ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುನಗರಸಭಾ ವ್ಯಾಪ್ತಿಯ ನಾಗರೀಕರ ಸಮಸ್ಯೆಗಳನ್ನು ತಂತ್ರಜ್ಞಾನವನ್ನು ಬಳಸಿಕೊಂಡು ತ್ವರಿತವಾಗಿ ಬಗೆಹರಿಸಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ದೇಶದಲ್ಲೇ ಮೊದಲ ಬಾರಿಗೆ ಎಲ್ಲ ವಾರ್ಡ್‌ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ನಗರಸಭೆ ನಂಜನಗೂಡು ಎನಿಸಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ನಗರಸಭೆಯ ಆವರಣದಲ್ಲಿ ವಾರ್ಡ್ ಗಳಲ್ಲಿ ಅಳವಡಿಸಲಾಗುವ ಕ್ಯೂಆರ್ ಕೋಡ್ ಬೋರ್ಡ್‌ಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.ನಗರಸಭೆಯ ವ್ಯಾಪ್ತಿಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಜನರ ಸಮಸ್ಯೆಯನ್ನು ಆಲಿಸುವ ಸಂದರ್ಭದಲ್ಲಿ ನಗರ ಸಭೆಯ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಗಣಿಸಿ ತ್ವರಿತವಾಗಿ ಕೆಲಸ ಮಾಡುತ್ತಿಲ್ಲ, ಎಂಬುದಾಗಿ ದೂರು ಕೇಳಿ ಬರುತ್ತಿತ್ತು, ಆದ್ದರಿಂದ ಸಾರ್ವಜನಿಕರ ಮೂಲಭೂತ ಸೌಲಭ್ಯ, ಸೇವೆಗಳಿಗೆ ಸಂಬಂಧಪಟ್ಟ ಸಮಸ್ಯೆ, ದೂರುಗಳ ನಿರ್ವಹಣೆಗೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ಅನೂಕೂಲವಾಗುವಂತೆ ಅಶೋಕ ವಿಶ್ವವಿದ್ಯಾಲಯ ಮತ್ತು ಐಸಾಕ್ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಸಹಯೋಗದೊಂದಿಗೆ ಸಿವಿಕ್ ಪೋರ್ಟಾಲ್ ಡಿಜಿಟಲ್ ಸೇವೆಗೆ ಚಾಲನೆ ನೀಡಲಾಗಿದೆ ಎಂದರು.ಮಹಾನಗರ ಪಾಲಿಕೆಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಈ ಸೇವೆ ಚಾಲ್ತಿಯಲ್ಲದೆ, ದೇಶದಲ್ಲೇ ನಂಜನಗೂಡು ನಗರಸಭೆ ಈ ತಂತ್ರಾಂಶ ಬಳಸಿಕೊಂಡು ಜನರ ಸೇವೆಗೆ ಅಳವಡಿಸಿಕೊಂಡ ಮೊದಲ ನಗರಸಭೆಯಾಗಿದೆ. ಅಶೋಕ ವಿಶ್ವವಿದ್ಯಾಲಯ ಮತ್ತು ಐಸಾಕ್ ಸೆಂಟರ್ ನ ಐಶ್ವರ್ಯ ಸುನಾದ್ ತಂಡ ಉಚಿತವಾಗಿ ನಗರಸಭೆಗೆ ತಂತ್ರಜ್ಞಾನವನ್ನು ಅಳವಡಿಸಿದ್ದು, ನಗರದ ನಾಗರೀಕರಿಗೆ ಸೇವೆ ಒದಗಿಸಲು ಸಹಾಯ ಮಾಡಿದ್ದಾರೆ ಎಂದು ಅವರು ತಿಳಿಸಿದರು.ಪಟ್ಟಣದ 31 ವಾರ್ಡ್ ಗಳಲ್ಲಿ ಪ್ರತಿ ವಾರ್ಡಿನ 3 ಕಡೆ ಕ್ಯೂ ಆರ್ ಕೋಡ್ ಅಳವಡಿಸಲಾಗುವುದು, ಜನಸಾಮಾನ್ಯರು ತಮ್ಮ ವಾರ್ಡಿನ ಹಾಗೂ ನಗರಸಭೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ಕ್ಯೂ ಆರ್ ಕೋಡ್ ಬಳಸುವ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ, ಅಧಿಕಾರಿಗಳು ಸ್ಪಂದಿಸದಿದ್ದರೆ ಈ ಸೌಲಭ್ಯದ ಮೂಲಕ ದೂರು ದಾಖಲಿಸಬಹುದಾಗಿದೆ, ಯೋಜನೆ ಯಶಸ್ವಿಯಾಗಿ ಜನಸಾಮಾನ್ಯರ ಸಮಸ್ಯೆ ಪರಿಹಾರದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಹೆಜ್ಜೆಯಾಗಲಿದ್ದು, ನಂಜನಗೂಡು ಇತಿಹಾಸ ಪುಟವನ್ನು ಸೇರಲಿದೆ ಎಂದು ತಿಳಿಸಿದರು. ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ಕಾಂಗ್ರೆಸ್ ಅಧಿಕಾರ ಹಿಡಿದ ನಂತರ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ಸಹಕಾರದಿಂದ ನಮ್ಮ ಅವಧಿಯಲ್ಲಿ ಸುಮಾರು 65 ಕೋಟಿಗಿಂತಲೂ ಹೆಚ್ಚಿನ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗಿದೆ, ಅಲ್ಲದೆ ನಮ್ಮ ಅಧಿಕಾರ ಅವಧಿ ನಂಬರ್ 1ರಿಂದ ಮುಕ್ತಾಯಗೊಳ್ಳಲಿದ್ದು ನಾಗರಿಕರ ಸಮಸ್ಯೆ ಬಗೆಹರಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಸಹಕಾರಿಯಾಗಲಿದೆ, ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸಾರ್ವಜನಿಕರು ಕಚೇರಿಗೆ ಅಲೆಯಬೇಕಿಲ್ಲ ಬದಲಾಗಿ ಈ ವ್ಯವಸ್ಥೆಯಿಂದ ಕುಳಿತಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ನಗರಸಭಾ ಉಪಾಧ್ಯಕ್ಷೆ ರಿಯಾನಾ ಬಾನು, ಸದಸ್ಯರಾದ ಎಚ್.ಎಸ್. ಮಹದೇವಸ್ವಾಮಿ, ಗಂಗಾಧರ್, ಮಹೇಶ್ ಅತ್ತಿಖಾನೆ, ಎಸ್.ಪಿ. ಮಹೇಶ್, ಶ್ವೇತಲಕ್ಷ್ಮಿ, ಎನ್.ಎಸ್. ಯೋಗೀಶ್, ಮಹದೇವಮ್ಮ ಬಾಲಚಂದ್ರ, ನಾಗಮಣಿ, ಪ್ರದೀಪ್, ಮಹದೇವಪ್ರಸಾದ್, ಕೆ.ಎಂ. ಬಸವರಾಜು, ರಮೇಶ್, ಖಾಲಿದ್ ಅಹಮದ್, ಸಿದ್ದಿಕ್, ಮುಖಂಡರಾದ ನಾಗರಾಜು, ಪುಷ್ಪಲತಾ ಕಮಲೇಶ್, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ನಗರಸಭಾ ಆಯುಕ್ತ ವಿಜಯ್, ಎಇಇ ಮಹೇಶ್, ಸಮಂತ್, ಪರಿಸರ ವಿಭಾಗ ಎಂಜಿನಿಯರುಗಳಾದ ಮೈತ್ರಾವತಿ, ಸಿವಿಕ್ ಯೋಜನೆಯ ಸಂಶೋಧನಾ ಮುಖ್ಯಸ್ಥೆ ಐಶ್ವರ್ಯ ಸುನಾದ್ ಇದ್ದರು.
;Resize=(128,128))
;Resize=(128,128))
;Resize=(128,128))