ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯ ಸಹಕಾರಿ: ಜಿಲ್ಲಾಧಿಕಾರಿ

| Published : Mar 15 2024, 01:15 AM IST

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯ ಸಹಕಾರಿ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಸುಂದರ ಗಾಂಧಿ ಭವನ ನಿರ್ಮಿಸಿದೆ. ಗಾಂಧಿ ಭವನದಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ಇಲ್ಲಿ ಗ್ರಂಥಾಲಯ ಶಾಖೆ ಸ್ಥಾಪಿಸುವ ಮೂಲಕ ಗಾಂಧಿ ಕುರಿತ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು, ಕಥೆ, ಕಾದಂಬರಿ ಸೇರಿ ಪಠ್ಯಕ್ರಮದ ಪುಸ್ತಕಗಳ ಇಲ್ಲಿನ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾತ್ಮ ಗಾಂಧೀಜಿ ಚಿಂತನೆ, ಆದರ್ಶಗಳ ತಿಳಿಸುವುದರೊಂದಿಗೆ ಇತಿಹಾಸ, ಸಾಹಿತ್ಯಾತ್ಮಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಪುಸ್ತಕವುಳ್ಳ ಗ್ರಂಥಾಲಯವನ್ನು ಗಾಂಧಿ ಭವನದಲ್ಲಿ ಸ್ಥಾಪನೆ ಮಾಡುವುದರೊಂದಿಗೆ ಸಾರ್ವಜನಿಕರು, ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ನಗರದ ಹೊರ ವಲಯದಲ್ಲಿರುವ ರಾಮನಗರದಲ್ಲಿ ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಾಣ ಮಾಡಿರುವ ಗಾಂಧಿ ಭವನದಲ್ಲಿ ಗ್ರಂಥಾಲಯ ಇಲಾಖೆಯಿಂದ ನಗರ ಗ್ರಂಥಾಲಯ ಶಾಖೆ ಪ್ರಾರಂಭಿಸಿ ಮಾತನಾಡಿ ಗಾಂಧಿ ಚಿಂತನೆಗಳ ಜನರು ಮತ್ತು ಯುವ ಜನರಲ್ಲಿ ಬೆಳೆಸಬೇಕೆಂದು ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸಲು ಉದ್ದೇಶಿಸಿ ದಾವಣಗೆರೆಯಲ್ಲಿ ಸುಂದರ ಗಾಂಧಿ ಭವನ ನಿರ್ಮಿಸಿದೆ. ಗಾಂಧಿ ಭವನದಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ಇಲ್ಲಿ ಗ್ರಂಥಾಲಯ ಶಾಖೆ ಸ್ಥಾಪಿಸುವ ಮೂಲಕ ಗಾಂಧಿ ಕುರಿತ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು, ಕಥೆ, ಕಾದಂಬರಿ ಸೇರಿ ಪಠ್ಯಕ್ರಮದ ಪುಸ್ತಕಗಳ ಇಲ್ಲಿನ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದೆ. ಮತ್ತು ದಿನನಿತ್ಯ ಬರುವ ರಾಜ್ಯ ಮಟ್ಟದ ಪ್ರಮುಖ ದಿನಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳು ಇಲ್ಲಿ ಓದುಗರಿಗೆ ಲಭಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಪಿ.ಆರ್.ತಿಪ್ಪೇಸ್ವಾಮಿ, ಅವರಗೆರೆ ರುದ್ರಮುನಿ, ಐಗೂರು ತಿಮ್ಮಣ್ಣ, ಹನುಮನಹಳ್ಳಿ ರಾಜು, ಪಿ.ಆಂಜಿನಪ್ಪ, ಬಸವರಾಜು, ಉಷಾರಾಣಿ, ನೀಲಕಂಠಪ್ಪ ಉಪಸ್ಥಿತರಿದ್ದರು.