ಹನೂರಿನ ಉಡುತೊರೆ ಜಲಾಶಯಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ, ಪರಿಶೀಲನೆ

| Published : Aug 23 2024, 01:06 AM IST

ಹನೂರಿನ ಉಡುತೊರೆ ಜಲಾಶಯಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುತೊರೆ ಜಲಾಶಯಕ್ಕೆಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹನೂರು ತಾಲೂಕಿನ ಅಜ್ಜೀಪುರ ಸಮೀಪದಲ್ಲಿ ಬರುವ ಉಡುತೊರೆ ಜಲಾಶಯ ಬಲದಂಡೆ ಗೇಟ್ ದುರಸ್ತಿ ಪಡಿಸಿರುವುದನ್ನು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ಉಡುತೊರೆ ಜಲಾಶಯಕ್ಕೆಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹನೂರು ತಾಲೂಕಿನ ಅಜ್ಜೀಪುರ ಸಮೀಪದಲ್ಲಿ ಬರುವ ಉಡುತೊರೆ ಜಲಾಶಯ ಬಲದಂಡೆ ಗೇಟ್ ದುರಸ್ತಿ ಪಡಿಸಿರುವುದನ್ನು ಪರಿಶೀಲನೆ ನಡೆಸಿದರು.ಬಹು ನಿರೀಕ್ಷಿತ ಬಹುಕೋಟಿ ವೆಚ್ಚದ ಉಡುತೊರೆ ಜಲಾಶಯ ಸಂಬಂಧಿಸಿದ ನೀರಾವರಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಸದುದ್ದೇಶದಿಂದ ಮಾಡಲಾಗಿರುವ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಒದಗಿಸುವ ಹಿನ್ನೆಲೆಯಲ್ಲಿ ಇಲ್ಲಿನ ಸಮಸ್ಯೆಗಳನ್ನು ವಿಸ್ತಾರವಾಗಿ ಅಧಿಕಾರಿಗಳ ಜೊತೆ ಮತ್ತು ನೀರಾವರಿ ಸಚಿವರ ಜೊತೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಗೆ ಇದರ ಸದ್ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಮೂಲಕ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ನಾಲೆಗಳ ದುರಸ್ತಿಗೆ ಕ್ರಮ: ಎಡದಂಡೆ ಬಲದಂಡೆ ನಾಲೆಗಳ ಒಳಭಾಗದಲ್ಲಿ ಮತ್ತು ಮೇಲ್ಭಾಗದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿದ್ದು ಈ ಹಿಂದೆ ಹಲವಾರು ವರ್ಷಗಳಿಂದ ನಾಲೆಯಲ್ಲಿರುವ ರಾಡಿಗಳನ್ನು ಸ್ವಚ್ಛಗೊಳಿಸದೆ ಹಾಗೆ ಇರುವುದರಿಂದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಾರಿಯಾದರೂ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಪ್ರವೀಣ್, ಮುಖಂಡರಾದ ಚಿನ್ನವೆಂಕಟ, ಬಾಬು, ಮುಸ್ತಪ್ಪ, ಡಿ.ಆರ್ ಮಾದೇಶ್, ವಿಜಯ್ ಕುಮಾರ್, ಡಿ.ಕೆ ರಾಜು, ಅತಿಕ್, ಶಿವರುದ್ರ, ಎಸ್.ಆರ್ ಮಹಾದೇವ್, ಸುರೇಶ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.