ಸಾರಾಂಶ
ಡಂಬಳ: ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಚಿಂತನೆ, ಸದಾ ಜನ ಸಾಮಾನ್ಯರೊಂದಿಗೆ ಬೆರತು ಜನಸ್ನೇಹಿ ಆಡಳಿತ ನೀಡುವ ಮೂಲಕ ಶಾಸಕ ಜಿ.ಎಸ್. ಪಾಟೀಲ ಅಪರೂಪದ ರಾಜಕಾರಣಿ ಎನಿಸಿದ್ದಾರೆ. ಬದುಕಿನುದ್ದಕ್ಕೂ ಜನಪರ ಕಾಳಜಿ ಇರಿಸಿಕೊಂಡು ಅದರಲ್ಲಿಯೇ ಸಂತೃಪ್ತಿ ಕಂಡ ಅವರು, ನಮ್ಮಂತಹ ರಾಜಕಾಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಯರಾಶಿ ಹೇಳಿದರು.
ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರ 78ನೇ ಜನ್ಮದಿನದ ಅಂಗವಾಗಿ ಬುಧವಾರ ಅವರ ಅಭಿಮಾನಿಗಳು ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸಸಿ ನೆಡುವ ಹಾಗೂ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 980 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 78ನೇ ಹುಟ್ಟುಹಬ್ಬ ಅವರ ಸಾರ್ಥಕ ಬದುಕಿಗೆ ಹಿಡಿದ ಕನ್ನಡಿ. ಸದಾ ಜನರ ಪರವಾಗಿ ಚಿಂತಿಸುವ ಈ ಭಾಗದಲ್ಲಿ ಜನ ಸಾಮಾನ್ಯರ ಜನನಾಯಕರಾಗಿ ಹೆಸರುವಾಸಿಗಿದ್ದು, ಅವರ ಜನ್ಮದಿನಕ್ಕೆ ದುಂದುವೆಚ್ಚ ಮಾಡದೆ ಸಸಿ ನೆಡುವುದು ಹಾಗೂ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅತ್ಯಂತ ಸಾರ್ಥಕವಾದದ್ದು ಎಂದರು.ಎಸ್‌ಸಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮರಿಯಪ್ಪ ಸಿದ್ದಣ್ಣವರ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಸಾವಿರ ಕೆರೆಗಳ ಸರದಾರ, ಬಡವರ, ದೀನದಲಿತರ, ಶೋಷಿತರ, ನೊಂದವರ ಪರವಾಗಿ ಸದಾ ಚಿಂತನೆ ಮಾಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.
ಯುವ ನೇತಾರ ಬಸವರಡ್ಡಿ ಬಂಡಿಹಾಳ ಮಾತನಾಡಿ, ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿರುತ್ತವೆ. ಈ ಭಾಗದಲ್ಲಿ ಬರದ ನಾಡು ಎಂದೆ ಬಿಂಬಿತವಾಗಿ ಗುಳೆ ಹೋಗುತ್ತಿದ್ದ ಜನರ ನೋವು ಅರಿತು ಈ ಭಾಗದ ಎಲ್ಲ ಕೆರೆಗಳನ್ನು ತುಂಭಿಸುವ ಮೂಲಕ ರೈತರ ಹಿತ ಕಾಯುವ ಈ ಭಾಗದ ಭಗೀರತರಾಗಿದ್ದಾರೆ ಎಂದರು.ಮುಖಂಡರಾದ ಮಹೇಶ ಗಡಗಿ, ಮುತ್ತಣ್ಣ ಕೊಂತಿಕಲ್, ಜಾಕೀರ ಮೂಲಿಮನಿ, ಬುಡ್ನೆಸಾಬ ಅತ್ತಾರ, ಕುಬೇರಪ್ಪ ಕೊಳ್ಳಾರ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶರಣು ಬಂಡಿಹಾಳ, ಉರ್ದುಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ. ಕಾಸ್ತಾರ, ಬಾಬುಸಾಬ್ ಮೂಲಿಮನಿ, ನಾಗೇಶ ಧರ್ಮಾಧಿಕಾರಿ, ನೂರಅಹ್ಮದ ಸರ್ಕವಾಸ, ಶಂಕ್ರಪ್ಪ ಗಡಗಿ, ಬಸವರಾಜ ಶಿರೂಳ, ಯುವ ನೇತಾರ ಮಲ್ಲಿಕಾರ್ಜುನ ಪ್ಯಾಟಿ, ಸುರೇಶ ಗಡಗಿ, ಫಕ್ಕೀರಪ್ಪ ಆದಮ್ಮನವರ, ಶರಣಪ್ಪ ಪ್ಯಾಟಿ, ಬಾಬುಸಾಬ್ ಸರ್ಕವಾಸ, ಯಂಕಣ್ಣ ಗಡಗಿ, ಶರಣು ಬಂಡಿಹಾಳ, ಮಹೇಶ ಗುಡ್ಡದ, ಮಹೇಶ ಬಿಸನಹಳ್ಳಿ, ಮಂಜುನಾಥ ತಳವಾರ, ಬಾಲಚಂದ್ರ ಸಿದ್ದಣ್ಣವರ, ಆದಿತ್ಯ ಗದಗಿನ, ಹುಸೇನ ದೊಡ್ಡಮನಿ, ಮಳ್ಳಪ್ಪ ಒಂಟೆಲಭೋವಿ, ಮಂಜುನಾಥ ನರಗುಂದ ಇದ್ದರು.