ಶೇ.25ರಷ್ಟು ಮಳೆ ಕೊರತೆಯೊಂದಿಗೆ ಮುಂಗಾರು ಮುಕ್ತಾಯ
KannadaprabhaNewsNetwork | Published : Oct 04 2023, 01:00 PM IST
ಶೇ.25ರಷ್ಟು ಮಳೆ ಕೊರತೆಯೊಂದಿಗೆ ಮುಂಗಾರು ಮುಕ್ತಾಯ
ಸಾರಾಂಶ
ಬರ, ಕುಡಿಯುವ ನೀರಿನ ಅಭಾವ, ಬೆಳೆ ಹಾನಿ ಸೇರಿದಂತೆ ಹತ್ತಾರು ಸಮಸ್ಯೆಗಳ ಸರಮಾಲೆಗಳೊಂದಿಗೆ ಪ್ರಸಕ್ತ ಸಾಲಿನ ಮುಂಗಾರು ವಿದಾಯ ಹೇಳುತ್ತಿದೆ.
ವಾಡಿಕೆಯ 85.2 ಸೆ.ಮೀ ಬದಲು 63.5 ಸೆ.ಮೀನಷ್ಟೇ ಸುರಿದ ಮುಂಗಾರು ಮಳೆ ಕಳೆದೊಂದು ದಶಕದಲ್ಲೇ ಅತಿದೊಡ್ಡ ಪ್ರಮಾಣದ ಮಳೆ ಕೊರತೆಗೆ ರಾಜ್ಯ ಸಾಕ್ಷಿ ವಿಶ್ವನಾಥ ಮಲೇಬೆನ್ನೂರು ಕನ್ನಡಪ್ರಭ ವಾರ್ತೆ ಬೆಂಗಳೂರು ಬರ, ಕುಡಿಯುವ ನೀರಿನ ಅಭಾವ, ಬೆಳೆ ಹಾನಿ ಸೇರಿದಂತೆ ಹತ್ತಾರು ಸಮಸ್ಯೆಗಳ ಸರಮಾಲೆಗಳೊಂದಿಗೆ ಪ್ರಸಕ್ತ ಸಾಲಿನ ಮುಂಗಾರು ವಿದಾಯ ಹೇಳುತ್ತಿದೆ. ರಾಜ್ಯದಲ್ಲಿ ಈ ಬಾರಿ ಉಂಟಾಗಿರುವ ಶೇ.25 ರಷ್ಟು ಮಳೆ ಕೊರತೆಯೂ ಕಳೆದೊಂದು ದಶಕದ ಅತಿ ದೊಡ್ಡ ಪ್ರಮಾಣದ ಕೊರತೆಯಾಗಿದೆ. ಹವಾಮಾನ ಇಲಾಖೆಯು ಜೂನ್ 1 ರಿಂದ ಸೆಪ್ಟಂಬರ್ 30 ವರೆಗಿನ ಅವಧಿಯನ್ನು ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಆ ಪ್ರಕಾರವೇ ಮಳೆ ಪ್ರಮಾಣದ ಅಂಕಿ ಅಂಶ ದಾಖಲು ಮಾಡಲಾಗುತ್ತದೆ. ಆ ಪ್ರಕಾರ ಶನಿವಾರ (ಸೆ.30) ಕ್ಕೆ ಮುಂಗಾರು ಮುಕ್ತಾಯಗೊಳ್ಳಲಿದೆ. ಜೂನ್‌ನಿಂದ ಸೆಪ್ಟಂಬರ್ ವರೆಗೆ ರಾಜ್ಯದಲ್ಲಿ ವಾಡಿಕೆ ಪ್ರಕಾರ 85.2 ಸೆಂ.ಮೀ ಮಳೆಯಾಗಬೇಕು. ಆದರೆ, ಈ ಬಾರಿಗೆ ಕೇವಲ 63.5 ಸೆಂ.ಮೀ ಮಳೆಯಾಗಿದೆ. ಈ ಮೂಲಕ ಶೇ.25 ರಷ್ಟು ಮಳೆ ಕೊರತೆಯಾಗಿದೆ. ಜೂನ್ ಮೊದಲ ವಾರದಲ್ಲಿ ಅರಬ್ಬಿ ಸಮುದ್ರದಲ್ಲಿ "ಬಿಪರ್ ಜಾಯ್ " ಚಂಡಮಾರುತದಿಂದ ಮುಂಗಾರು ದುರ್ಬಲಗೊಂಡಿತ್ತು. ಹಾಗಾಗಿ, ಒಂದು ವಾರ ತಡವಾಗಿ ಪ್ರವೇಶಿಸಿದ ಮುಂಗಾರು ಚುರುಕುಗೊಳ್ಳಲಿಲ್ಲ. ಇನ್ನು ಜೂನ್ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದ್ದು, ಬಿಟ್ಟರೇ ಇಡೀ ಅವಧಿ ಮಳೆ ಕೊರತೆಯೇ ಮುಂದುವರೆಯುತ್ತಾ ವಿದಾಯ ಹೇಳುತ್ತಿದೆ. ಇದರಿಂದ ರಾಜ್ಯದ ಒಟ್ಟು 91 ತಾಲೂಕುಗಳಲ್ಲಿ ಬರ ಉಂಟಾಗಿದೆ. ಜಲಾಶಯಗಳಲ್ಲಿ ಕುಡಿಯುವುದಕ್ಕೂ ನೀರಿನ ಲಭ್ಯತೆ ಇಲ್ಲವಾಗಿದೆ. ಬೆಳೆಗಳು ಒಣಗಿವೆ. 11 ವರ್ಷದಲ್ಲಿ ಅತಿ ದೊಡ್ಡ ಮಳೆ ಕೊರತೆ ಮುಂಗಾರು ಅವಧಿಯಲ್ಲಿ ಈ ಬಾರಿ ಉಂಟಾಗಿರುವ ಶೇ.25 ರಷ್ಟು ಮಳೆ ಕೊರತೆಯೂ ಬರೋಬ್ಬರು ಒಂದು ದಶಕದ ಅತಿ ಹೆಚ್ಚು ಕೊರತೆ ಉಂಟಾದ ವರ್ಷವಾಗಿದೆ. 2012ರದಲ್ಲಿ ಶೇ.26 ರಷ್ಟು ಮಳೆ ಕೊರತೆ ಉಂಟಾಗಿತ್ತು. ಬಳಿಯ ಈ ಬಾರಿ ಶೇ.25 ರಷ್ಟು ಮಳೆ ಕೊರತೆ ಉಂಟಾಗಿದೆ. 53 ವರ್ಷದಲ್ಲಿ 3ನೇ ಅತ್ಯಧಿಕ ಕೊರತೆ ಕಳೆದ 53 ವರ್ಷದ ಮುಂಗಾರು ಮಳೆಯ ಅಂಕಿ ಅಂಶ ಗಮನಿಸಿದರೆ, 2002ರಲ್ಲಿ ಶೇ.33 ರಷ್ಟು ಮಳೆ ಕೊರತೆ ಆಗಿರುವುದು ಅತಿ ದೊಡ್ಡ ಕೊರತೆಯಾಗಿದೆ. 2012ರದಲ್ಲಿ ಶೇ.26 ರಷ್ಟು ಮತ್ತು 1985 ಹಾಗೂ 2015ರಲ್ಲಿ ಶೇ.23 ರಷ್ಟು ಮಳೆ ಕೊರತೆ ಉಂಟಾಗಿತ್ತು. ಈ ಪ್ರಕಾರ ಪ್ರಸಕ್ತ ವರ್ಷ ಮಳೆ ಪ್ರಮಾಣವು ಕಳೆದ 53 ವರ್ಷದಲ್ಲಿ ಉಂಟಾದ ಮೂರನೇ ಅತ್ಯಧಿಕ ಮಳೆ ಕೊರತೆ ದಾಖಲಾದ ವರ್ಷವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ ಎನ್‌ಡಿಎಂಸಿ) ತಿಳಿಸಿದೆ. ರಾಜ್ಯದ ಎಲ್ಲಾ 31 ಜಿಲ್ಲೆಯಲ್ಲಿಯೂ ಕೊರತೆ ರಾಜ್ಯದ ಒಟ್ಟು 22 ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. 9 ಜಿಲ್ಲೆಗಳಲ್ಲಿ ವಾಡಿಕೆಯ ಸಮೀಪದಷ್ಟು ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. ಆದರೆ, ಎಲ್ಲಾ ಜಿಲ್ಲೆಯೂ ಮಳೆ ಕೊರತೆ ಇದೆ. ಇನ್ನು ಎರಡು ತಾಲೂಕುಗಳಾದ ಬಳ್ಳಾರಿ ಹಾಗೂ ಸಿಂದನೂರು ತೀವ್ರ ಮಳೆ ಕೊರತೆ ಆಗಿದೆ. 143 ತಾಲೂಕುಗಳಲ್ಲಿ ಕೊರತೆ, 88 ತಾಲೂಕುಗಳಲ್ಲಿ ವಾಡಿಕೆ ಹಾಗೂ ಮೂರು ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣ ಮಳೆಯಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಕೊರತೆ? ಬೀದರ್ ನಲ್ಲಿ ಶೇ.11 ರಷ್ಟು ಕೊರತೆ, ಕಲಬುರಗಿಯಲ್ಲಿ 4, ಯಾದಗಿರಿ 9, ವಿಜಯಪುರ 24, ರಾಯಚೂರು 20, ಬಾಗಲಕೋಟೆ 32, ಬೆಳಗಾವಿ 13, ಕೊಪ್ಪಳ 28, ಬಳ್ಳಾರಿ 48, ಗದಗ ಹಾಗೂ ಧಾರಾವಾಡದಲ್ಲಿ ತಲಾ 22, ಉತ್ತರ ಕನ್ನಡ 16, ಹಾವೇರಿ 31, ವಿಜಯನಗರ 39, ಶಿವಮೊಗ್ಗ 38, ದಾವಣಗೆರೆ 21, ಚಿತ್ರದುರ್ಗ 34, ಉಡಪಿ 22, ಚಿಕ್ಕಮಗಳೂರು 41, ತುಮಕೂರು 16, ಹಾಸನ 36, ದಕ್ಷಿಣ ಕನ್ನಡ 24, ಕೊಡಗು 42, ಮೈಸೂರು 36, ಮಂಡ್ಯ 32, ಚಾಮರಾಜನಗರ 36, ರಾಮನಗರ 35, ಬೆಂಗಳೂರು ನಗರ 30, ಬೆಂಗಳೂರು ಗ್ರಾಮಾಂತರ 7, ಚಿಕ್ಕಬಳ್ಳಾಪುರ 19 ಹಾಗೂ ಕೋಲಾರದಲ್ಲಿ ಶೇ.9 ರಷ್ಟು ಮಳೆ ಕೊರತೆಯಾಗಿದೆ. --ಬಾಕ್ಸ್-- ಪ್ರಸಕ್ತ ಮುಂಗಾರಿನ ಯಾವ ತಿಂಗಳಲ್ಲಿ ಎಷ್ಟು ಮಳೆ? (ಸೆಂ.ಮೀ) ತಿಂಗಳುವಾಡಿಕೆಸುರಿದ ಮಳೆಶೇ ಜೂನ್19.98.756 (ಕೊರತೆ) ಜುಲೈ27.134.929 (ಹೆಚ್ಚು) ಆಗಸ್ಟ್22.06.073 (ಕೊರತೆ) ಸೆಪ್ಟಂಬರ್15.413.910 (ಕೊರತೆ) ಒಟ್ಟು84.563.525(ಕೊರತೆ) ಬಾಕ್ಸ್ ಕಳೆದ 11 ವರ್ಷದ ಮುಂಗಾರು ಮಳೆ ವಿವರ (ಸೆಂ.ಮೀ) ವರ್ಷಮಳೆ ಪ್ರಮಾಣಶೇಕಡಾ ಪ್ರಮಾಣ 201261.826 (ಕೊರತೆ) 201393.411 (ಹೆಚ್ಚು) 201483.31 (ಹೆಚ್ಚು) 201565.222 (ಕೊರತೆ) 201669.018 (ಕೊರತೆ) 201777.48 (ಕೊರತೆ) 201880.46 (ಕೊರತೆ) 201997.514 (ಹೆಚ್ಚು) 202099.317 (ಹೆಚ್ಚು) 202178.78 (ಕೊರತೆ) 2022101.920 (ಹೆಚ್ಚು) 202363.525 (ಕೊರತೆ)