ಸ್ವಾನುಭವದಿಂದ ಹುಟ್ಟಿದ ಸಾಹಿತ್ಯ ಬಹುಕಾಲ ಬಾಳುತ್ತದೆ: ಸಾಹಿತಿ ಶಾಂತಾರಾಮ ನಾಯಕ

| Published : Dec 03 2024, 12:31 AM IST

ಸ್ವಾನುಭವದಿಂದ ಹುಟ್ಟಿದ ಸಾಹಿತ್ಯ ಬಹುಕಾಲ ಬಾಳುತ್ತದೆ: ಸಾಹಿತಿ ಶಾಂತಾರಾಮ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ ಸೃಷ್ಟಿಯಲ್ಲಿ ಕಲ್ಪನೆಗೆ ಅವಕಾಶವಿದ್ದರೂ ಅನುಭವದ ಮೂಸೆಯಲ್ಲಿ ರೂಪುಗೊಂಡ ಸಾಹಿತ್ಯ ಜನಮಾನಸವನ್ನು ಬೇಗನೆ ತಲುಪುತ್ತದೆ ಎಂದು ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹೇಳಿದರು.

ಅಂಕೋಲಾ: ಬದುಕಿನ ಅನುಭವದಿಂದ ಹುಟ್ಟಿದ ಸಾಹಿತ್ಯ ಜನರ ಮೆಚ್ಚುಗೆ ಪಡೆಯುತ್ತಿದೆ. ಅಲ್ಲದೇ ಸಾಹಿತ್ಯ ಲೋಕದಲ್ಲಿ ಸ್ಥಿರವಾಗಿ ಉಳಿಯುತ್ತದೆ. ಸಾಹಿತ್ಯ ಸೃಷ್ಟಿಯಲ್ಲಿ ಕಲ್ಪನೆಗೆ ಅವಕಾಶವಿದ್ದರೂ ಅನುಭವದ ಮೂಸೆಯಲ್ಲಿ ರೂಪುಗೊಂಡ ಸಾಹಿತ್ಯ ಜನಮಾನಸವನ್ನು ಬೇಗನೆ ತಲುಪುತ್ತದೆ ಎಂದು ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹೇಳಿದರು.

ಅಂಕೋಲೆಯ ಕರ್ನಾಟಕ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಜನಾರ್ದನ ನಾಯಕರ ‘ಬದುಕಿನ ಕಥೆಗಳು’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕತೆಗಾರ ಪ್ರೋ. ರಾಮಕೃಷ್ಣ ಗುಂದಿ ಮಾತನಾಡಿ, ಜನಾರ್ದನ ನಾಯಕರ ಕಥಾಸಂಕಲನದ ಬಹುತೇಕ ಕಥೆಗಳು ನೈಜ ಘಟನೆಗಳನ್ನು ಆಧರಿಸಿದ್ದು ನಾಯಕರ ವಿಶಿಷ್ಟ ನಿರೂಪಣೆಯಿಂದ ಓದುಗರನ್ನು ಆಕರ್ಷಿಸುತ್ತಿದೆ ಎಂದರು.

ಲೇಖಕ ಜನಾರ್ದನ ನಾಯಕ ಮಾತನಾಡಿ, ನನ್ನ ಕೃತಿ ಕರ್ನಾಟಕ ಸಂಘದಲ್ಲಿ ಬಿಡುಗಡೆಯಾಗುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಮಹಾಂತೇಶ ರೇವಡಿ ಮಾತನಾಡಿ, ಜನಾರ್ದನ ನಾಯಕರ ಕತೆಗಳಲ್ಲಿ ಸಾಮಾಜಿಕ ಕಾಳಜಿ, ಮಾನವೀಯತೆ ಕಾಣಬಹುದು ಎಂದರು.ಇದೇ ಸಂದರ್ಭದಲ್ಲಿ ಶಾಂತಾರಾಮ ನಾಯಕ, ರಾಮಕೃಷ್ಣ ಗುಂದಿ, ಮಹಾಂತೇಶ ರೇವಡಿ, ಜನಾರ್ದನ ನಾಯಕ ಅವರನ್ನು ಗೌರವಿಸಲಾಯಿತು.

ನಿವೃತ್ತ ಶಿಕ್ಷಕ ಜಿ.ಆರ್. ನಾಯಕ ಪ್ರಾರ್ಥಿಸಿದರು. ಪ್ರೊ. ಮಂಜುನಾಥ ಇಟಗಿ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಎಸ್.ಆರ್. ನಾಯಕ, ಅತಿಥಿಗಳನ್ನು ಪರಿಚಯಿಸಿದರು. ಪ್ರಾಚಾರ್ಯ ವಿನಾಯಕ ಹೆಗಡೆ ಕೃತಿಯ ಅವಲೋಕನ ಮಾಡಿದರು. ಡಾ. ಪುಷ್ಪಾ ನಾಯ್ಕ ನಿರೂಪಿಸಿದರು. ಕಾರ್ಯದರ್ಶಿ ಗೋವಿಂದ ನಾಯಕ ವಂದಿಸಿದರು.