ಸಾರಾಂಶ
ದಾಬಸ್‌ಪೇಟೆ: ರಾಜ್ಯ ಕಬ್ಬು ಬೆಳೆಗಾರರ ಸಂಘ ಕರೆ ನೀಡಿದ್ದ ರಾಜ್ಯ ವ್ಯಾಪಿ ಬಂದ್ ಗೆ ದಾಬಸ್‌ಪೇಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ದಾಬಸ್‌ಪೇಟೆ: ರಾಜ್ಯ ಕಬ್ಬು ಬೆಳೆಗಾರರ ಸಂಘ ಕರೆ ನೀಡಿದ್ದ ರಾಜ್ಯ ವ್ಯಾಪಿ ಬಂದ್ ಗೆ ದಾಬಸ್‌ಪೇಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ರೈತ ಸಂಘಟನೆಗಳ ತಾಲೂಕು ಒಕ್ಕೂಟ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣಗಳ ಸಹಯೋಗದಲ್ಲಿ ಬೆಳಗ್ಗೆ 11 ಗಂಟೆಗೆ 20 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ-೪೮ ತಡೆದು, ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಉದ್ದಾನೇಶ್ವರ ವೃತ್ತದಲ್ಲಿ ಭಿತ್ತಿ ಫಲಕ ಹಿಡಿದು ಪ್ರತಿಭಟನೆ ನಡೆಸಿದರು.ತಾಲೂಕು ರೈತ ಸಂಘಟನೆಯ ಒಕ್ಕೂಟದ ಅಧ್ಯಕ್ಷ ರಾಜೇಶ್ ಮಾಧ್ಯಮಗಳೊಂದಿಗೆ ಮಾತನಾಡಿ, ದೆಹಲಿಯ ರಾಜಸ್ಥಾನ ಗಡಿಯಲ್ಲಿನ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ, ಪ್ರಧಾನಿಯವರು ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ದೆಹಲಿ ಪೊಲೀಸರು ಲಾಠಿ ಪ್ರಹಾರ, ರಬ್ಬರ್ ಬುಲೆಟ್, ಅಶ್ರುವಾಯು ಸಿಡಿಸಿ ರೈತರನ್ನು ಸಾಮೂಹಿಕವಾಗಿ ಬಂಧಿಸಿರುವುದನ್ನು ಖಂಡಿಸಿ ಸಂಘಟನೆಯ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಜೊತೆಗೂಡಿ ಪ್ರತಿಭಟನೆ ನಡೆಸಿದ್ದೇವೆ ಎಂದರು.
ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಮೂರ್ತಿ, ಉಪಾಧ್ಯಕ್ಷ ಎನ್.ಶಿವಕುಮಾರ್, ಜಗದೀಶ್, ಸಂಘಟನಾ ಕಾರ್ಯದರ್ಶಿ ರವೀಂದ್ರ ಕುಮಾರ್, ಗೌರಾವಾಧ್ಯಕ್ಷ ಕುಂಬಿ ನರಸಿಂಹಯ್ಯ, ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಮಾಚನಹಳ್ಳಿ ರಾಘವೇಂದ್ರ, ಸೋಂಪುರ ಹೋಬಳಿ ಅಧ್ಯಕ್ಷ ಬಿಲ್ಲಿನಕೋಟೆ ವಿನೋದ್, ಪದಾಧಿಕಾರಿಗಳಾದ ಆನಂದ್ ಕುಮಾರ್, ಶಿವಣ್ಣ, ಸೈಯದ್ ಚಾಂದ್ ಪಾಷಾ, ಲಾಲು, ದಾದಾಪೀರ್, ಹನುಮಂತರಾಯಪ್ಪ, ಶೀಲಾ, ಸಿದ್ದಲಿಂಗಪ್ಪ ಇತರರಿದ್ದರು.ಫೋಟೋ 10 :ದಾಬಸ್‌ಪೇಟೆಯಲ್ಲಿ ರೈತ ಸಂಘಟನೆ, ಕರವೇ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ರೈತ ವಿರೋಧಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಪೋಟೋ 11 : ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.