ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಹುಯಿಲುಗೊಳ ನಾರಾಯಣರಾವ್ ಅವರು ರಚಿಸಿರುವ ''''''''''''''''ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು'''''''''''''''', ಕುವೆಂಪು ಅವರು ರಚಿಸಿರುವ ನಾಡಗೀತೆ- ''''''''''''''''ಜಯಭಾರತ ಜನನಿಯ ತನುಜಾತೆ'''''''''''''''' ಜೊತೆಗೆ ಕರ್ನಾಟಕದಲ್ಲಿ ಭಾವಗೀತೆ ಪ್ರಕಾರಕ್ಕೂ ನೂರು ವರ್ಷ ತುಂಬಿರುವುದರಿಂದ ಶತಮಾನೋತ್ಸವ ಆಚರಿಸಲು ಯೋಜಿಸಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕವು ಹೂಟಗಳ್ಳಿಯ ಶ್ರೀ ಅನಂತೇಶ್ವರ ಭವನದಲ್ಲಿ ಅನಂತೇಶ್ವರ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಭಾವಗೀತೆ ಗಾಯನ ಸ್ಪರ್ಧೆಯ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿ, ಮಹಾತ್ಮಗಾಂಧಿ ಅವರು ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದಾಗ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆ ಹಾಡಲಾಯಿತು. ಹೀಗಾಗಿ ಈ ಗೀತೆಯ ಜೊತೆಗೆ ನಾಡಗೀತೆ, ರೈತಗೀತೆ ಮತ್ತು ಒಟ್ಟಾರೆ ಭಾವಗೀತೆಯ ಶತಮಾನೋತ್ಸವ ಆಚರಿಸಲಾಗುವುದು ಎಂದರು.ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಈ ಮೂರು ಗೀತೆಗಳ ಬಗ್ಗೆ ಗಾಯಕರಿಗೆ ತರಬೇತಿ ನೀಡಿ, ಕಾರ್ಯಕ್ರಮ ನಡೆಸಲಾಗುವುದು. ಕುವೆಂಪು ಅವರು ಜನ್ಮದಿನವಾದ ಡಿ.29 ರಂದು ಮೈಸೂರಿನಲ್ಲಿ ಸಮಾರೋಪ ಕಾರ್ಯಕ್ರಮ ನಡೆಸುವ ಬಗ್ಗೆ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಾಗುವುದು ಎಂದರು.ಈ ಶತಮಾನೋತ್ಸವದಿಂದ ಪ್ರತಿ ಜಿಲ್ಲೆಯಲ್ಲೂ ಗಾಯಕರು, ವಾದ್ಯಗಾರರಿಗೆ ಉತ್ತೇಜನ ಸಿಗಲಿದೆ ಎಂದು ಅವರು ಹೇಳಿದರು.ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಆಸಕ್ತಿ, ಪ್ರಾಮಾಣಿಕತೆ ಮತ್ತು ಶಿಸ್ತು ಇದ್ದಲ್ಲಿ ಸಾಧಕರಾಗಬಹುದು ಎಂದರು.ಭಾವಗೀತೆಗಳು ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಮನುಷ್ಯನ ಮನಸ್ಸಿಗೆ ಸಮಾಧಾನ ತರುತ್ತವೆ. ಜೀವನವನ್ನು ಅರ್ಥಪೂರ್ಣವಾಗಿ, ಸರಿದಾರಿಯಲ್ಲಿ ಸಾಗಿಸಲು ನೆರವಾಗುತ್ತವೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಮಾತನಾಡಿ, ಪ್ರತಿಯೊಬ್ಬರ ಹೃದಯದಲ್ಲೂ ನಾದ ಅಂತರ್ಗತವಾಗಿರುತ್ತದೆ. ಬದುಕು ದೀಪದಂತೆ. ಬತ್ತಿ, ಎಣ್ಣೆ ಇದ್ದಲ್ಲಿ ದೀಪ ಉರಿಯುತ್ತದೆ. ಗಾಳಿ ಬಂದಲ್ಲಿ ಆರಿ ಹೋಗುತ್ತದೆ. ಯುವ ಪೀಳಿಗೆ ನಮ್ಮ ಪರಂಪರೆಯನ್ನು ಬೇರೆಯಾಗುತ್ತಿದ್ದಾರೆ. ಅವರನ್ನು ಇತ್ತ ಸೆಳೆಯಬೇಕು. ಭಾವಗೀತೆ ಹೋಳಿಗೆಯಲ್ಲಿ ಹೂರಣವಿದ್ದಂತೆ. ಯುವಕರಿಗೆ ಸಂಸ್ಕಾರವೆಂಬ ಹೂರಣ ತುಂಬಬೇಕಿದೆ ಎಂದರು.ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಪ್ರಾಸ್ತಾವಿಕ ಭಾಷಣ ಮಾಡಿ, ಶ್ರೀ ಅನಂತೇಶ್ವರ ಟ್ರಸ್ಟಿನ ಸಂಪೂರ್ಣ ಸಹಕಾರಗೊಂದಿಗೆ ಈ ಸ್ಪರ್ಧೆ ನಡೆಸಲಾಗಿದೆ. ಇದರಿಂದ ಗಾಯಕರಿಗೆ ಉತ್ತೇಜನ ಸಿಕ್ಕಿದೆ. ಮಕ್ಕಳಲ್ಲೂ ಸುಗಮ ಸಂಗೀತದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಅವರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು ಎಂದರು. 12 ಕವಿಗಳ ತಲಾ 2 ಕವಿತೆಗಳನ್ನು ಆಯ್ಕೆ ಮಾಡಿ, ಗಾಯಕರಿಂದ ಹಾಡಿಸಿ, ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಕವಿ ಜಯಪ್ಪ ಹೊನ್ನಾಳಿ ಮುಖ್ಯ ಅತಿಥಿಗಳಾಗಿದ್ದರು. ತೀರ್ಪುಗಾರರಾದ ಇಂದ್ರಾಣಿ ಅನಂತರಾಮ್, ರಶ್ಮಿ ಚಿಕ್ಕಮಗಳೂರು, ಎ.ಡಿ. ಶ್ರೀನಿವಾಸನ್, ರಾಜೇಶ್ ಪಡಿಯಾರ್, ಕವಿತಾ ಕಾಮತ್ ತೀರ್ಪುಗಾರರಾಗಿದ್ದರು. ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷ ನ. ಗಂಗಾಧರಪ್ಪ, ಕಾರ್ಯದರ್ಶಿ ಸಿರಿಬಾಲು, ಮಾಧ್ಯಮ ಸಂಚಾಲಕ ಎನ್. ಬೆಟ್ಟೇಗೌಡ, ವಾದ್ಯ ತಂಡದ ಗಣೇಶ್ ಭಟ್., ಇಂದು ಶೇಖರ್, ರಾಜೇಂದ್ರ ಪ್ರಸಾದ್, ಧ್ವನಿವರ್ದಕದ ವೈರಮುಡಿಗೌಡ, ಕಾರ್ಪೋರೇಷನ್ ಮಂಜುನಾಥ್, ನಾಗರಾಜ್, ನಿತ್ಯಾನಂದ ಕಾಮತ್, ಅನುಸೂಯ ಶಂಕರ್, ಶಾಲಿನಿ ನಾಗರಾಜ್ ಬೈರಿ ಮೊದಲಾದವರು ಇದ್ದರು. ಗಾಯಕ ರವಿರಾಜ್ ಹಾಸು ಪ್ರಾರ್ಥಿಸಿದರು. ,--ಬಾಕ್ಸ್ ...ಭಾವಗೀತೆ ಸ್ಪರ್ಧೆಯ ವಿಜೇತರುಹಿರಿಯರ ವಿಭಾಗ- ರಿಷಬ್ ಜಕ್ಕಳ್ಳಿ- ಪ್ರಥಮ, ಡಾ.ವಾಣಿಶ್ರೀ- ದ್ವಿತೀಯ, ಸಿಂಚನಾ ಚಿಕ್ಕೋಳೆ, ಅಬ್ದುಲ್ ಖಯ್ಯೂಂ- ಇಬ್ಬರೂ ತೃತೀಯ, ಸಿಂಚನಾ, ಶೀಲಾ ಗುರುದತ್ತ, ಪಿ.ಎಂ. ಸುರೇಶ್, ಶಶಿಕಲಾ ಅನಂತರಾಮ್, ಪಿ,ಎನ್. ಸ್ಫೂರ್ತಿ- ಸಮಾಧಾನಕರ ಬಹುಮಾನ.ಮಕ್ಕಳ ವಿಭಾಗ- ಮಾನಸಿ ಆಚಾರ್- ಪ್ರಥಮ, ಚಾರ್ವಿ ಸತೀಶ್- ದ್ವಿತೀಯ, ಮಾನ್ಯತಾ- ತೃತೀಯ,. ಉಪಾಸನಾ- ಸಮಾಧಾನಕರ ಬಹುಮಾನ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))