣ ನಿರ್ಮಾಣನಗರಾಭಿವೃದ್ದಿ ಪ್ರಾಧಿಕಾರದ ೧೦೦-೧೦೦ ನಿವೇಶನದಲ್ಲಿ ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯದ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ನಿರ್ಮಾಣ ಮಾಡಲು ೫ ಕೋಟಿ ರು.ಗಳ ಯೋಜನೆಯ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ದೊರೆತ ಕೂಡಲೇ ವಾಣಿಜ್ಯ ಸಂಕೀರ್ಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಕಟ್ಟಡ ಕಾಮಗಾರಿಯನ್ನು ಪ್ರಾರಂಬಿಸಲಾಗುವುದೆಂದು ತಿಳಿಸಿದರು. ಕೆಜಿಎಫ್‌ನ ಬಂಗಾರದ ಗಣಿ ಗ್ರಾಮ ಸರ್ವೇ ನಂ.೦೩ ರ ೨೯೪ ಎಕರೆ ಭೂಮಿ ಸರಕಾರ ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದು, ಮೊದಲನೇ ಹಂತದಲ್ಲಿ ೨೯೪ ಎಕರೆ ಭೂಮಿಗೆ ತಂತಿ ಬೇಲಿ ನಿರ್ಮಿಸಲು ೫ ಕೋಟಿ ರೂ.ಗಳ ಅಗತ್ಯವಿದೆ. ಅಗತ್ಯವಿರುವ ಅನುದಾನಕ್ಕೆ ನಗರಾಭಿವೃದ್ದಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದರು.ಅಕ್ರಮ ಬಡಾವಣೆ ವಿರುದ್ಧ ಕ್ರಮಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳ ನಿರ್ಮಾಣ ಮಾಡಿ ನಿವೇಶನಗಳನ್ನು ಮಾರಾಟ ಮಾಡುವವರ ವಿರುದ್ದ ಕ್ರಮ ಜರುಗಿಸಲಾಗುವುದು. ಅಂತಹ ಬಡಾವಣೆಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು, ಯಾರೇ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಲು ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಸಾರ್ವಜನಿಕರು ಸಹ ನಿವೇಶನ ಖರೀದಿ ಮಾಡುವ ಸಂದರ್ಭದಲ್ಲಿ ಬಡಾವಣೆ ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮೋದನೆ ಪಡೆಯಲಾಗಿದೇಯೇ ಎಂಬುದುನ್ನು ಖಾತರಿಪಡಿಸಿಕೊಂಡ ನಂತರ ಸಾರ್ವಜನಿಕರು ನಿವೇಶನ ಖರೀದಿ ಮಾಡುವಂತೆ ಅಧ್ಯಕ್ಷರು ಮನವಿ ಮಾಡಿದರು. ಕೆಜಿಎಫ್ ಮತ್ತು ಬಂಗಾರಪೇಟೆ ವ್ಯಾಪ್ತಿಗೆ ಬರುವ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡುವ ಮೊದಲು ಪ್ರಾಧಿಕಾರದಿಂದ ಕಡ್ಡಾಯವಾಗಿ ಕಟ್ಟಡದ ನೀಲಿ ನಕ್ಷೆ ಅನುಮೋದನೆ ಪಡೆದ ನಂತರ ಸ್ಥಳೀಯ ಸಂಸ್ಥೆಯಲ್ಲಿ ಪರವಾನಿಗೆ ಪಡೆದು ಕಟ್ಟಡ ಕಾಮಗಾರಿ ಕೈಗೊಳ್ಳಬೇಕೆಂದು ತಿಳಿಸಿದರು. ಪ್ರಾಧಿಕಾರದ ಅಭಿವೃದ್ಧಿಗೆ ಶ್ರಮಿಸುವೆ ನಗರಾಭಿವೃದ್ದಿ ಪ್ರಾಧಿಕಾರದ ಸಚಿವ ಬೈರತಿ ಸುರೇಶ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾಶಶಿಧರ್ ಅವರ ಸಹಕಾರದೊಂದಿಗೆ ಪ್ರಾಧಿಕಾರದ ಅಭಿವೃದ್ದಿ ಮಾಡಲಾಗುವುದು, ಪ್ರಾಧಿಕಾರವು ಹಣಕಾಸು ಮುಗ್ಗಟ್ಟನ್ನು ಎದರಿಸುತ್ತಿದೆ. ಪ್ರಾಧಿಕಾರಕ್ಕೆ ೫೦ ಕೋಟಿ ರು.ಗಳ ನೆರವು ಅಗತ್ಯವಿದೆ. ಸರ್ಕಾರದಿಂದ ಹಂತ ಹಂತವಾಗಿ ಹಣಕಾಸಿನ ನೆರವು ಪಡೆದು ಹೊಸ ಬಡಾವಣೆಗಳ ನಿರ್ಮಾಣ ಮಾಡಲಾಗುವುದು ಎಂದರು. ಕೆಜಿಎಫ್ ಮತ್ತು ಬಂಗಾರಪೇಟೆ ಎರಡು ತಾಲೂಕುಗಳಲ್ಲಿ ಸರಕಾರಿ ಭೂಮಿ ಗುರುತಿಸಿ ಎರಡು ಸಾವಿರ ನಿವೇಶನ ನಿರ್ಮಾಣ ಮಾಡಿ ಬಡವರಿಗೆ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದ ಅವರು, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಮತ್ತು ರೂಪಕಲಾಶಶಿಧರ್ ಆರ್ಶೀವಾದಿಂದ ತಾವು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.