ಕಾಡಾನೆ ದಾಳಿಗೆ ಮಾವಿನ ಮರಗಳು ನಾಶ

| Published : Mar 14 2024, 02:04 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಮೆಣಸಿಗನಹಳ್ಳಿ ರೈತರೊಬ್ಬರ ತೋಟದ ಮೇಲೆ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಸುಮಾರು ೫೦ಕ್ಕೂ ಮಾವಿನ ಮರಗಳನ್ನು ನಾಶಪಡಿಸಿವೆ.

ಚನ್ನಪಟ್ಟಣ: ತಾಲೂಕಿನ ಮೆಣಸಿಗನಹಳ್ಳಿ ರೈತರೊಬ್ಬರ ತೋಟದ ಮೇಲೆ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಸುಮಾರು ೫೦ಕ್ಕೂ ಮಾವಿನ ಮರಗಳನ್ನು ನಾಶಪಡಿಸಿವೆ.

ಗ್ರಾಮದ ರೈತ ದೇವರಾಜು ಕೆಲ ವರ್ಷಗಳ ಹಿಂದೆ ಮಾವಿನ ಮರಗಳನ್ನು ನೆಟ್ಟು ಪೋಷಣೆ ಮಾಡಿದ್ದರು. ಕಳೆದ ರಾತ್ರಿ ಮಾವಿನ ತೋಟದ ಮೇಲೆ ದಾಳಿ ನಡೆಸಿದ ಆನೆಗಳ ಹಿಂಡು ಸುಮಾರು ೫೦ಕ್ಕೂ ಫಸಲು ತುಂಬಿದ ಮಾವಿನ ಮರಗಳನ್ನು ಪಡಿಸಿದ್ದು, ರೈತ ಕಂಗಾಲಾಗಿದ್ದಾನೆ. ಇನ್ನೇನು ಮಾವಿನ ಫಸಲು ಕೈಗೆ ಬರುವ ನಿರೀಕ್ಷೆಯಲ್ಲಿದ್ದ ಸಮಯದಲ್ಲಿ ಆನೆಗಳು ಮರಗಳನ್ನು ನಾಶ ಮಾಡಿವೆ. ವಿರೂಪಾಕ್ಷಪುರ ಹೋಬಳಿ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆಗಳ ದಾಳಿ ಸಾಮಾನ್ಯವೆನಿಸಿದೆ. ಪ್ರತಿದಿನ ರೈತರ ಜಮೀನಿಗೆ ನುಗ್ಗಿ ಆನೆಗಳು ದಾಂಗುಡಿ ಇಡುತ್ತಿವೆ.

ಸರ್ಕಾರ ಹಾಗೂ ಅರಣ್ಯ ಇಲಾಖೆ ಕಾಡಾನೆ ದಾಳಿ ತಡೆಯುವಲ್ಲಿ ವಿಫಲವಾಗಿದೆ. ಕಾಡಾನೆ ದಾಳಿ ವೇಳೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಟೋ೧೩ಸಿಪಿಟಿ೧:

ಚನ್ನಪಟ್ಟಣದ ಮೆಣಸಿಗನಹಳ್ಳಿಯಲ್ಲಿ ಕಾಡಾನೆಗಳ ದಾಳಿಗೆ ಮಾವಿನ ಮರಗಳು ನಾಶವಾಗಿದೆ.