ಸಾರಾಂಶ
ಅಳ್ನಾವರ:
ರೈತರ ಹಿತ ಕಾಪಾಡುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಹಿರಿದು ಎಂದು ಬಿಳಕಿ-ಅವರೊಳ್ಳಿಯ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಶ್ರೀ ಹೇಳಿದರು.ಸನಿಹದ ಲಿಂಗನಮಠ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ರೈತರ ಅಭಿವೃದ್ಧಿ ಪಾಲನ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಗ್ಗಟ್ಟಿನ ಬಲದಿಂದ ಮಾತ್ರ ಸಹಕಾರ ಸಂಸ್ಥೆಗಳ ಬೆಳವಣಿಗೆ ಸಾಧ್ಯ. ಸೊಸೈಟಿ ಮೂಲಕ ರೈತನಿಗೆ ಬೇಕಾದ ಸೌಲಭ್ಯ ಸಕಾಲದಲ್ಲಿ ದೊರೆಯಬೇಕು. ರೈತರ ಬದುಕು ಹಸನಾಗಿಸಲು ಸಂಘ ಕಾರ್ಯಚಟುವಟಿಕೆ ರೂಪಿಸಬೇಕು. ಸಹಬಾಳ್ವೆ, ಪ್ರೀತಿ, ವಿಶ್ವಾಸದ ಬಾಳು ನಿಮ್ಮದಾಗಲಿ ಎಂದರು.ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಸಹಕಾರ ಕ್ಷೇತ್ರ ಪವಿತ್ರವಾದದ್ದು, ಸದಸ್ಯರು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಶರಣರು ಕಂಡ ಈ ನಾಡಿನಲ್ಲಿ ಸದಾ ಒಳ್ಳೇಯ ಕಾರ್ಯಗಳು ನಡೆಯಬೇಕು. ಜನರಿಗೆ ಅನುಕೂಲ ಕಲ್ಪಿಸಲು ಸುಂದರ ಕಲ್ಯಾಣ ಮಂಟಪ ಕಟ್ಟಲು ಕ್ರಿಯಾಯೋಜನೆ ರೂಪಿಸಬೇಕು. ಅದಕ್ಕೆ ಬೇಕಾದ ಸೌಲಭ್ಯ, ಸಹಕಾರ ನೀಡುವ ಭರವಸೆ ನೀಡಿದರು.
ಅಳ್ನಾವರ ಅರ್ಬನ್ ಬ್ಯಾಂಕಿನ ನಿರ್ದೇಶಕರು, ಗ್ರಾಮದ ಹಿರಿಯರು ಹೊಸ ಅಡಳಿತ ಮಂಡಳಿಯನ್ನು ಸತ್ಕರಿಸಿದರು. ಶ್ರೀಗಳ ಸತ್ಕಾರ ನಡೆಯಿತು. ಶ್ರಾವಣಿ ಮಾಟೊಳ್ಳಿ ಹಾಗೂ ಶ್ರೀ ಶಕ್ತಿ ಮೇತ್ರಿ ಅವರು ಭರತ ನಾಟ್ಯ ಪ್ರದರ್ಶಿಸಿದರು. ಮಾಜಿ ನಿರ್ದೇಶಕರ ಸತ್ಕಾರ ನಡೆಯಿತು. ಹಿರಿಯರಾದ ಬಸಯ್ಯ ಹಿರೇಮಠ, ಮಲ್ಲಿಕಾರ್ಜುನ ತೇಗೂರ ಇದ್ದರು.ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಶ್ರೀಶೈಲ ಮಾಟೊಳ್ಳಿ, ನಿರ್ದೇಶಕರಾದ ಕಾಶೀಮ ಹಟ್ಟಿಹೊಳಿ, ಪ್ರಕಾಶ ಬಿಜಾಪೂರ, ಅಶೋಕ ಕಾಕತ್ಕರ, ಕಲ್ಲಪ್ಪ ಸಂಗೊಳ್ಳಿ, ಸುರೇಖಾ ಅಂಬಡಗಟ್ಟಿ, ಪಾಂಡುರಂಗ ಮಿಟಗಾರ, ದಶರಥ ಪಾಟೀಲ, ಮೈಕಲ್ ಫರ್ನಾಂಡಿಸ್, ಸಂಗಮೇಶ ಪಾಟೀಲ, ಬಸಪ್ಪ ಸತ್ಯಣ್ಣವರ, ಸರೋಜಾ ಬಾಗೇವಾಡಿ ಅವರನ್ನು ಸತ್ಕರಿಸಲಾಯಿತು. ಅನ್ನಪೂರ್ಣ ಪಾಟೀಲ ನಿರೂಪಿಸಿದರು. ಶೋಭಾ ಬೆಳಗಾವಿ ವಂದಿಸಿದರು.