ಶ್ರೀ ಕಟ್ಟೆಹೊಳೆಯಮ್ಮ ದೇವಿಯವರ ಬ್ರಹ್ಮರಥದ ಗದ್ದುಗೆ ಲೋಕಾರ್ಪಣೆ

| Published : Feb 14 2024, 02:17 AM IST

ಶ್ರೀ ಕಟ್ಟೆಹೊಳೆಯಮ್ಮ ದೇವಿಯವರ ಬ್ರಹ್ಮರಥದ ಗದ್ದುಗೆ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದ ಶ್ರೀ ಕಟ್ಟೆಹೊಳೆಯಮ್ಮ ದೇವಿಯವರ ಬ್ರಹ್ಮರಥದ ಗದ್ದಿಗೆ, ನೂತನ ರಥಗದ್ದಿಗೆ ಹಾಗೂ ಕಚೇರಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಕನ್ನಡ್ರಭ ವಾರ್ತೆ, ಕಡೂರು

ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದ ಶ್ರೀ ಕಟ್ಟೆಹೊಳೆಯಮ್ಮ ದೇವಿಯವರ ಬ್ರಹ್ಮರಥದ ಗದ್ದಿಗೆ, ನೂತನ ರಥಗದ್ದಿಗೆ ಹಾಗೂ ಕಚೇರಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಶ್ರೀ ಕಟ್ಟೆಹೊಳೆಯಮ್ಮ ದೇವಿಯ 14 ಗ್ರಾಮಗಳ ಒಕ್ಕಲುಗಳು ಮತ್ತು ಗುಡಿ ಗೌಡರುಗಳ ಉಪಸ್ಥಿತಿಯಲ್ಲಿ ಅಮ್ಮನವರಿಗೆ ವಿಶೇಷ ಪೂಜೆಗಳು ಸಲ್ಲಿಕೆ ಆದವು. ಸುತ್ತ ಮುತ್ತಲ ಗ್ರಾಮಗಳ ವಿವಿಧ ದೇವರು ಹಾಗು ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸುವ ಮುಖೇನ ಕಾರ್ಯಕ್ರಮಕ್ಕೆ ಕಳೆಗಟ್ಟಿತ್ತು ಹಾಗು ಭಕ್ತರು ಶ್ರೀಅಮ್ಮನವರ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಕೃತಾರ್ಥರಾದರು. ಇದೇ ಸಂದರ್ಭದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಬಿ.ಹನುಮಂತಪ್ಪ ಮಾತನಾಡಿ, ದೇವಾಲಯದ ಸಮಿತಿಯಿಂದ ದೇವಸ್ಥಾನದ ಅಗತ್ಯ ಕಾರ್ಯ ಮಾಡಲಾಗುತ್ತಿದೆ. ಇನ್ನೂ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಅವುಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಭಕ್ತರು ತಮ್ಮ ಕೈಲಾದ ತನು, ಮನ ಮತ್ತು ಧನದ ಸಹಕಾರ ನೀಡುವಂತೆ ಮನವಿ ಮಾಡಿದರು. ಸಮಿತಿ ಪದಾಧಿಕಾರಿ ಅಂಗಡಿ ಲೋಕೇಶ್ ಮಾತನಾಡಿ, ಶ್ರೀ ಅಮ್ಮನವರ ದೇವಾಲಯದ ಅಭಿವೃದ್ಧಿ ಕಾರ್ಯಗಳು ಅಚ್ಚು ಕಟ್ಟಾಗಿ ನಡೆಯಲು ಎಲ್ಲರ ಜವಾಬ್ದಾರಿ ಅತಿ ಮುಖ್ಯವಾಗಿದೆ. ಎಲ್ಲ ಕಾರ್ಯಗಳಿಗೆ ಭಕ್ತರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಕೋರಿದರು. ಕಾರ್ಯಕ್ರಮದಲ್ಲಿ ದೇವಾಲಯದ ಸಮಿತಿ ಕಾರ್ಯದರ್ಶಿ ಮಹೇಶ್ವರಪ್ಪ, ಕುರುಬಗೆರೆ ಮಲ್ಲೇಶಪ್ಪ, ಎನ್.ಜಿ.ಕೊಪ್ಪಲು ಲಚ್ಚಾನಾಯ್ಕ,ಅಂಗಡಿ ಲೋಕೇಶ್, ದೊಡ್ಡಪಟ್ಟಣಗೆರೆ ಅಣ್ಣಯ್ಯ, ಎರೇಹಳ್ಳಿ ಜಿ‌.ತಿಮ್ಮರಾಯಪ್ಪ , ಜಿಗಣೇಹಳ್ಳಿ ಅಜ್ಜಯ್ಯ, ಬಸಪ್ಪ ಮತ್ತಿತರರು ಇದ್ದರು.

13ಕೆಕೆಡಿಯು1: ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆಯ. ಗ್ರಾಮ ದೇವತೆ ಶ್ರೀ ಕಟ್ಟೆಹೊಳೆಯಮ್ಮ ದೇವಿಯವರ ಬ್ರಹ್ಮರಥದ ಗದ್ದಿಗೆ ,ನೂತನ ರಥಗದ್ದಿಗೆ ಹಾಗೂ ಕಚೇರಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಕಟ್ಟೆಹೊಳೆಯಮ್ಮ ದೇವಿಯ 14 ಗ್ರಾಮಗಳ ಒಕ್ಕಲುಗಳು ಮತ್ತು ಗುಡಿ ಗೌಡರುಗಳು ಉಪಸ್ಥಿತಿರಿದ್ದರು.