ಕಿಡಿಗೇಡಿಗಳಿಂದ ಕೆರೆಗೆ ವಿಷ ಹಾಕಿ ಮೀನುಗಳ ಮಾರಣಹೋಮ

| Published : Apr 24 2025, 11:49 PM IST

ಸಾರಾಂಶ

ಕಳೆದ ಎರಡು ವರ್ಷದಿಂದ ಅಂತಹ ಲಾಭವನ್ನು ಕಾಣಿಸದ ಹಿನ್ನೆಲೆಯಲ್ಲಿ ಉತ್ತಮ ಜಾತಿಯ ಮೀನಿನ ಮರಿಗಳನ್ನು ಈ ಬಾರಿ ಬಿಡಲಾಗಿದೆ. ಈಗಾಗಲೇ ಸಮೃದ್ಧವಾಗಿ ಮೀನುಗಳು ಬೆಳೆದು ಇನ್ನೇನು ಮಾರಾಟಕ್ಕೆ ಸಿದ್ಧತೆಯಾಗಿತ್ತು. ಇದನ್ನು ಸಹಿಸದೆ ಕೆಲ ಕಿಡಿಗೇಡಿಗಳು ಈ ಕೆಲಸವನ್ನು ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೊದಲು ನೀರನ್ನು ಸಂಬಂಧಪಟ್ಟ ಇಲಾಖೆಗೆ ಲ್ಯಾಬಿಗೆ ಕಳಿಸಿ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ವರದಿ ತಿಳಿಯುತ್ತದೆ. ಗ್ರಾಮ ಪಂಚಾಯತಿ ಮತ್ತು ಪೋಲಿಸರಿಗೆ ದೂರು ನೀಡಲಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ದುಷ್ಕರ್ಮಿಗಳು ಕೆರೆ ನೀರಿಗೆ ವಿಷ ಬೆರೆಸಿದ್ದರಿಂದ ಸಾವಿರಾರು ಮೀನುಗಳು ಮೃತಪಟ್ಟಿರುವ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.

ಉತ್ತಮ ಮಳೆ ಬಂದ ಕಾರಣ ಹೆಬ್ಬಾಳು ಸಮೀಪದ ವೀರಶೆಟ್ಟಿಕೆರೆ ಗ್ರಾಮದ ಕೆರೆ ತುಂಬಿದೆ. 25 ಎಕರೆ ವಿಸ್ತೀರ್ಣದ ಕೆರೆಗಳಲ್ಲಿ ಮೀನು ಸಾಕಣೆ ಮಾಡಲು ಹೆಬ್ಬಾಳು ಗ್ರಾಮದ ರುದ್ರೇಶ್ ಎಂಬುವರು ಹೆಬ್ಬಾಳು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಐದು ವರ್ಷಗಳಿಗೆ ರು 1.5 ಲಕ್ಷಕ್ಕೆ ಹರಾಜು ಮಾಡಿಕೊಂಡಿದ್ದರು. ಕಳೆದ ಎರಡು ವರ್ಷದಿಂದ ಅಂತಹ ಲಾಭ ಕಾಣಿಸಿಲ್ಲ, ಈ ಸಂಬಂಧ ಗುತ್ತಿಗೆದಾರರು ಮೀನುಸಾಕಣೆ ಕೇಂದ್ರದಿಂದ ಗೌರಿ, ರವ್‌, ಕಾಟ್ಲಾ ತಳಿಯ 40 ಸಾವಿರ ಮೀನಿನ ‌ಮರಿಗಳನ್ನು ಎರಡು ಬಾರಿ ಸಾವಿರ ರು. ಗಳ ವೆಚ್ಚದಲ್ಲಿ ಬಿಟ್ಟಿದ್ದಾರೆ. ಈಗ ಒಂದು ಮೀನು ಸರಾಸರಿ 500 ಗ್ರಾಂ ತೂಕವಿದೆ. ನಾಲ್ಕೈದು ತಿಂಗಳಲ್ಲಿ ಒಂದು ಮೀನು ಒಂದೂವರೆಯಿಂದ ಎರಡು ಕೆ.ಜಿ ತೂಕ ಬರುತ್ತಿತ್ತು. ಅಲ್ಲದೆ ಕಳೆದ ಬಾರಿ ಉಳಿದ ಮೀನುಗಳು ಎರಡು ಕೇಜಿ ತೂಕ ಇದ್ದವು, ಆದರೆ, ಈಗ ಯಾರೋ ನೀರಿನಲ್ಲಿ ವಿಷ ಬೆರೆಸಿದ್ದರಿಂದ ಸುಮಾರು ಸಾವಿರಾರು ಹೆಚ್ಚು ಮೀನುಗಳು ಸತ್ತಿವೆ ಎಂದು ರುದ್ರೇಶ್ ತಿಳಿಸಿದ್ದಾರೆ.