ಸಾರಾಂಶ
ಬಸವಕಲ್ಯಾಣದ ರೈತ ಭವನದಲ್ಲಿ ರೈತ ಸಂಘದಿಂದ ಎಂ.ಡಿ ನಂಜುಂಡಸ್ವಾಮಿಯವರ 88ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಪ್ರೊ. ನಂಜುಂಡಸ್ವಾಮಿ ಕಾನೂನು ಪದವೀಧರರಾಗಿದ್ದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಶ್ಚಿಮ ಜರ್ಮನಿಯಲ್ಲಿ ಪಿಎಚ್‌ಡಿ ಪದವಿ ಅಧ್ಯಯನ ತಾಂತ್ರಿಕ ವಿರೋಧದಿಂದಾಗಿ ಅಧ್ಯಯನ ಕೈಬಿಟ್ಟು ಸ್ವದೇಶಕ್ಕೆ ಮರಳಿದರು. ನಂತರ ಮೈಸೂರು ಮತ್ತು ಬೆಂಗಳೂರು ಕಾನೂನು ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸುಭಾಷ ರಗಟೆ ತಿಳಿಸಿದರು.ಇಲ್ಲಿನ ರೈತ ಭವನದಲ್ಲಿ ತಾಲೂಕಿನ ರೈತ ಸಂಘದಿಂದ ಪ್ರೊ.ಎಂ.ಡಿ ನಂಜುಡಸ್ವಾಮಿ ಅವರ 88ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, 1965ರ ನಂತರ ಸಾರ್ವಜನಿಕ ಚಳುವಳಿಯಲ್ಲಿ ಭಾಗವಹಿಸುತ್ತಾ ರೈತ ಸಂಘವನ್ನು ಪ್ರಬಲವಾಗಿ ಕಟ್ಟಿದರು. ಅಲ್ಲದೇ ಅನೇಕ ರೈತಪರ ಹೋರಾಟಗಳಲ್ಲಿ ಭಾಗವಹಿಸಿ ರೈತರಿಗೆ ನ್ಯಾಯ ಒದಗಿಸುವಂತಹ ಕೆಲಸ ಮಾಡಿದರು ಎಂದರು.
ತಾಲೂಕಿನ ರೈತರ ಸಮಸ್ಯೆಗಳ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಎಲ್ಲಾ ರೈತರಿಗೆ ತಿಳಿ ಹೇಳಬೆಕೆಂದರುಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ ಮಾತನಾಡಿ, ರೈತರಿಗೆ ನ್ಯಾಯ ಒದಗಿಸುವ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನೈತಿಕ ಸ್ಥೈರ್ಯ ನಂಜುಂಡ ಸ್ವಾಮಿ ರೈತರಲ್ಲಿ ತುಂಬಿದರು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಯರಬಾಗ, ಚಂದ್ರಕಾಂತ ಹುಸಕೆ, ಜೈಪ್ರಕಾಶ ಸದಾನಂದೆ, ಸಿದ್ರಾಮಪ್ಪ ಬಾಲಕುಂದೆ ಮಾತನಾಡಿದರು.ರೈತ ಮುಖಂಡರಾದ ಬಸಣ್ಣರೆಡ್ಡಿ, ವೀರಣ್ಣ ಕನಕಟ್ಟಾ, ಪ್ರಶಾಂತ ಲಕಮಾಜಿ, ವಿಠ್ಠಲ ಸೋನಾರ, ಶಾಂತವಿಜಯ ಪಾಟೀಲ, ವೆಂಕಟ ದೇಶಪಾಂಡೆ, ಯಶವಂತ ಪಾಟೀಲ, ಚಂಧ್ರಕಾಂತ ಮೋಳಕೆರೆ, ಮಡಿವಾಳಪ್ಪ ಪಾಟೀಲ ಹಾಗೂ ಇತರರಿದ್ದರು.