ನನ್ನ ಬಳಿಯೂ ದಾಖಲೆ ಇವೆ: ಭೈರೇಗೌಡ

| Published : Nov 30 2023, 01:15 AM IST

ಸಾರಾಂಶ

ನನ್ನ ಬಳಿಯೂ ದಾಖಲೆ ಇವೆ: ಭೈರೇಗೌಡ

ಕನ್ನಡಪ್ರಭ ವಾರ್ತೆ ವಿಜಯಪುರ ಶಾಸಕ ಬಿ.ಆರ್.ಪಾಟೀಲರ ಬಳಿ ದಾಖಲೆಗಳಿದ್ದರೆ ಅವನ್ನು ಮುಖ್ಯಮಂತ್ರಿಗೆ ಕೊಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬುಧವಾರ ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್‌.ಪಾಟೀಲ ಅವರ ಬಳಿ ದಾಖಲೆ ಇವೆ ಎನ್ನುತ್ತಾರೆ. ಇದ್ದರೆ ಸಂಬಂಧಿಸಿದವರಿಗೆ ಕೊಡಲಿ. ನನ್ನ ಬಳಿಯೂ ದಾಖಲೆಗಳಿವೆ ಎಂದು ಮಾಧ್ಯಮದ ಮುಂದೆ ತೋರಿಸಿ ಬಿ.ಆರ್‌.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದರು. ಸಿಎಂ ಕರೆಸಿ ಮಾತಾಡಲಿ:

ಶಾಸಕ ಯಶವಂತರಾಯಗೌಡ ಪಾಟೀಲರು ಕೂಡ ಈ ವಿಷಯಕ್ಕೆ ಸಂಬಂಧಿಸಿ ಮಾತನಾಡಿ, ನಾನು ಬಿ.ಆರ್.ಪಾಟೀಲರನ್ನು ಭೇಟಿಯಾಗಿಲ್ಲ. ಪತ್ರ ಮತ್ತು ಅವರ ರಾಜೀನಾಮೆ ವಿಷಯ ನನಗೆ ಗೊತ್ತಿಲ್ಲ. ನಾನು ಶಾಸಕಾಂಗ ಸಭೆಯಲ್ಲಿ ಅವರಿಗೆ ಬೆಂಬಲಿಸಿದ್ದೆ. ಅವರೊಬ್ಬ ಹಿರಿಯ ನಾಯಕ. ಅಂದು ಅವರು ಮಾತನಾಡಿದ್ದ ವಿಷಯಕ್ಕೆ ನನ್ನದೂ ಸೇರಿ ಅನೇಕರ ಬೆಂಬಲವಿದೆ. ಮುಖ್ಯಮಂತ್ರಿಗಳು ಅವರನ್ನು ಕರೆಸಿ ಮಾತನಾಡಬಹುದು ಎಂದು ಹೇಳಿದರು.