ಸಾರಾಂಶ
ಧರ್ಮಸ್ಥಳ ಗ್ರಾಮ ಕೇಸ್‌ನ ಅನಾಮಿಕ ಮುಸುಕುಧಾರಿಯ ಸ್ನೇಹಿತ ರಾಜು ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ, ಅನಾಮಿಕನ ಕುಟುಂಬದ ವಿವರ ಸಂಗ್ರಹಿಸಿದರು.
ಮದ್ದೂರು : ಧರ್ಮಸ್ಥಳ ಗ್ರಾಮ ಕೇಸ್‌ನ ಅನಾಮಿಕ ಮುಸುಕುಧಾರಿಯ ಸ್ನೇಹಿತ ರಾಜು ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ, ಅನಾಮಿಕನ ಕುಟುಂಬದ ವಿವರ ಸಂಗ್ರಹಿಸಿದರು.
ಎಸ್ಐಟಿ ಡಿವೈಎಸ್ಪಿ ಲೋಕೇಶ್, ಇಬ್ಬರು ಮಹಿಳಾ ಕಾನ್‌ಸ್ಟೇಬಲ್ ಸೇರಿ ಒಟ್ಟು ಆರು ಜನರ ಎಸ್ಐಟಿ ತಂಡ ಕೆ.ಹೊನ್ನಲಗೆರೆಯ ಆರ್.ಕೆ.ವಿದ್ಯಾ ಸಂಸ್ಥೆ ಆವರಣದ ಪಕ್ಕದ ನಿವಾಸದಲ್ಲಿರುವ ಅನಾಮಿಕ ಮುಸುಕುಧಾರಿ ಸ್ನೇಹಿತ ರಾಜುನನ್ನು ಸುಮಾರು ಅರ್ಧ ತಾಸು ವಿಚಾರಣೆಗೆ ಒಳಪಡಿಸಿತು.
ವಿಚಾರಣೆ ವೇಳೆ ಅನಾಮಿಕ ಮುಸುಕುಧಾರಿಯ ಕುಟುಂಬದ ಹೆಣ್ಣುಮಕ್ಕಳನ್ನು ಎಲ್ಲಿಗೆ ವಿವಾಹ ಮಾಡಿಕೊಡಲಾಗಿದೆ. ಈಗ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ರಾಜುನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಅನಾಮಿಕ ವ್ಯಕ್ತಿಯ ನಾಲ್ಕು ಕುಟುಂಬಗಳು ಒಟ್ಟಿಗೆ ಇದ್ದವು. ನಾನು ಮಾತ್ರ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೆ ಎಂದು ರಾಜು ಅವರು ಎಸ್ಐಟಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ನಂತರ, ತಂಡ ಅಲ್ಲಿಂದ ನಿರ್ಗಮಿಸಿದೆ.