ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಅಭಿವೃದ್ಧಿ ಹರಿಕಾರ

| Published : Jun 11 2024, 01:32 AM IST

ಸಾರಾಂಶ

ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕರ ಹುಟ್ಟುಹಬ್ಬದ ಹಿನ್ನೆಲೆ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಇಡೀ ರಾಜ್ಯವೇ ಪ್ರಶಂಸಿಸುತ್ತಿದೆ. ಇಡೀ ರಾಜ್ಯವೇ ಚಳ್ಳಕೆರೆ ಅಭಿವೃದ್ಧಿ ಬಗ್ಗೆ ಅಭಿಮಾನಪಡುವಂತಹ ಕಾರ್ಯ ಮಾಡಿರುವ ಈ ಕ್ಷೇತ್ರದ ಹ್ಯಾಟ್ರಿಕ್ ಹೀರೋ ಸಾಧಕ ಟಿ.ರಘುಮೂರ್ತಿಯವರ ೬೧ನೇ ಹುಟ್ಟುಹಬ್ಬದಂದು ನಾವೆಲ್ಲರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆದು ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡಲಿ ಎಂದು ಭಗವಂತನನ್ನು ಪ್ರಾರ್ಥಿಸೋಣವೆಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಟಿ.ಪ್ರಭುದೇವ್ ತಿಳಿಸಿದರು.ನಗರದ ಶಾಸಕರ ಖಾಸಗಿ ನಿವಾಸದಲ್ಲಿ ಟಿ.ರಘುಮೂರ್ತಿ ಅನುಪಸ್ಥಿತಿಯಲ್ಲಿ ಅವರ ೬೧ನೇ ಹುಟ್ಟುಹಬ್ಬ ಕಾರ್ಯಕ್ರಮ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಎತ್ತರಕ್ಕೆ ಒಯ್ದ ಕೀರ್ತಿ ಅವರದ್ದು. ಅವರ ಸಾಧನೆ ಈ ಕ್ಷೇತ್ರದಲ್ಲಿ ಎಂದೂ ಶಾಶ್ವತವಾಗಿರುತ್ತದೆ ಎಂದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕರ ಹುಟ್ಟುಹಬ್ಬದ ಹಿನ್ನೆಲೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಆಸ್ಪತ್ರೆ ರೋಗಿಗಳಿಗೆ ಬ್ರೆಡ್, ಹಾಲು, ಹಣ್ಣು ವಿತರಿಸಿದರು. ಅಭಿಮಾನಿ ಬಳಗದಿಂದ ಬೆಂಗಳೂರು ರಸ್ತೆ ಬನಶ್ರೀವೃದ್ಧಾಶ್ರಮದಲ್ಲಿ ಒಂದು ತಿಂಗಳ ಆಹಾರ ಸಾಮಾಗ್ರಿ ವಿತರಣೆ ಮಾಡಲಾಯಿತು. ಈ ವೇಳೆ ಆಡಳಿತಾಧಿಕಾರಿ ಡಾ.ಜೆ.ಡಿ.ವೆಂಕಟೇಶ್, ಡಾ.ಆರ್.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಸಿ.ವೀರಭದ್ರಬಾಬು, ಆರ್.ಪ್ರಸನ್ನಕುಮಾರ್, ನಗರಸಭೆ ನಾಮಿನಿ ಸದಸ್ಯರಾದ ಅನ್ವರ್‌ ಮಾಸ್ಟರ್, ನೇತಾಜಿ ಪ್ರಸನ್ನ, ನಟರಾಜು, ವೀರಭದ್ರ, ಮುಖಂಡರಾದ ಎಂ.ಚೇತನ್‌ಕುಮಾರ್, ಲಕ್ಷ್ಮೀ ದೇವಿ, ಬಡಗಿಪಾಪಣ್ಣ, ಭಾಗ್ಯಮ್ಮ, ಉಷಾ, ಗೀತಾಬಾಯಿ, ಭಾನುವೀರೇಶ್, ಸ್ವಾಮಿ, ಸೈಪುಲ್ಲಾ, ಭೀಮಣ್ಣ, ಮಂಜುನಾಥಸ್ವಾಮಿ, ಸಿದ್ದಾಪುರ ಮಂಜಣ್ಣ, ನಗರಂಗೆರೆ ದ್ಯಾಮಣ್ಣ, ರುದ್ರಮುನಿ ಮುಂತಾದವರು ಇದ್ದರು.