ಸಾರಾಂಶ
ಸುಮಾರು 70 ವರ್ಷಗಳ ಹಿಂದೆ ಕಾಂಗ್ರೆಸ್ಸಿಗೆ ಮಂಜೂರಾಗಿದ್ದ ಸಿದ್ದಾಪುರ ಪಟ್ಟಣದ ಸಿ.ಆರ್. ಹಾಲ್ ಜಾಗವನ್ನು ಪುನಃ ಕಾಂಗ್ರೆಸ್ಸಿಗೆ ನೀಡುವಂತೆ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, 1952ರಲ್ಲಿ ಕಾಂಗ್ರೆಸ್ಸಿಗೆ ಮಂಜೂರಾಗಿದ್ದ ಪಟ್ಟಣದ ಹೃದಯ ಭಾಗದಲ್ಲಿರುವ 267ನೇ ಸರ್ವೆ ನಂಬರಿನ ಸಿ.ಆರ್. ಹಾಲ್ ಜಾಗವನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ರೆಕಾರ್ಡ್ ಬದಲಿಸಲಾಗಿತ್ತು. ಈ ಸಂಬಂಧ ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೂರಕ ದಾಖಲೆ ನೀಡಿ ವಾದ ಮಂಡಿಸಲಾಗಿತ್ತು. ಇದೀಗ ಹೈಕೋರ್ಟ್ ಈ ಜಾಗವನ್ನು ಪುನಃ ಕಾಂಗ್ರೆಸ್‌ಗೆ ನೀಡುವಂತೆ ತೀರ್ಪು ನೀಡಿದೆ. ಒಂದು ಸಂಸ್ಥೆಯ ಹೆಸರಿನಲ್ಲಿರುವ ಜಾಗವನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ರಿಕಾರ್ಡ್ ಬದಲು ಮಾಡುವುದು ಸರಿಯಲ್ಲ ಎಂದರು.
ಕನ್ನಡ ಪ್ರಭ ವಾರ್ತೆ ಸಿದ್ದಾಪುರ

ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲಾಗುವುದು. ಈ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಕಳುಹಿಸಲಾಗಿದೆ. ಸ್ಥಳ ಪರಿಶೀಲಿಸಿ ಮತ್ತೊಮ್ಮೆ ಸರ್ವೇ ಮಾಡಿಸಿ ತಕ್ಷಣ ರಿಕಾರ್ಡ್ ಬದಲು ಮಾಡಲಾಗುವುದು ಎಂದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ, ವಕೀಲ ಜಿ.ಟಿ. ನಾಯ್ಕ, ಸಹಕಾರಿ ರತ್ನ ಪ್ರಶಸ್ತಿ ಪಡೆದ ವಿನೋದ ನಾಯ್ಕ ಉಪಸ್ಥಿತರಿದ್ದರು.