ಮನುಷ್ಯ ಧರ್ಮದ ಪ್ರತಿನಿಧಿಯಾಗಿ ಶರಣ ಧರ್ಮವಾಯಿತು

| Published : Mar 13 2025, 12:50 AM IST

ಸಾರಾಂಶ

ಮನುಷ್ಯ ಧರ್ಮದ ಪ್ರತಿನಿಧಿಯಾಗಿ ಶರಣ ಧರ್ಮವಾಯಿತು ಕಾಯಕ ದಾಸೋಹದಲ್ಲಿ ಪ್ರಾಮಾಣಿಕತೆಯನ್ನು ಕಂಡ ಯುಗ ವಚನ ಯುಗವಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುಸಮ ಸಮಾಜದ ಪರಿಕಲ್ಪನೆ ಸಾಂಸ್ಕೃತಿಕ ನೆಲಗಟ್ಟಿನಿಂದ ಮಹಿಳಾ ಸಮವಾಗಿತ್ವ ಸಹಭಾಗಿತ್ವದ ಮೊದಲ ಹೆಜ್ಜೆಯಾಗಿ 12ನೇ ಶತಮಾನ ಸಾಂಸ್ಕೃತಿಕ ಅರಿವನ್ನು ಮೂಡಿಸಿತು ಎಂದು ಕನ್ನಡ ಸಹ ಪ್ರಾಧ್ಯಾಪಕಿ ಪ್ರೊ. ಮೈಸೂರು ಲತಾ ಅಭಿಪ್ರಾಯಪಟ್ಟರು.ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾ ವಿದ್ಯಾಲಯ ಕನ್ನಡ ವಿಭಾಗ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣಾ ಮತ್ತು ವಿಸ್ತರಣಾ ಪೀಠ ಮೈಸೂರು ಸುದ್ದಿಯಲ್ಲಿ ಮೈಸೂರು ಇವರ ಸಹಯೋಗದಲ್ಲಿ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದ ಅರಿವಿನ ಮಾರಿತಂದೆ ವಚನಗಳ ಕುರಿತು ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯ ಅಂಗವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಮನುಷ್ಯ ಧರ್ಮದ ಪ್ರತಿನಿಧಿಯಾಗಿ ಶರಣ ಧರ್ಮವಾಯಿತು ಕಾಯಕ ದಾಸೋಹದಲ್ಲಿ ಪ್ರಾಮಾಣಿಕತೆಯನ್ನು ಕಂಡ ಯುಗ ವಚನ ಯುಗವಾಗಿದೆ. ಪರ್ಯಾಯ ಸಮಾಜವನ್ನು ಕಟ್ಟುವುದರೊಂದಿಗೆ ಸಮಾನತೆಯನ್ನು ಧರ್ಮದಲ್ಲಿ ದಯೆಯನ್ನು ತೆಗೆಯಲಿ ಧರ್ಮವನ್ನು ಕಂಡವರು ವಚನಕಾರರು ದೇಹವೇ ದೇಗುಲವಾಗಿಸುವ ಚಿಂತನೆಯನ್ನು ಕಾಣ ಬಯಸಿದವರು ಹೆಣ್ಣಿಗೆ ಸೌಂದರ್ಯ ಅಲ್ಲ ಸ್ವಾಭಿಮಾನಿಯ ಮುಖ್ಯ ಎಂಬ ಚಿಂತನೆ 12ನೇ ಶತಮಾನದಲ್ಲಿ ಅಕ್ಕನ ಹಾಗೂ ಇತರ ವಚನಕಾರ್ತಿಯರ ವಚನಗಳಲ್ಲಿ ಅಭಿವ್ಯಕ್ತಗೊಂಡಿದೆ. ಆತ್ಮ ಜೀವನದ ಮೂಲಕ ಸಮಾಜದ ಸುಧಾರಣೆಯನ್ನು ಕಾಣಬೇಕು ಇಂದಿನ ಮಹಿಳಾ ಲೋಕ ಅರಿವು ಮತ್ತು ಪ್ರಜ್ಞೆ ಗಳ ಮೂಲಕ ವರ್ತಮಾನ ಸಮಾಜವನ್ನು ಭೇದಿಸುವ ಮತ್ತು ತನ್ನ ಸ್ಥಾನವನ್ನು ಭದ್ರಪಡಿಸುವ ಹಾದಿಯನ್ನು ಕಾಣಬೇಕಾಗಿದೆ, ಸತ್ಯದ ದರ್ಶನ ಪ್ರಾಮಾಣಿಕತೆ ಕಾಯಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದು, ವಚನ ಪರಂಪರೆಯಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ಭಾರತೀ ಮಾತನಾಡಿ, ವಚನ ಸಾಹಿತ್ಯದ ಮೂಲಕ ಜ್ಞಾನವನ್ನು ಅತ್ಯಂತ ಸರಳವಾಗಿ ಪಡೆಯುವ ದಾರಿ 12ನೇ ಶತಮಾನದಲ್ಲಿ ಕಾಣಬಹುದು. ಬಸವಣ್ಣ ಅಕ್ಕಮಹಾದೇವಿ ಅಲ್ಲಮಪ್ರಭು ಇವರ ಜೊತೆಯಲ್ಲಿಯೇ ಆಲಕ್ಷಿತ ವಚನಕಾರರು ಮತ್ತು ವಚನಕಾರ್ತಿಯರು ತಮ್ಮ ಕಾಲಘಟ್ಟದ ಸತ್ಯವನ್ನು ತಿಳಿಸುವ ಆತ್ಮಧ್ಯನದ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು. ಉಪನ್ಯಾಸ ಸರಣಿ ಮಾಲಿಕೆಯ ಸಂಚಾಲಕ ಮೈಲಹಳ್ಳಿ ರೇವಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿನೋದ ಶ್ರೀ, ಸಹಾಯಕ ಪ್ರಾಧ್ಯಾಪಕರಾದಬಿ.ಎನ್. ಮಾರುತಿ ಪ್ರಸನ್ನ, ಅರುಣ್ ಕುಮಾರ್ ಮತ್ತು ವಿದ್ಯಾರ್ಥಿನಿಯರು ಇದ್ದರು.