ಸಾರಾಂಶ
ರಕ್ತದಾನದ ಕುರಿತು ಶಾಲಾ ವಿದ್ಯಾರ್ಥಿಗಳು ಚಿತ್ರಿಸಿದ ಭಿತ್ತಿಚಿತ್ರವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಎಂಇಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪೇರೆಂಟ್ ಟೀಚರ್ಸ್ ಅಸೋಸಿಯೇಷನ್, ಎಂಇಟಿ ಅಲೂಮ್ನಿ ಅಸೋಸಿಯೇಷನ್, ಮುಸ್ಲಿಂ ಯಂಗ್ ಮೆನ್ ಅಸೋಸಿಯೇಷನ್ ಉದ್ಯಾವರ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಸಹಯೋಗದಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆ ಉಡುಪಿ ರಕ್ತ ನಿಧಿ ಕೇಂದ್ರದ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಶಾಲೆಯಲ್ಲಿ ನಡೆಸಲಾಯಿತು. ರಕ್ತದಾನದ ಕುರಿತು ಶಾಲಾ ವಿದ್ಯಾರ್ಥಿಗಳು ಚಿತ್ರಿಸಿದ ಭಿತ್ತಿಚಿತ್ರವನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಶಾಲಾ ಪಿ.ಟಿ.ಎ ಅಧ್ಯಕ್ಷ ಡಾ.ಮೊಹಮ್ಮದ್ ಫೈಸಲ್, ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದ ಸಭೆಯಲ್ಲಿ ಎಂಇಟಿ ಶಾಲಾ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್, ಜಿಲ್ಲಾ ರಕ್ತನಿಧಿ ಕೇಂದ್ರ ಸಂಯೋಜಕಿ ಡಾ. ಮಂಜುಶ್ರೀ, ಲಯನ್ಸ್ ಕ್ಲಬ್ ಲಕ್ಷ್ಯ ಅಧ್ಯಕ್ಷ ಧನುಷ್ ಕೆ., ಎಂ.ವೈ.ಎ. ಅಧ್ಯಕ್ಷ ಇಮಾದ್, ಸಿದ್ದಿಕೆ ಅಕ್ಬರ್ ಜಾಮಿಯ ಮಸೀದಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇದರ ಸದಸ್ಯರಾದ ಮಹಾಬಲೇಶ್, ಕವನ ರವಿರಾಜ್, ರಮೇಶ್ ಕೆ. ಶೆಟ್ಟಿ, ಪಂಚಾಯಿತಿ ಸದಸ್ಯರಾದ ಆಬಿದ್ ಅಲಿ, ರಿಯಾಜ್ ಪಳ್ಳಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಆಚಾರ್ಯ ಅಧ್ಯಕ್ಷೀಯ ಭಾಷಣ ಮಾಡಿದರು. ಈ ಶಿಬಿರದಲ್ಲಿ ಅಂದಾಜು 60 ರಕ್ತದಾನಿಗಳು ಭಾಗವಹಿಸಿದ್ದರು. ಎಂ.ವೈ.ಎ. ಸದಸ್ಯರಾದ ಮೊಯಿನ್ ಅನ್ವರ್ ಪ್ರಾರ್ಥಿಸಿದರು. ಶಿಕ್ಷಕಿ ಅಂಬ್ರಿನ್ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾ ನಿರೂಪಿಸಿದರು. ಶಿಕ್ಷಕಿ ಸಂಮ್ರಿಯ ವಂದಿಸಿದರು. ರಕ್ತದಾನ ಶಿಬಿರವು ಶೈಕ್ಷಣಿಕ ಮುಖ್ಯಸ್ಥೆ ಜುನೈದಾ ಸುಲ್ತಾನ ಅವರ ಮಾರ್ಗದರ್ಶನದಿಂದ ಹಾಗೂ ಎಲ್ಲ ಸಂಘದ ಸದಸ್ಯರ ಮತ್ತು ದಾನಿಗಳ ಸಹಯೋಗದಿಂದ ಯಶಸ್ವಿಗೊಂಡಿತು.