ಸಾರಾಂಶ
ಹಾನಗಲ್ಲ: ವಿದ್ಯಾರ್ಥಿ ಜೀವನ ಸಾಮಾಜಿಕ ಮೌಲ್ಯಗಳನ್ನೊಳಗೊಂಡು ಸ್ಪರ್ಧಾತ್ಮಕ ಕಾಲಕ್ಕೆ ಬೇಕಾಗುವ ವಿದ್ಯಾರ್ಜನೆ ಮೂಲಕ ಯಶಸ್ವಿಯಾಗಲು ಸಾಧ್ಯ ಎಂಬ ಅರಿವು ಪ್ರತಿ ವಿದ್ಯಾರ್ಥಿಯಲ್ಲಿರಬೇಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ. ಖ್ವಾಜಾಮೊಹಿದ್ದೀನ ತಿಳಿಸಿದರು.ಇಲ್ಲಿನ ಕೆಎಲ್‌ಇ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಪರಿಶ್ರಮವಿಲ್ಲದೆ ಫಲ ಸಿಗಲಾರದು ಎಂಬ ಅರಿವು ವಿದ್ಯಾರ್ಥಿಗಳಲ್ಲಿರಲಿ. ಸಮಯದ ಅರಿವು ಬೇಕು. ಕಾಲ ಕಳೆದರೆ ಮತ್ತೆ ಬಾರದು. ಪ್ರತಿ ಕ್ಷಣವನ್ನೂ ಸದುಪಯೋಗ ಮಾಡಿಕೊಳ್ಳುವ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಬೇಕು. ಓದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಜ್ಞಾನ ದಾಹವಿದ್ದರೆ ಅಜ್ಞಾನ ದೂರವಾಗಿ ಬದುಕು ಹಸನುಗೊಳ್ಳಬಲ್ಲದು. ಧನಾತ್ಮಕ ಚಿಂತನೆ ಇರಲಿ. ಶಿಸ್ತು, ಸಂಯಮ ಬಲು ಮುಖ್ಯ ಎಂದರು.ಪ್ರಾಚಾರ್ಯ ದಿವಾಕರ ಕಮ್ಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ದಿನಚರಿ ಬೇಕು. ಸಮಯ ಪ್ರಜ್ಞೆ ಬೇಕು. ನಿರ್ದಿಷ್ಟ ಗುರಿ ಇರಲಿ. ನಾಳೆಗಾಗಿ ನಮ್ಮ ಬದುಕು ಕಟ್ಟಿಕೊಳ್ಳಲು ನಮ್ಮದೇ ಪ್ರಯತ್ನವಿರಲಿ. ನಮ್ಮ ಪಾಲಕರು ನಮಗಾಗಿ ಕಟ್ಟಿದ ಕನಸುಗಳು ನನಸಾಗಲು ಸಾರ್ಥಕವಾದ ಓದು ಬೇಕು ಎಂದರು.ಹಿರಿಯ ಉಪನ್ಯಾಸಕರಾದ ಶ್ರೀಧರ ಉರಣಕರ, ಅಜಿತ್‌ಕುಮಾರ ಕೆ.ಎಸ್., ಬಿ.ಆರ್. ಮಾಯನಗೌಡರ, ಮಂಜುನಾಥ ಹಡಪದ, ಎಸ್.ವಿ. ಸಾವಳಗಿಮಠ, ಬಿ.ಕೆ. ಕುನ್ನೂರ, ಸೋಮನಾಥ ಪೂಜಾರ, ಚೈತ್ರಾ ಮುದುಕಮ್ಮನವರ, ನಾಗವೇಣಿ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ರವಿ ರಾಠೋಡ, ಸಾನ್ವಿ ಉರಣಕರ, ಪ್ರೀತಮ್ ಕಠಾರಿ, ಪಲ್ಲವಿ ಭದ್ರಾವತಿ ವೇದಿಕೆಯಲ್ಲಿದ್ದರು.
ಲೀಲಾ ದೊಡ್ಡಮನಿ ಸ್ವಾಗತಿಸಿದರು. ಧನುಶ್ರೀ ರಿತ್ತಿ, ಖುಷಿ ಜವಳಿ ನಿರೂಪಿಸಿದರು. ಸಂಗೀತ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))