ಸಾರಾಂಶ
ಆಹಾರ ಪದಾರ್ಥ, ಕಸೂತಿ ಕಲೆ, ಖಾದ್ಯ, ಉಡುಪು ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಹಿಳೆಯರ ಕಲೆಗೆ ಪ್ರೋತ್ಸಾಹ ಕೊಡಬೇಕಿದೆ. ೨೫೦೦ಕ್ಕೂ ಅಧಿಕ ಸ್ವಸಹಾಯ ಸಂಘಗಳು ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸಾಲಕ್ಕೆ ಸಬ್ಸಿಡಿ ದೊರಕಿದರೆ ಮತ್ತಷ್ಟು ಸಂಘಗಳ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ.
ಯಲಬುರ್ಗಾ: ಮಹಿಳಾ ಸ್ವಸಹಾಯ ಸಂಘಗಳಿಂದ ಮಹಿಳೆಯರು ಸಾಲ ಪಡೆದು ಸ್ವ-ಉದ್ಯೋಗ ಮಾಡಬೇಕು. ಈ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ವಾರದ ಸಂತೆಯಲ್ಲಿ ತಾಪಂನಿಂದ ಶನಿವಾರ ಆಯೋಜಿಸಿದ್ದ ಮಾಸಿಕ ಸಂಜೀವಿನಿ ಸಂತೆಯಲ್ಲಿ ಮಹಿಳಾ ಸ್ವಸಹಾಯ ಸಂಘದವರು ಉತ್ಪಾದಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಬೇಕು. ಜತೆಗೆ ಎಲ್ಲ ರಂಗದಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.ಆಹಾರ ಪದಾರ್ಥ, ಕಸೂತಿ ಕಲೆ, ಖಾದ್ಯ, ಉಡುಪು ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಹಿಳೆಯರ ಕಲೆಗೆ ಪ್ರೋತ್ಸಾಹ ಕೊಡಬೇಕಿದೆ. ೨೫೦೦ಕ್ಕೂ ಅಧಿಕ ಸ್ವಸಹಾಯ ಸಂಘಗಳು ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸಾಲಕ್ಕೆ ಸಬ್ಸಿಡಿ ದೊರಕಿದರೆ ಮತ್ತಷ್ಟು ಸಂಘಗಳ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ಈ ಕುರಿತು ಶಾಸಕ ಬಸವರಾಜ ರಾಯರಡ್ಡಿ ಗಮನಕ್ಕೆ ತಂದು ಸ್ವಸಹಾಯ ಸಂಘಗಳ ಉತ್ತೇಜನಕ್ಕಾಗಿ ಸರ್ಕಾರದಿಂದ ಸಬ್ಸಿಡಿ ದೊರೆಯುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎನ್‌ಆರ್‌ಎಲ್‌ಎಂ ತಾಲೂಕು ಸಂಯೋಜಕ ಉದಯಕುಮಾರ, ಸಿಬ್ಬಂದಿ ಶರಣಪ್ಪ ಮಾದಿನೂರ, ಪ್ರವೀಣ ಕೊರಡಕೇರಾ, ಜಾಕೀರ್ ಹುಸೇನ, ತಾಲೂಕಿನ ನಾನಾ ಒಕ್ಕೂಟಗಳ ಮಹಿಳೆಯರು ಇದ್ದರು.