ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ನಲಿಗಾನಹಳ್ಳಿ ಗ್ರಾಪಂಗೆ ಚುನಾವಣೆ ನಡೆದಿದ್ದು ಗ್ರಾಪಂನ ನೂತನ ಅಧ್ಯಕ್ಷರಾಗಿ ಕೈ ಬೆಂಬಲಿತ ಲಿಂಗನಾಯಕ ಆಯ್ಕೆಯಾಗಿದ್ದಾರೆ.ಈ ಹಿಂದಿನ ಗ್ರಾಪಂ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯ ಆದೇಶನ್ವಯ ಶನಿವಾರ ಚುನಾವಣೆ ನಡೆದಿದ್ದು 15ಮಂದಿ ಗ್ರಾಪಂ ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ 6 ಹಾಗೂ ಬಿಜೆಪಿ ಬೆಂಬಲಿತ 3ಮಂದಿ ಸೇರಿ ಒಟ್ಟು 09 ಮಂದಿ ಸದಸ್ಯರು ಮತ ಚಲಾಯಿಸಿd ಹಿನ್ನಲೆಯಲ್ಲಿ ಗುಂಡ್ಲಹಳ್ಳಿ ಗ್ರಾಮದ ಆರ್.ಲಿಂಗನಾಯಕ ಜಯ ಸಾಧಿಸಿದ್ದಾರೆ. ಇನ್ನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಮಾಂಜಿನಪ್ಪ 6 ಮತಗಳಿಸುವ ಮೂಲಕ ಪರಾಜಿತರಾಗಿರುವುದಾಗಿ ಚುನಾವಣಾಧಿಕಾರಿ ಡಿ.ಎನ್.ವರದರಾಜು ತಿಳಿಸಿದ್ದಾರೆ.
ಗ್ರಾಪಂನ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಬಳಿಕ ಅಧ್ಯಕ್ಷ ಲಿಂಗನಾಯಕ ಮಾತನಾಡಿ, ಗ್ರಾಪಂ ಅಧ್ಯಕ್ಷರ ಆಯ್ಕೆಗೆ ಸಹಕರಿಸಿದ ಮಾಜಿ ಶಾಸಕರಾದ ವೆಂಕಟರಮಣಪ್ಪ ಮತ್ತು ಶಾಸಕರಾದ ಎಚ್.ವಿ.ವೆಂಕಟೇಶ್ ಇತರೇ ಗಣ್ಯರು ಹಾಗೂ ಗ್ರಾಪಂನ ಎಲ್ಲಾ ಸದಸ್ಯರಿಗೆ ಅಭಾರಿಯಾಗಿದ್ದೇನೆ.ಪಕ್ಷಾತೀತವಾಗಿ ಕೆಲಸ ನಿರ್ವಹಿಸಲಿದ್ದು ಗ್ರಾಪಂನ ಎಲ್ಲಾ ಸದಸ್ಯರ ಸಲಹೆ ಹಾಗೂ ಮಾರ್ಗದರ್ಶನದ ಮೇರೆಗೆಗ್ರಾಪಂ ವ್ಯಾಪ್ತಿಯ ಅಭಿವೃದ್ದಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡುವ ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಶಶಾಂಕ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ 10 ಗ್ರಾಮಗಳಿಗೂ ಅನುದಾನ ಕಲ್ಪಿಸುವ ಮೂಲಕ ಪ್ರಗತಿಗೆ ಸಹಕರಿಸಬೇಕು. ಸ್ಥಳೀಯ ಮೂಲಭೂತ ಸಮಸ್ಯೆ ನಿವಾರಣೆ, ಕುಡಿಯುವ ನೀರು, ಶಾಲಾ ಕಾಲೇಜು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ಸೇರಿದಂತೆ ಇತರೆ ಪ್ರಗತಿ ಕಾರ್ಯಗಳಿಗೆ ಆದ್ಯತೆ ನೀಡಿ ಕೆಲಸ ಮಾಡುವ ವಿಶ್ವಾಸ ಹೊಂದಲಾಗಿದೆ. ಅದೇ ರೀತಿ ನೂತನ ಅಧ್ಯಕ್ಷರು ಗ್ರಾಮಗಳ ಪ್ರಗತಿಗೆ ವಿಶೇಷ ಒತ್ತು ನೀಡುವಂತೆ ಸಲಹೆ ನೀಡಿದರು.ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋವಿಂದಪ್ಪ ಹಾಗೂ ಗ್ರಾಪಂ ಉಪಾಧ್ಯಕ್ಷೆ ದುಗ್ಗಮ್ಮ ನಾಗಯ್ಯ,ಗ್ರಾಪಂನ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ವರಲು,ಸದಸ್ಯರಾದ ದುಗ್ಗಪ್ಪ,ಹನುಮಂತರಾವ್, ಕಾಂತಮ್ಮ,ಅಂಜಮ್ಮ ,ಅಂಬುಜಾಕ್ಷಿ, ಜಯಮ್ಮ ,ಆನಂದ್, ರಾಮಾಂಜಿ, ಮಂಜುನಾಥ್, ಉಮಾದೇವಿ, ನಿಂಗಮ್ಮ, ದುಗ್ಗಮ್ಮ ಇತರೆ ಅನೇಕ ಮಂದಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.