ಕಲಿಕೆ ಪ್ರತಿಯೊಬ್ಬ ವ್ಯಕ್ತಿಯ ಗಳಿಕೆಯ ಸಾಧನವಾಗಬೇಕು

| Published : Sep 08 2025, 01:00 AM IST

ಸಾರಾಂಶ

ವಿದ್ಯಾರ್ಥಿಗಳು ಪ್ರತಿನಿತ್ಯ ಕಲಿಯುವ ಅಭ್ಯಾಸ ಮಾಡಬೇಕು. ತಮ್ಮ ದಿನಚರಿಯನ್ನು ಉತ್ತಮ ವಿಷಯಗಳ ಮೂಲಕ ಪ್ರಾರಂಭಿಸಿ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಕಲಿಕೆಯು ಪತ್ರಿಯೊಬ್ಬ ವ್ಯಕ್ತಿಯ ಗಳಿಕೆಯ ಸಾಧನವಾಗಿದೆ ಎಂದು ಉಪನ್ಯಾಸಕ ನಾಗರಾಜ್ ಬಿಜಗನಳ್ಳಿ ಅಭಿಪ್ರಾಯಪಟ್ಟರು.ಪಟ್ಟಣದ ವಿವೇಕಾನಂದ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಎನ್. ಗೌಡ ಫೆಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ಉದ್ಘಾಟನೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ಪ್ರತಿನಿತ್ಯ ಕಲಿಯುವ ಅಭ್ಯಾಸ ಮಾಡಬೇಕು. ತಮ್ಮ ದಿನಚರಿಯನ್ನು ಉತ್ತಮ ವಿಷಯಗಳ ಮೂಲಕ ಪ್ರಾರಂಭಿಸಿ. ಕಲಿಯುವ ಸಮಯದಲ್ಲಿ ಸಮಯ ವ್ಯರ್ಥ ಮಾಡಿದರೆ ಗಳಿಸುವ ಸಮಯದಲ್ಲಿ ಮರೆಯಾಗಿ ಹೋಗುತ್ತೀರಾ ಇದರಿಂದ್ದ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ. ತಮ್ಮ ಮನಸ್ಸಿನಲ್ಲಿ ಪ್ರತಿಭೆಗಳನ್ನು ಬೆಳೆಸುವ ಉಳಿಸುವ ನಿರ್ಧಾರ ಮಾಡಬೇಕು. ಪ್ರತಿಯೊಬ್ಬರಲ್ಲಿಯೂ ನಾಯಕತ್ವದ ಗುಣವಿರುತ್ತದೆ ಇದನ್ನು ಉತ್ತಮ ಸಮಾಜ ಕಟ್ಟಲು ಬಳಸಿಕೊಳ್ಳಬೇಕು. ಅವಮಾನ ಜೀವನದ ಪಾಠ ಕಲಿಸುತ್ತದೆ. ಇಂತಹ ಸಮಯವನ್ನು ಅಭಿವೃದ್ಧಿಗೆ ಬಳಸಿಕೊಳ್ಳಿ ನಿಮ್ಮ ಜೀವನ ಅಭಿವೃದ್ಧಿಯಾಗುತ್ತದೆ. ಕಲಿಕೆಯ ಸಮಯವನ್ನು ಪ್ರಗತಿಯತ್ತ ಸಾಗಲು ಉಪಯೋಗಿಸಿ ಎಂದರು.ಕೊಡಗು ವಿವಿ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ಮಾತನಾಡಿ, ಶಿಕ್ಷಣವು ವ್ಯಕ್ತಿತ್ವ ಮತ್ತು ಸಬಲೀಕರಣದ ಅಸ್ತ್ರ ಎಂದು ಸ್ವಾಮಿ ವಿವೇಕಾನಂದ ಅವರು ಜಗತ್ತಿಗೆ ಸಾರಿದ್ದಾರೆ.ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಇದೆ. ಕಾಲೇಜಿನ ವಯಸ್ಸಿನಲ್ಲಿ ಚಂಚಲತೆ ಮನಸ್ಸಿರುತ್ತದೆ. ಇದನ್ನು ನಿಯಂತ್ರಿಸಿ ಕೇಂದ್ರೀಕರಿಸಿಕೊಳ್ಳಬೇಕು. ಶಿಕ್ಷಣದ ಕಡೆ ಹೆಚ್ಚಿನ ಗಮಹರಿಸಬೇಕು. ಈ ಮೂಲಕ ಬೌದ್ಧಿಕತೆ ಹೆಚ್ಚುತ್ತದೆ. ನಾಯಕತ್ವ ಗುಣ ಬೆಳೆಯುತ್ತದೆ. ಪೋಷಕರು ಕೂಡ ಮಕ್ಕಳ ಮೇಲೆ ನಿಗಾವಹಿಸಿ ಪೋಷಣೆ ಮಾಡಬೇಕು. ಮಕ್ಕಳು ಕೂಡ ಶಿಕ್ಷಕರ, ಪೋಷಕರ ಗೌರವ ಕಾಪಾಡುವ ರೀತಿಯಲ್ಲಿ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತವಾಗಬಾರದು ಮಾನವೀಯತೆ ಮೌಲ್ಯಗಳಾಗಬೇಕು ಎಂದರು.ಕಾರ್ಯಕ್ರಮವನ್ನು ಹಿಟ್ಟನೆ ಹೆಬ್ಬಾಗಿಲು ಗ್ರಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಮ್ಮ ಉದ್ಘಾಟಿಸಿದರು. ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನ ಕಾರ್ಯಕ್ರಮ ನಡೆಸಿಕೊಡಲಾಯಿತು.ಈ ವೇಳೆ ಕಾಲೇಜಿನ ಪ್ರಾಂಶುಪಾಲ ಎಚ್‌.ಎಲ್‌. ರವಿ, ಮುಖ್ಯ ಶಿಕ್ಷಕ ತಿಪ್ಪೆ ರುದ್ರಸ್ವಾಮಿ, ನಂಜುಂಡಸ್ವಾಮಿ, ಶ್ರೀನಿವಾಸ್, ಕಾಲೇಜಿನ ಉಪನ್ಯಾಸಕ ವೆಂಕಟೇಶ್, ರಾಜ, ಶ್ರುತಿ, ಚೆನ್ನಾಂಭಿಕಾ, ಧನಂಜಯ, ಸಂದೇಶ್, ನವೀನ್ ಮೊದಲಾದವರು ಇದ್ದರು.