ಸಹನೆ ನನ್ನ ಸಂಸ್ಕೃತಿ, ದೌರ್ಬಲ್ಯವಲ್ಲ

| Published : Feb 14 2024, 02:16 AM IST

ಸಾರಾಂಶ

ಸಹನೆ ನನ್ನ ಸಂಸ್ಕೃತಿ, ದೌರ್ಬಲ್ಯವಲ್ಲ. ಸಮಯ ಬಂದಾಗ ಎಲ್ಲ ಮಾಡಿ ತೋರಿಸಬಲ್ಲೆ ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಗುಡುಗಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸಹನೆ ನನ್ನ ಸಂಸ್ಕೃತಿ, ದೌರ್ಬಲ್ಯವಲ್ಲ. ಸಮಯ ಬಂದಾಗ ಎಲ್ಲ ಮಾಡಿ ತೋರಿಸಬಲ್ಲೆ ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಗುಡುಗಿದರು.

ಪಟ್ಟಣದ ಮಹಲ್‌ಗಲ್ಲಿ ಬಡಾವಣೆಯ ಮುಸ್ಲಿಂ ಸಮಾಜ ಬಾಂಧವರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಕಳೆದ 40 ವರ್ಷದ ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಹೇಡಿತನದ ರಾಜಕಾರಣ ಮಾಡಿಲ್ಲ, ದೇವರನ್ನು ಹೊರತುಪಡಿಸಿ ಬೇರೆ ಯಾರ ಭಯವೂ ನನಗಿಲ್ಲ ಎಂದರು.

ನಾನು ಸುಸಂಸ್ಕೃತ ಮನೆತನದಿಂದ ಬಂದ ವ್ಯಕ್ತಿಯಾಗಿದ್ದು, ನನಗೆ ಚಿಲ್ಲರೆ ರಾಜಕಾರಣ ಗೊತ್ತಿಲ್ಲ. ಯಾರು ಏನೇ ಕುತಂತ್ರ ಮಾಡಿದರೂ ನನ್ನ ಮತ ಕ್ಷೇತ್ರದ ಜನರು ಬುದ್ಧಿವಂತರಿದ್ದು, ಅವರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಮತಕ್ಷೇತ್ರದಲ್ಲಿ 35 ವರ್ಷಗಳಿಂದ ಜನರು ನನಗೆ ಆಶೀರ್ವದಿಸಿ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ನಾನೆಂದು ಕೆಟ್ಟ ರಾಜಕಾರಣ ಮಾಡಿ ಅವರ ವಿಶ್ವಾಸಕ್ಕೆ ಧಕ್ಕೆತಂದಿಲ್ಲ. ಜನರು ತೋರಿದ ಪ್ರೀತಿ, ವಿಶ್ವಾಸದ ಋಣವನ್ನು ನಾನು ತೀರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ, ನನ್ನ ಹಿರಿತನದ ಆಧಾರದಲ್ಲಿ ನನಗೆ ಸೂಕ್ತ ಸ್ಥಾನ ಸಿಗಬೇಕಾಗಿತ್ತು. ಖಂಡಿತವಾಗಿಯೂ ನಿಮಗೆ ಬೇಜಾರಾಗಿದ್ದು, ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ. ನನಗೆ ಅಧಿಕಾರ ಮುಖ್ಯವಲ್ಲ, ನಿಮ್ಮ ಸೇವೆ ಮುಖ್ಯ. ಮುಂದಿನ ಚುನಾವಣೆಗಳು ದೇಶದ ಭವಿಷ್ಯವನ್ನು ನಿರ್ಧರಿಸಲಿದ್ದು, ಯೋಚಿಸಿ ಮತ ಚಲಾಯಿಸುವ ಮೂಲಕ ದೇಶದ ಜಾತ್ಯಾತೀತ ವ್ಯವಸ್ಥೆ ಬಲಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು.

ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ್‌ ಶಕೀಲ ಅಹ್ಮದ್‌ ಖಾಜಿ, ಮಹಲ್ ಗಲ್ಲಿ ಜಮಾತ ಅಧ್ಯಕ್ಷ ಹಸನಸಾಬ್‌ ಕೊರ್ಕಿ, ಗನಿಸಾಬ್‌ ಲಾಹೋರಿ, ಮೆಹಬೂಬಸಾಬ ಹಂಡೆಬಾಗ, ಹಸನಸಾಬ್‌ ಮನಗೂಳಿ, ಅಬ್ದುಲ್ ರೆಹಮಾನ ಸಮಾಜ ಕಟ್ಟಿ, ಹೈದರಶಾ ಮಕಾನದಾರ, ಕೆ.ಐ.ಸಗರ, ರೋಶನ ಡೋಣಿ, ಇಬ್ರಾಹಿಂ ಮನ್ಸೂರ, ಎಂ.ಕೆ.ಚೋರಗಸ್ತಿ, ಸಿದ್ದನಗೌಡ ಪಾಟೀಲ(ನಾವದಗಿ), ಕಾಸಿಮ್‌ ಪಟೇಲ ಪಾಟೀಲ ಮೂಕಿಹಾಳ, ಯಾಸೀನ್‌ ಮಮದಾಪೂರ, ಮಹಲ್‌ ಗಲ್ಲಿಯ ಜಮಾತ ಸದಸ್ಯರು ಇದ್ದರು. ನಿವೃತ್ತ ಶಿಕ್ಷಕ ಇಕ್ಬಾಲ್ ಖಾಜಿ ಕುರಾನ್ ಪಠಸಿದರು. ಮುಜಾಹೀದ್‌ ನಮಾಜಕಟ್ಟಿ ಸ್ವಾಗತಿಸಿದರು. ಅಬ್ದುಲ್‌ಗನಿ ನಿರೂಪಿಸಿದರು.

ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಕೊಟ್ಟಿದ್ದು, ಹಿರಿತನದ ಆಧಾರದಲ್ಲಿ ನನಗೆ ಸೂಕ್ತ ಸ್ಥಾನ ಸಿಗಬೇಕಾಗಿತ್ತು. ಖಂಡಿತವಾಗಿಯೂ ನಿಮಗೆ ಬೇಜಾರಾಗಿದ್ದು, ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ. ನನಗೆ ಅಧಿಕಾರ ಮುಖ್ಯವಲ್ಲ, ನಿಮ್ಮ ಸೇವೆ ಮುಖ್ಯ. ಮುಂದಿನ ಚುನಾವಣೆಗಳು ದೇಶದ ಭವಿಷ್ಯವನ್ನು ನಿರ್ಧರಿಸಲಿವೆ. ಯೋಚಿಸಿ ಮತ ಚಲಾಯಿಸುವ ಮೂಲಕ ದೇಶದ ಜಾತ್ಯಾತೀತ ವ್ಯವಸ್ಥೆ ಬಲಗೊಳಿಸಲು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ.

- ಸಿ.ಎಸ್.ನಾಡಗೌಡ(ಅಪ್ಪಾಜಿ),

ಶಾಸಕರು, ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು.