ಅಮಿತ್ ಶಾ ರಾಜೀನಾಮೆಗೆ ಖಾಲಿದ್ ಒತ್ತಾಯ

| Published : Dec 19 2024, 12:35 AM IST

ಸಾರಾಂಶ

ದೇವರ ಹೆಸರು ಎಷ್ಟೋ ಬಾರಿ ಹೇಳಿದರೆ ಅಂತಹವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಆದರೆ, ಅಂಬೇಡ್ಕರ್ ಹೆಸರು ಯಾಕೆ ಹೇಳುತ್ತೀರಾ ಎಂದು ಕೇಂದ್ರ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಮನುಸ್ಮೃತಿ ಮನಸ್ಥಿತಿಯ ಕೇಂದ್ರ ಗೃಹರು ಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಯುವ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.

ದಾವಣಗೆರೆ: ದೇವರ ಹೆಸರು ಎಷ್ಟೋ ಬಾರಿ ಹೇಳಿದರೆ ಅಂತಹವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಆದರೆ, ಅಂಬೇಡ್ಕರ್ ಹೆಸರು ಯಾಕೆ ಹೇಳುತ್ತೀರಾ ಎಂದು ಕೇಂದ್ರ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಮನುಸ್ಮೃತಿ ಮನಸ್ಥಿತಿಯ ಕೇಂದ್ರ ಗೃಹರು ಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಯುವ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಒತ್ತಾಯಿಸಿದ್ದಾರೆ.

ಕೋಟ್ಯಂತರ ಶೋಷಿತ, ತುಳಿತಕ್ಕೊಳಗಾದ, ಅನ್ಯಾಯಕ್ಕೆ ಒಳಗಾದವರಿಗೆ ಬದುಕು ನೀಡಿದವರು ಅಂಬೇಡ್ಕರ್‌. ಎಷ್ಟೋ ವರ್ಗದವರು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮುನ್ನೆಲೆಗೆ ಬರಲು ಅನುವು ಮಾಡಿಕೊಡುವಂತಹ ಸಂವಿಧಾನ ದೇಶಕ್ಕೆ ಕೊಟ್ಟಿದ್ದಾರೆ. ಸಚಿವ ಅಮಿತ್ ಶಾ ಅಂಥವರ ಬಗ್ಗೆ ದುರಹಂಕಾರಿತನದ ಮಾತುಗಳಾಡಿದ್ದು, ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲಿದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸೈಯದ್ ಎಚ್ಚರಿಸಿದ್ದಾರೆ.

- - - -18ಕೆಡಿವಿಜಿ4: