ಸಾರಾಂಶ
ತುಮಕೂರು:ಚಿರತೆ, ನಾಯಿ ಕಾದಾಟದಲ್ಲಿ ಎಂಟು ತಿಂಗಳ ಚಿರತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕು ಮಾವುಕೆರೆ ಗ್ರಾಮದಲ್ಲಿ ನಡೆದಿದೆ.
ತುಮಕೂರು:ಚಿರತೆ, ನಾಯಿ ಕಾದಾಟದಲ್ಲಿ ಎಂಟು ತಿಂಗಳ ಚಿರತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕು ಮಾವುಕೆರೆ ಗ್ರಾಮದಲ್ಲಿ ನಡೆದಿದೆ.ಕಳೆದ ಒಂದು ತಿಂಗಳಿನಿಂದ ಎಂಟು ತಿಂಗಳ ಈ ಚಿರತೆ ಜನರಿಗೆ ತೊಂದರೆ ಕೊಡುತ್ತಿತ್ತು. ಹಲವು ಭಾರಿ ಜನತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿರಲಿಲ್ಲ. ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಚಿರತೆ ಸಾವಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಗುರುವಾರ ರಾತ್ರಿ ನಾಯಿಯೊಂದಿಗೆ ಚಿರತೆ ಜಗಳವಾಡುತ್ತಿತ್ತು. ನಾಯಿ ಮತ್ತು ಚಿರತೆ ಜಗಳದಲ್ಲಿ ಚಿಕ್ಕ ವಯಸ್ಸಿನ ಚಿರತೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.