ಸಾರಾಂಶ
ಆನಂದ ಜಡಿಮಠ
ಕನ್ನಡಪ್ರಭ ವಾರ್ತೆ ಬೀಳಗಿಭೂಮಿ ಮೇಲೆ ಜನ್ಮಕೊಟ್ಟ ತಂದೆ-ತಾಯಿ ಹಾಗೂ ಹುಟ್ಟೂರಿನ ಋಣ ತೀರಿಸಲು ಸಾಧ್ಯವೇ ಇಲ್ಲ ಎನ್ನುವ ಶಾಸ್ತ್ರ-ಪುರಾಣಗಳ ವೇದವಾಕ್ಯವನ್ನೇ ಸುಳ್ಳು ಎನ್ನುವುದನ್ನು ಸಾಧಿಸಿ ತೋರಿಸಿದವರು ಮಾಜಿ ಸಚಿವ ಎಸ್.ಆರ್.ಪಾಟೀಲರು.ಸಹಕಾರಿ ಧುರೀಣ ಎಸ್.ಆರ್.ಪಾಟೀಲ ಅವರು ತಮ್ಮ ೭೫ನೇ ಜನ್ಮ ದಿನಾಚರಣೆ ದಿನವೇ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹುಟ್ಟೂರು
ಬಾಡಗಂಡಿನಲ್ಲಿಯೇ ಆರೋಗ್ಯ ಧಾಮ ಹೆಸರಿನಲ್ಲಿ ಎಂಬಿಬಿಎಸ್ ಕಾಲೇಜು ಪ್ರಾರಂಭಿಸುವ ಮೂಲಕ ಸಹಕಾರಿ, ರಾಜಕೀಯ, ಉದ್ಯಮ, ಶಿಕ್ಷಣ ಕ್ಷೇತ್ರದನಂತರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೆ.ಎಸ್.ಆರ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕೇಂದ್ರಕ್ಕೆ ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲಾಗಿದೆ.
ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ೪ನೇ ವೈದ್ಯಕೀಯ ಕಾಲೇಜು ಬುಧವಾರ ಲೋಕಾರ್ಪಣೆಯಾಗಲಿದೆ.ಆರೋಗ್ಯ ಧಾಮದಲ್ಲಿ ಶ್ರೀಮತಿ ಶಾಂತಾದೇವಿ ಸ್ಮರಣಾರ್ಥ ಆಯುರ್ವೇದಿಕ್ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಬಿಎಸ್ಸಿ ನರ್ಸಿಂಗ್ ಮಹಾವಿದ್ಯಾಲಯ ಕೂಡ ಇರುವುದು ವಿಶೇಷ. ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದಲ್ಲಿ ಆರಂಭಿಸಿರುವ ಎಸ್.ಆರ್.ಪಾಟೀಲರು ಕಳೆದ ೨೦೦೯ರಲ್ಲಿ ಆರಂಭಗೊಂಡ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನವು ಕೇವಲ ಒಂದೂವರೆ ದಶಕದಲ್ಲಿಯೇ ಹೆಮ್ಮರವಾಗಿ ಬೆಳೆದಿದೆ.ಸದ್ಯ ವೈದ್ಯಕೀಯ ಕಾಲೇಜು ಆರಂಭಿಸುವ ಮೂಲಕ ಸಂಸ್ಥೆಯ ಸೆಕೆಂಡ್ ಇನಿಂಗ್ಸ್ ಪ್ರಾರಂಭಿಸಿದ್ದು, ಆಯುರ್ವೇದ್ ಕಾಲೇಜು, ಸಿಬಿಎಸ್ಇ ಸ್ಕೂಲ್ಸಹಿತ ಶೈಕ್ಷಣಿಕ ಸಂಸ್ಥೆಗಳು ಒಂದೇ ಸೂರಿನಡಿ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಭದ್ರ ಬುನಾದಿ ಹಾಕಿದಂತಾಗಿದೆ.೩.೫ ಲಕ್ಷ ರೋಗಿಗಳಿಗೆ ₹೭ ಕೋಟಿ ಉಚಿತ ಔಷಧಿಯ ಸೇವೆ ನೀಡಿದ ಎಸ್‌ಆರ್‌ಪಿ ಆಸ್ಪತ್ರೆ:
೬೩೦ ಹಾಸಿಗೆಯುಳ್ಳ ಸುಸಜ್ಜಿತ ಎಸ್.ಆರ್.ಪಾಟೀಲ ಆಸ್ಪತ್ರೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯ ೪೦೦ಕ್ಕೂ ಹೆಚ್ಚು ಹಳ್ಳಿಗಳಿಂದ ಈಗಾಗಲೇ ಆಸ್ಪತ್ರೆಯಲ್ಲಿ ಸುಮಾರು ೩.೫ ಲಕ್ಷ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ೩ ಸಾವಿರಕ್ಕೂ ಹೆಚ್ಚು ವಿವಿಧ ಶಸ್ತ್ರಚಿಕಿತ್ಸೆಯನ್ನುಯಶಸ್ವಿಯಾಗಿ ಮಾಡಲಾಗಿದೆ. ಹಾಗೆಯೇ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಂಡ ಬಡವರಿಗಾಗಿ ಈಗಾಗಲೇ ₹೭ ಕೋಟಿಗೂ ಅಧಿಕ ಮೌಲ್ಯದ ಔಷಧಿಗಳನ್ನು
ಉಚಿತವಾಗಿ ನೀಡಿರುವುದು ಬಡವರ, ದೀನ ದಲಿತರ, ಹಿಂದುಳಿದವರ ಆರೋಗ್ಯ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.ಪ್ರಸಕ್ತ ವರ್ಷದಿಂದಲೇ ೧೦೦ ಎಂಬಿಬಿಎಸ್ ಸೀಟ್‌ಗಳಿಗೆ ಪ್ರವೇಶ:೬೩೦ ಹಾಸಿಗೆಯಳ್ಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳು ಸೇರಿದಂತೆ ಆರೋಗ್ಯ ಸೇವೆಯ ಉತ್ಕೃಷ್ಠತೆಗೆ ಎಂಬಿಬಿಎಸ್ ಕಾಲೇಜು ಆರಂಭಕ್ಕೆ ಅನುಮತಿ ಲಭಿಸಿದೆ. ಇದರಿಂದ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದಲೇ ೧೦೦ ಎಂಬಿಬಿಎಸ್ ಸೀಟ್‌ಗಳು ಪ್ರವೇಶಾತಿ ಪಡೆದುಕೊಳ್ಳಲಿದ್ದು, ವಿದ್ಯಾರ್ಜನೆಗಾಗಿ, ಸಮಾಜದ ಆರೋಗ್ಯ ಕಾಳಜಿ ಸಿದ್ಧತೆಗಾಗಿ ೧೦೦ ಭವಿಷ್ಯದ ಡಾಕ್ಟರ್‌ಗಳು ಬಾಡಗಂಡಿಯತ್ತ ಹೆಜ್ಜೆ ಹಾಕಲಿದ್ದಾರೆ. ಕಾಲೇಜಿನಲ್ಲಿ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಜೀವರಸಾಯನಶಾಸ್ತ್ರ, ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಫಾರ್ಮಕಾಲಜಿ,
ಫೋರೆನ್ಸಿಕ್ ಮೆಡಿಸಿ ನ್, ಟಾಕ್ಸಿ ಕಾಲಜಿ, ಸಮುದಾಯ ಔಷಧ, ಜನರಲ್ ಮೆಡಿಸಿನ್, ಪಿಡಿಯಾ ಟ್ರಿಕ್ಸ್, ಮನೋವೈದ್ಯಶಾಸ್ತ್ರ, ಡರ್ಮಟಾಲಜಿ,ಸಾಮಾನ್ಯ ಶಸ್ತ್ರಚಿಕಿತ್ಸೆ, ಆಥೋ ವೆರ್ಡಿಕ್ಸ್, ರೇಡಿಯೋ-ರೋಗ ನಿರ್ಣಯ, ಓಟೋ-ರೈನೋಲಾರಿಂ ಗೋಲಜಿ, ನೇತ್ರವಿಜ್ಞಾನ, ಪ್ರಸೂತಿ ಮತ್ತು ಸ್ತ್ರೀರೋಗ
ಶಾಸ್ತ್ರ, ಅರವಳಿಕೆ ಶಾಸ್ತ್ರ, ದಂತ ವೈದ್ಯಶಾಸ್ತ್ರ, ಇಂಟಿಗ್ರೆಟಿವ್ ಮೆಡಿಕಲ್ ರಿಸರ್ಚ್ ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ ಹಾಗೂಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ಸೇವೆಗೆ ಸನ್ನದ್ಧವಾಗಿದೆ.ಕೃಷ್ಣಾ ತಟದಲ್ಲಿ ತಲೆ ಎತ್ತಿದ ದೇವಾಲಯ:
ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಮಧ್ಯ ಭಾಗದ ಬೀಳಗಿ ತಾಲೂಕಿನ ಬಾಡಗಂಡಿಯ ಕೃಷ್ಣಾ ನದಿ ತಟದಲ್ಲಿ ಸುಮಾರು ೪೦ ಎಕರೆಯ ವಿಶಾಲ ಜಾಗದಲ್ಲಿ ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರದ ಆವರಣದಲ್ಲಿ ಸುಮಾರು ₹೩೫ ಲಕ್ಷ ವೆಚ್ಚದಲ್ಲಿ ನಿಮ್ಮನ್ನು ಹೆತ್ತವರ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬರೂ ಹೆತ್ತವರನ್ನು ನೆನೆಯಬೇಕು. ಹೆತ್ತವರ ಸ್ಮರಿಸುತ್ತ ಕೈಮುಗಿದು ಪ್ರಾರ್ಥಿಸಬೇಕು. ಆ ನಿಟ್ಟಿನಲ್ಲದಾರೂ ಹೆತ್ತವರ ನೆನಪಿಟ್ಟುಕೊಳ್ಳುವ ಪ್ರಯತ್ನವಾಗಬೇಕೆಂಬ ಎಸ್.ಆರ್.ಪಾಟೀಲರ ಆಶಯದಂತೆ ನಿಮ್ಮನ್ನು ಹೆತ್ತವರ ದೇವಾಲಯ ಸಿದ್ಧವಾಗಿದೆ.ದೇವಾಲಯದಲ್ಲಿ ಪುರುಷ ಹಾಗೂ ಮಹಿಳೆಯ ಮೂರ್ತಿಗಳನ್ನು ಸುಂದರವಾಗಿ ಕೆತ್ತಲಾಗಿದ್ದು, ಯಾರದೋ ತಂದೆ-ತಾಯಿಯ
ಭಾವಚಿತ್ರ ಹೋಲದೇ ಹೆತ್ತವರ ಪರಿಕಲ್ಪನೆ ಹೊಂದಿದ್ದು, ನಮ್ಮ ನಮ್ಮ ತಂದೆಯೇ ಎನ್ನುವ ಭಾವನೆ ಮೂಡವಂತೆ ಮಾಡುವ ಕಲ್ಪನೆ ಇಲ್ಲಿಸೃಷ್ಟಿಸಲಾಗಿದೆ.ಪ್ರತಿ ಬಾರಿ ನನ್ನ ಹುಟ್ಟು ಹಬ್ಬಕ್ಕೆ ಗಣ್ಯರು, ಅಭಿಮಾನಿಗಳು ಹಾರ, ತುರಾಯಿ ಹಾಕಿ ಶುಭ ಹಾರೈಸುತ್ತಿದ್ದರು. ಆದರೆ, ಈ ಬಾರಿ ನಾನೇ ನನ್ನ ಜನರಿಗಾಗಿ, ಅವರ ಸೇವೆಗಾಗಿ ವೈದ್ಯಕೀಯ ಕಾಲೇಜು ಕಾಣಿಕೆಯಾಗಿ ನೀಡುತ್ತಿದ್ದೇನೆ. ಹುಟ್ಟೂರಿನಲ್ಲಿಯೇ ಹುಟ್ಟಿದ ಹಬ್ಬದೊಂದಿಗೆ ಎಂಬಿಬಿಎಸ್ ಕಾಲೇಜು
ಲೋಕಾರ್ಪಣೆ ಮಾಡುತ್ತಿದ್ದೇನೆ. ಲೋಕಾರ್ಪಣೆಗೆ ಸರ್ವರೂ ಬಂದು ಶುಭಹಾರೈಸಿ.-ಎಸ್.ಆರ್.ಪಾಟೀಲ ಮಾಜಿ ಸಚಿವರು.
ಆಸ್ಪತ್ರೆಗೆ ಬರುವ ರೋಗಿಗಳು ಬೇರೆ ಬೇರೆ ದೇವರಿಗೆ ಕೈ ಮುಗಿದು ಬೇಡಿಕೊಳ್ಳುವ ಬದಲು ತಮ್ಮನ್ನು ಹೆತ್ತು-ಹೊತ್ತು ಸಾಕಿ ಸಲುಹಿದವರಿಗೆ ಕೈ ಮುಗಿದು ಪ್ರಾರ್ಥಿಸಬೇಕು. ಹೆತ್ತವರೇ ನಮಗೆಲ್ಲ ನಿಜವಾದ ದೇವರು. ಇಲ್ಲಿಗೆ ಬರುವ ಪ್ರತಿಯೊಬ್ಬರೂ ಹೆತ್ತವರನ್ನು ನೆನೆಯಬೇಕು ಎನ್ನುವ ಎಸ್.ಆರ್.ಪಾಟೀಲರ ನಿರ್ಧಾರದಿಂದ ನಿಮ್ಮನ್ನು ಹೆತ್ತವರ ದೇವಾಲಯ ನಿರ್ಮಾಣ ಮಾಡಲಾಗಿದೆ.-ಎಂ.ಎನ್.ಪಾಟೀಲ ಕಾರ್ಯದರ್ಶಿ,
ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ, ಬಾಡಗಂಡಿ.