ಸಾರಾಂಶ
ಶಿವಮೊಗ್ಗ ಕರ್ನಾಟಕ ಸ್ಟೇಟ್ ವನ್ನಿಯರ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ನೂತನ ಸಂಸದ ಮತ್ತು ಶಾಸಕರಿಗೆ ಸನ್ಮಾನ ಹಾಗೂ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕ ಸ್ಟೇಟ್ ವನ್ನಿಯರ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ನೂತನ ಸಂಸದ ಮತ್ತು ಶಾಸಕರಿಗೆ ಸನ್ಮಾನ ಹಾಗೂ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿನೋಬನಗರದಲ್ಲಿ ಆಯೋಜಿಸಲಾಗಿತ್ತು.ಮಾಜಿ ನಗರ ಸಭೆ ಸದಸ್ಯರು ಹಾಗೂ ಟ್ರಸ್ಟಿ ಎಂ.ಸುಬ್ರಹ್ಮಣಣಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂತನ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಶಾರದಾ ಪೂರ್ಯಾನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಜಿ.ವಿ.ಗಣೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವನ್ನಿಯರ್ ಟ್ರಸ್ಟ್‌ನ ಗೌರವ ಅಧ್ಯಕ್ಷ ಜಿ. ಲೋಕ ನಾಥ್, ವನ್ನಿಯರ್ ಮಹಾ ಸಭಾದ ಅಧ್ಯಕ್ಷ ಪರಶುರಾಮ್, ವನ್ನಿಯರ್ ಮಹಿಳಾ ಘಟಕದ ಅಧ್ಯಕ್ಷೆ ರಮಣಿ ಆರ್., ಕರ್ನಾಟಕ ರಾಜ್ಯ ವನ್ನಿಯರ್ ಕ್ಷತ್ರಿಯ ಸಂಘದ ಅಧ್ಯಕ್ಷ ಎಸ್.ಗಂಗಾಧರ್, ಬಿಜೆಪಿ ನಾಯಕರು ಹಾಗೂ ಸಮಾಜದ ಮುಖಂಡರಾದ ಟಿ. ಪೆರುಮಾಳ್, ತಮಿಳ್ ವನ್ನಿಗೌಂಡರ್ ಸಮಾಜದ ಚೆಲುವರಾಜ್, ಟ್ರಸ್ಟ್ ಕಾರ್ಯದರ್ಶಿ, ವಿ.ಮುರುಗೇಶ್ ತಿರುವಳರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಮರೇಶ್, ಪ್ರಮುಖರಾದ ರವಿಕುಮಾರ್, ರಂಗಸ್ವಾಮಿ ಭಾಗವಹಿಸಿದ್ದರು.ಈ ಸಂದರ್ಭ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ 72 ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಸಂಸದರಿಗೆ ಸಮಾಜದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.