ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರಾಗಿದ್ದ ನಾಗಮಂಗಲ ಕ್ಷೇತ್ರದ ನಲ್ಲಿಗೆರೆ ಬಾಲು ಸ್ಥಾನ ತೆರುವಾದ ಹಿನ್ನೆಲೆ ಆ ಸ್ಥಾನಕ್ಕೆ ಸುಖಧರೆ ಗ್ರಾಮದ ಎಸ್.ಎನ್. ಲಕ್ಷ್ಮೀನಾರಾಯಣ್ ಅವರನ್ನು ನೂತನ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಲಾಗಿದೆ ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿದ್ದಾರೆ.ನಿರ್ದೇಶಕ ಸ್ಥಾನಕ್ಕೆ ಈ ಹಿಂದೆ ನೆಲ್ಲಿಗೆರೆ ಬಾಲು ವಿರುದ್ಧ ಸ್ಪರ್ಧಿಸಿದ್ದ ಸುಖಧರೆ ಗ್ರಾಮದ ಲಕ್ಷ್ಮೀನಾರಾಯಣ್ ಅವರು 2 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ತದನಂತರ ಹಲವು ನ್ಯೂನತೆಗಳ ಕುರಿತು ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ಅಂತಿಮ ತೀರ್ಪಿನಂತೆ ನಿರ್ದೇಶಕ ಸ್ಥಾನದಿಂದ ನೆಲ್ಲಿಗೆರೆ ಬಾಲು ರವರು ಅನುರ್ಜಿತಗೊಂಡ ಹಿನ್ನೆಲೆಯಲ್ಲಿ ಕಡಿಮೆ ಅಂತರದಿಂದ ಸೋಲುಂಡಿದ್ದ ಲಕ್ಷ್ಮೀನಾರಾಯಣ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಲಕ್ಷ್ಮಿ ನಾರಾಯಣ್ ನೇಮಕಗೊಂಡ ಹಿನ್ನೆಲೆಯಲ್ಲಿ ಬೋಗಾದಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು.ಮನ್ಮುಲ್ ನೂತನ ನಿರ್ದೇಶಕ ಲಕ್ಷ್ಮೀನಾರಾಯಣ್ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿ 2 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದೆ. ಆದರೆ, ಇಂದು ಜಯ ಸಿಕ್ಕಿದೆ. ನೂತನ ನಿರ್ದೇಶಕನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಮಂಡ್ಯ ಜಿಲ್ಲೆ ಮತ್ತು ನಾಗಮಂಗಲ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ನನ್ನ ಧನ್ಯವಾದ ಅರ್ಪಿಸುವೆ ಎಂದರು.ಜಿಲ್ಲಾ ಕಾಂಗ್ರೆಸ್ ಸಮಿತಿಗೆ ರವೀಂದ್ರನಾಥ್ ನೇಮಕ
ಕೆ.ಆರ್.ಪೇಟೆ: ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಗಿ ತಾಲೂಕಿನ ಬೀರವಳ್ಳಿ ಗ್ರಬಿ.ಕೆ.ರವೀಂದ್ರನಾಥ್ ಅವರನ್ನು ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ನೇಮಕಾತಿ ಪತ್ರದಲ್ಲಿ ಸೂಚಿಸಿದ್ದಾರೆ.