ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ರಥಸಪ್ತಮಿ ಅಂಗವಾಗಿ ಚಾಮರಾಜನಗರ ಜೆಎಸ್ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ಬಾರಿ ೧೪ನೇ ವರ್ಷದ ಸಾಮೂಹಿಕ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ದಾನೇಶ್ವರಿ ಚಾಲನೆ ನೀಡಿದರು.
ಬಳಿಕೆ ಮಾತನಾಡಿದ ರಾಜಯೋಗಿನಿ ದಾನೇಶ್ವರಿಜೀ, ರಥಸಪ್ತಮಿಯ ದಿನ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದು, ಎಲ್ಲರೂ ಆರೋಗ್ಯವಂತ ಜೀವನಕ್ಕೆ ಯೋಗಭ್ಯಾಸ ಮಾಡುವುದು ಸೂಕ್ತವಾಗಿದೆ. ವಿಶ್ವಕ್ಕೆ ಯೋಗ ಪರಿಚಯಿಸಿದ್ದ ಭಾರತ ಎಂಬುವುದು ಹೆಮ್ಮೆ. ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಯೋಗಭ್ಯಾಸ ಮಾಡುವುದರಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗಿದೆ. ಇಂಥ ಯೋಗವನ್ನು ಯುವ ಪೀಳಿಗೆ ಅಭ್ಯಾಸದಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಸಾಧ್ಯವಿದೆ ಎಂದರು.ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷ ಡಿ.ಪಿ.ಪ್ರಕಾಶ ಮಾತನಾಡಿ, ಪ್ರತಿದಿನ ಲವಲವಿಕೆ ಮತ್ತು ಚೈತನ್ಯದಿಂದ ಇರಬೇಕಾದರೆ ಯೋಗಭ್ಯಾಸ ಅವಶ್ಯಕ ಎಂದರು. ವಕೀಲ ಎ.ಎಸ್.ಸಿದ್ದರಾಜು ಮಾತನಾಡಿ, ಬಸವಣ್ಣ ವಚನವನ್ನು ಉಲ್ಲೇಖಿಸುವ ಮೂಲಕ ಕಾನೂನಿನ ಅರಿವು ಮೂಡಿಸಿ, ನಿತ್ಯ ಯೋಗಭ್ಯಾಸ ಮಾಡಿದರೆ ತಮ್ಮ ದೈನಂದಿನ ಎಲ್ಲಾ ಕೆಲಸ ಕಾರ್ಯಗಳನ್ನು ಲವಲವಿಕೆಯಿಂದ ನಡೆಯುತ್ತಿದೆ ತಿಳಿಸಿದರು. ಸಮಿತಿಯ ಪ್ರಧಾನ ಸಂಚಾಲಕ ಯೋಗಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯು ಸಂಸ್ಕಾರ ಸಂಘಟನೆ ಮತ್ತು ಸೇವೆ ಎಂಬ ಮೂರು ಧ್ಯೇಯಗಳನ್ನಿಟ್ಟುಕೊಂಡು ಅರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ. ಈ ಸಮಿತಿಯು ಹಲವಾರು ವರ್ಷಗಳಿಂದ ಉಚಿತವಾಗಿ ಯೋಗ ಶಿಕ್ಷಣವನ್ನು ನೀಡುತ್ತಾ ಬಂದಿದೆ. ನಿತ್ಯ ಯೋಗಭ್ಯಾಸ ಮಾಡುವುದರಿಂದ ಏನೆಲ್ಲಾ ಲಾಭಗಳು ಮನುಷ್ಯನಿಗೆ ದೊರಕುತ್ತಿದೆ ಎಂಬುದನ್ನು ತಿಳಿಸಿದರು.ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷ ಡಿ.ಪಿ.ಪ್ರಕಾಶ, ಉಪಾಧ್ಯಕ್ಷ ಎನ್. ದೊರೆಸ್ವಾಮಿ, ಗೌರವಾಧ್ಯಕ್ಷ ಶ್ರೀ.ಶ್ರೀನಿವಾಸಣ್ಣ, ಗೌರವ ಕಾನೂನು ಸಲಹೆಗಾರ ಎ.ಎಸ್.ಸಿದ್ದರಾಜಣ್ಣ, ಪ್ರಧಾನ ಸಂಚಾಲಕ ಯೋಗಪ್ರಕಾಶ್, ಖಜಾಂಚಿ ಸಂತೋ?ಕುಮಾರ್, ಜೆ.ಎಸ್.ಎಸ್ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್, ಪೋಲೀಸ್ ಇಲಾಖೆಯ ಸ್ವಾಮಿ, ಸಂಚಾಲಕ ಶ್ರೀನಿವಾಸಮೂರ್ತಿ ಯೋಗ ಶಿಕ್ಷಕರಾದ ದೊರೆಸ್ವಾಮಿ, ಶ್ರೀನಿವಾಸಮೂರ್ತಿ, ಸುನೀತಾ, ರಾಜಶೇಖರಮೂರ್ತಿ, ಭಜನೆ ಮಹೇಶ್, ರಜನೀಕಾಂತ್, ಸ್ವಾಮಿ, ರವಿ, ನಾಗಮಣಿ, ಪ್ರಸಾದ್, ಬಸವರಾಜು, ವೆಂಡರ್ ರವಿ, ಕುಮಾರ್, ರಮೇಶ್, ರಮ್ಯ, ನಾಗರಾಜು, ಯೋಗೀಶ್ ಮತ್ತು ವಿಧ್ಯಾರ್ಥಿಗಳು ಹಾಗೂ ಸಹ ಶಿಕ್ಷಕರ ವೃಂದದವರು ಭಾಗವಹಿಸಿದರು.