ಕೆಜಿಎಫ್ ಕೈಗಾರಿಕಾ ಪ್ರದೇಶ ಗೆಜೆಟ್‌ ಅಧಿಸೂಚನೆ

| Published : Mar 16 2024, 01:47 AM IST / Updated: Mar 16 2024, 03:18 PM IST

ಸಾರಾಂಶ

೧೯೭೦ ರ ದಶಕದಲ್ಲಿ ಕೇಂದ್ರ ಸರಕಾರ ಕೆಜಿಎಫ್ ನಗರದಲ್ಲಿ ಬೆಮೆಲ್ ಕಾರ್ಖಾನೆ ಸ್ಥಾಪನೆ ಮಾಡಿದ ನಂತರ ಕೆಜಿಎಫ್ ನಗರದಕ್ಕೆ ಯಾವುದೇ ಸರ್ಕಾರಿ ಸೌಮ್ಯದ ಕಾರ್ಖಾನೆಗಳು ಬಂದಿಲ್ಲ. ಈ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ಕೆಜಿಎಫ್ ನಗರದಲ್ಲಿ ಬೃಹತ್ ಕೈಗಾರಿಕೆಗಳನ್ನು ತರುವ ಮೂಲಕ, ನಗರದ ಲಕ್ಷಾಂತರ ಯುವ ಪ್ರತಿಭೆಗಳಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸುವುದಾಗಿ ಶಾಸಕಿ ರೂಪಕಲಾಶಶಿಧರ್ ತಿಳಿಸಿದರು.

ನಗರಸಭೆ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನನಗೆ ನನ್ನ ಜೀವನದಲ್ಲಿ ಅತ್ಯಂತ ಸಂತೋಷಕರ ದಿನವಾಗಿದೆ, ಕೆಜಿಎಫ್ ನಗರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಮೊದಲನೇ ಹೆಜ್ಜೆಯಾಗಿ ರಾಜ್ಯಪಾಲರು ಕೈಗಾರಿಕಾ ಪ್ರದೇಶಕ್ಕೆ ಮೀಸಲು ಇಟ್ಟಿದ್ದ ೬೭೦ ಎಕರೆ ಪ್ರದೇಶವನ್ನು ಕೆಡಿಐಬಿಗೆ ಹಸ್ತಾಂತರಿಸಲು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ಶ್ರೀಘ್ರದಲ್ಲೇ ಕೈಗಾರಿಕಾ ಪ್ರದೇಶದ ಅಭಿವೃದ್ದಿಗೆ ಕೆಡಿಐಬಿ ಟೆಂಡರ್ ಕರೆಯಲಿದೆ ಎಂದು ತಿಳಿಸಿದರು.

ಯಾರೂ ಮಾಡದ್ದನ್ನು ಮಾಡಿದ್ದೇನೆ: ೧೯೭೦ ರ ದಶಕದಲ್ಲಿ ಕೇಂದ್ರ ಸರಕಾರ ಕೆಜಿಎಫ್ ನಗರದಲ್ಲಿ ಬೆಮೆಲ್ ಕಾರ್ಖಾನೆ ಸ್ಥಾಪನೆ ಮಾಡಿದ ನಂತರ ಕೆಜಿಎಫ್ ನಗರದಕ್ಕೆ ಯಾವುದೇ ಸರ್ಕಾರಿ ಸೌಮ್ಯದ ಕಾರ್ಖಾನೆಗಳು ಬಂದಿಲ್ಲ, ಈ ಹಿಂದೆ ಅಯ್ಕೆಯಾದಂತಹ ಶಾಸಕರು ಯಾರು ಕೈಗಾರಿಕೆಗಳ ಬಗ್ಗೆ ಪ್ರಾಸ್ತಪ ಮಾಡಿಲ್ಲ, 

ನಾನು ಬಂದು ಆರು ವರ್ಷಗಳಿಂದ ನಿಂರಂತರವಾಗಿ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನಿಸಿ ಕೊನೆಗೂ ೬೭೦ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ, ಮುಂದಿನ ಆರು ತಿಂಗಳ ಒಳಗೆ ಕೈಗಾರಿಕಾ ಟೌನ್ ಶಿಪ್‌ನ ತಲೆ ಎತ್ತಲಿದೆ ಇದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ಸಿಗಲಿದ್ದು ಸಾವಿರಾರು ಬಡ ಕುಟುಂಬಗಳಿಗೆ ಕೈಗಾರಿಕೆಗಳು ಅಸರೆಯಾಗಲಿವೆ ಎಂದರು.

ಐಎಎಸ್ ಅಧಿಕಾರಿಗಳ ಸಹಕಾರ: ಕೆಜಿಎಫ್ ನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾಧಿಕಾರಿಗಳಾದ ಮಂಜುನಾಥ್, ಸೆಲ್ವಕುಮಾರ್ ಹಾಗೂ ಅಕ್ರಂಪಾಷ, ಮುಖ್ಯ ಕಾರ್‍ಯದರ್ಶಿಗಳಾದ ವಿಜಯಭಾಸ್ಕರ್, ನಂದಿತಾಶರ್ಮ ಹಾಗೂ ನಿವೃತ್ತ ಅಧಿಕಾರಿಗಳು ಸಹ ಸಲಹೆ ನೂಚನೆಗಳ ಮೇರೆಗೆ ಇಂದು ಕೈಗಾರಿಕೆಗಳ ಸ್ಥಪನೆಗೆ ಸಹಕಾರಿಯಾಗಿದೆ ಎಂದರು.