ಸಿಕ್ಯಾಬ್ ಸಂಸ್ಥೆಗೆ ಕಾನೂನು ಪದವಿ ಕಾಲೇಜು ಮಂಜೂರು

| Published : Aug 11 2024, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿಕ್ಯಾಬ್ ಸಮೂಹ ಶಿಕ್ಷಣ ಸಂಸ್ಥೆಗಳ ಸಾಲಿಗೆ ಐದು ವರ್ಷದ ಬಿಎ, ಎಲ್‌ಎಲ್‌ಬಿ ಪದವಿ ಕಾಲೇಜು ಸೇರ್ಪಡೆಯಾಗಿದೆ ಎಂದು ಸಿಕ್ಯಾಬ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಸರ್ಕಾರದ ಕಾನೂನು ಇಲಾಖೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅನುಮತಿ ಹಾಗೂ ಮಾನ್ಯತೆಯನ್ನು ನೀಡಿವೆ.

2024-25ರ ಶೈಕ್ಷಣಿಕ ವರ್ಷದಿಂದಲೇ ಈ ಕಾಲೇಜು ಆರಂಭವಾಗಲಿದ್ದು, 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಪರವಾನಗಿಗೆ ನೀಡಲಾಗಿದೆ, ಸುಸಜ್ಜಿತ ಗ್ರಂಥಾಲಯ, ಅಧುನಿಕ ವರ್ಗ ಕೊಠಡಿಗಳು, ಗುಣಮಟ್ಟದ ಅಣಕು ನ್ಯಾಯಾಲಯ, ಪರಿಣಿತ ಪ್ರಾಧ್ಯಾಪಕ ಸಿಬ್ಬಂದಿಯನ್ನು ಕಾಲೇಜು ಹೊಂದಿದೆ.

ಜಿಲ್ಲೆಯಲ್ಲಿಯೇ ಐದು ವರ್ಷದ ಕಾನೂನು ಶಿಕ್ಷಣ ನೀಡುವ ಸಮಗ್ರ(ಇಂಟೆಗ್ರೇಟೆಡ್) ಕೋರ್ಸ್‌ನ ಪ್ರಥಮ ಕಾಲೇಜು ಇದಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಸ್.ಎ.ಪುಣೇಕರ, ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ, ನಿರ್ದೇಶಕರಾದ ರಿಯಾಜ್ ಫಾರೂಖಿ, ಸಲಾಹುದ್ದೀನ್ ಅಯೂಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ಅಧ್ಯಯನದ ಜೊತೆಗೆ ಇಂಗ್ಲೀಷ್‌, ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ, ಪ್ರಚಲಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳು, ಕಾನೂನು ಕ್ಷೇತ್ರದ ಹೊಸ ಸಂಗತಿಗಳ ಬೋಧನೆ ಹಾಗೂ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ನಗರದ ಹಾಗೂ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಪ್ರಾಚಾರ್ಯರು, ಉಪಪ್ರಾಚಾರ್ಯರು, ಪ್ರಾಧ್ಯಾಪಕ ಸಿಬ್ಬಂದಿ ತಿಳಿಸಿದ್ದಾರೆ.