ಮುಡಾ, ವಾಲ್ಮೀಕಿ ಹಗರಣ ಹೋರಾಟ ತೀವ್ರಕ್ಕೆ ಬಿಜೆಪಿ ಸಜ್ಜು

| Published : Jul 05 2024, 01:47 AM IST / Updated: Jul 05 2024, 10:55 AM IST

ಮುಡಾ, ವಾಲ್ಮೀಕಿ ಹಗರಣ ಹೋರಾಟ ತೀವ್ರಕ್ಕೆ ಬಿಜೆಪಿ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನ ಮುಡಾ ಹಗರಣ ಸೇರಿದಂತೆ ವಾಲ್ಮೀಕಿ ನಿಗಮದ ಹಗರಣ, ಬೆಲೆ ಏರಿಕೆ ಬಗ್ಗೆ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಮುಖ ಪ್ರತಿಪಕ್ಷ ಬಿಜೆಪಿ ತೀರ್ಮಾನಿಸಿದೆ.

 ಬೆಂಗಳೂರು :  ಮೈಸೂರಿನ ಮುಡಾ ಹಗರಣ ಸೇರಿದಂತೆ ವಾಲ್ಮೀಕಿ ನಿಗಮದ ಹಗರಣ, ಬೆಲೆ ಏರಿಕೆ ಬಗ್ಗೆ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಮುಖ ಪ್ರತಿಪಕ್ಷ ಬಿಜೆಪಿ ತೀರ್ಮಾನಿಸಿದೆ.

ಗುರುವಾರ ಪಕ್ಷದ ರಾಜ್ಯ ವಿಶೇಷ ಕಾರ್ಯಕಾರಿಣಿಯ ಬಳಿಕ ನಡೆದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮುಡಾ ಹಗರಣ ಸಂಬಂಧ ರಾಜೀನಾಮೆ ಅಥವಾ ಭಂಡತನದಿಂದ ಸಮರ್ಥನೆ ಮಾಡುವುದಷ್ಟೇ ಮುಖ್ಯಮಂತ್ರಿಗಳ ಮುಂದಿರುವ ಆಯ್ಕೆ. ಸಾರ್ವಜನಿಕವಾಗಿ ಬೆತ್ತಲಾದರೂ ಕೂಡ ಅದಕ್ಕೂ ಸಮರ್ಥನೆ ಕೊಡುವುದಾದರೆ ಇನ್ನೇನು ಹೇಳಲು ಸಾಧ್ಯ ಎಂದು ಹೇಳಿದರು.

224 ಕ್ಷೇತ್ರಗಳಲ್ಲಿ ಸಂಘಟನೆ ಬಲಪಡಿಸುವುದು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕೆಳಹಂತದ ಸಿದ್ಧತೆ ನಡೆಸಲು ನಿರ್ಧರಿಸಲಾಗಿದೆ. ಸಹಕಾರಿ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ತಂಡ ರಚಿಸಿ ಅದರ ಮೇಲ್ವಿಚಾರಣೆ, ಮಾರ್ಗದರ್ಶನ ಸೇರಿ ಹಲವು ವಿಷಯಗಳ ಚರ್ಚೆ ನಡೆಸಿದ್ದೇವೆ ಎಂದು ವಿವರ ನೀಡಿದರು.