ಸಾರಾಂಶ
ಜಿಲ್ಲೆಯ ಪ್ರಸ್ತುತ ರಾಜಕಾರಣ, ವಿದ್ಯಮಾನ, ಬೆಳವಣಿಗೆಗಳ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ಆರ್. ನಿರಾಣಿ ಅವರು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ನಗರದಲ್ಲಿ ಚರ್ಚಿಸಿದರು.
ಪ್ರಸ್ತುತ ರಾಜಕೀಯ, ವಿದ್ಯಮಾನ ಬಗ್ಗೆ ಚರ್ಚೆ
ದಾವಣಗೆರೆ: ಜಿಲ್ಲೆಯ ಪ್ರಸ್ತುತ ರಾಜಕಾರಣ, ವಿದ್ಯಮಾನ, ಬೆಳವಣಿಗೆಗಳ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ಆರ್. ನಿರಾಣಿ ಅವರು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ನಗರದಲ್ಲಿ ಚರ್ಚಿಸಿದರು.ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶನಿವಾರ ಜಿಲ್ಲೆಯ ಪ್ರಸ್ತುತ ರಾಜಕಾರಣ, ವಿದ್ಯಮಾನಗಳು, ಬೆಳವಣಿಗೆಗಳು ಸೇರಿದಂತೆ ಅನೇಕ ಪ್ರಮುಖ ವಿಷಯ, ವಿಚಾರಗಳ ಬಗ್ಗೆ ಮುರುಗೇಶ ನಿರಾಣಿ ಜಿಲ್ಲಾ ಮುಖಂಡರು, ಹಿರಿಯರ ಜೊತೆಗೆ ಚರ್ಚೆ ನಡೆಸಿದರು.
ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್, ಅಣಬೇರು ಎನ್.ಇ. ಜೀವನಮೂರ್ತಿ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ. ದಾಸಕರಿಯಪ್ಪ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ, ದೂಡಾ ಮಾಜಿ ಅಧ್ಯಕ್ಷರಾದ ಹಿರಿಯ ವಕೀಲ ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ, ಮುರುಗೇಶ ಆರಾಧ್ಯ, ನಗರಸಭೆ ಮಾಜಿ ಅಧ್ಯಕ್ಷ ಶಿವನಹಳ್ಳಿ ರಮೇಶ, ದೊಗ್ಗಳ್ಳಿ ವೀರೇಶ, ಸಂಗನಗೌಡ್ರು, ಅನಿಲ್ ಕತ್ತಲಗೆರೆ, ಶ್ಯಾಗಲೆ ದೇವೇಂದ್ರಪ್ಪ, ಅಣಜಿ ಗುಡ್ಡೇಶ, ಜಗದೀಶ ಯಕ್ಕನಹಳ್ಳಿ, ಎಂ.ಆರ್.ಮಹೇಶ ಹೊನ್ನಾಳಿ ಸೇರಿದಂತೆ ಅನೇಕರು ಸಭೆಯಲ್ಲಿದ್ದರು.ಚರ್ಚೆಯಾದ ವಿಚಾರಗಳು ಸದ್ಯ ಬಹಿರಂಗಗೊಂಡಿಲ್ಲ. ಆದರೆ, ಪಕ್ಷದ ಒಳಬೇಗುದಿ ಬಗ್ಗೆಯಂತೂ ಗಂಭೀರ ಚರ್ಚೆ ಆಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ರಹಸ್ಯ ಸಭೆ ನಡೆಸಿದ್ದ ರಾಜ್ಯಮಟ್ಟದ ಭಿನ್ನರ ಗುಂಪಿನ ಚರ್ಚೆಯ ಬೆನ್ನಲ್ಲೇ ದಾವಣಗೆರೆಯಲ್ಲೂ ಜಿಲ್ಲಾ ಮುಖಂಡರ ಸಭೆ ಗಮನ ಸೆಳೆದಿದೆ.