ಸಾರಾಂಶ
ಮೂಲ್ಕಿಯ ಕಾರ್ನಾಡ್ ರೋಟರಿ ಕಟ್ಟಡ ಬಳಿ ಆರಂಭಗೊಂಡ ಸಂಜೀವಿನಿ ಉತ್ಪನ್ನಗಳ ನೂತನ ಮಳಿಗೆ ‘ಅಕ್ಕ’ವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಹಿಳೆಯರು ಸ್ವಉದ್ಯೋಗದ ಮೂಲಕ ಸ್ವಾವಲಂಬಿಗಳಾದಾಗ ಆರ್ಥಿಕ ಅಭಿವೃದ್ಧಿ ಸಾಧ್ಯವೆಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಮೂಲ್ಕಿಯ ಕಾರ್ನಾಡ್ ರೋಟರಿ ಕಟ್ಟಡ ಬಳಿ ಆರಂಭಗೊಂಡ ಸಂಜೀವಿನಿ ಉತ್ಪನ್ನಗಳ ನೂತನ ಮಳಿಗೆ ‘ಅಕ್ಕ’ವನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿ.ಪಂ.ನ ಯೋಜನಾ ನಿರ್ದೇಶಕ ಜಯರಾಮ್, ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಹರಿಪ್ರಸಾದ್, ಮೂಲ್ಕಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ ಬಿ., ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಸುಭಾಷ್ ಶೆಟ್ಟಿ, ರಾಧಿಕಾ ಕೋಟ್ಯಾನ್, ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಜಾ, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೇಮ್ಸ್ ಡಿಸೋಜ, ಹೆಜಮಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ, ಸ್ಪಂದನ ಸಂಜೀವಿನಿ ಒಕ್ಕೂಟ ಅತಿಕಾರಿಬೆಟ್ಟು ಮತ್ತು ಶಾಂಭವಿ ಸಂಜೀವಿನಿ ಒಕ್ಕೂಟ ಮೂಲ್ಕಿ ತಾಲೂಕಿನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ಷಗುತ್ತು ಮತ್ತಿತರರು ಉಪಸ್ಥಿತರಿದ್ದರು. ಮನೋಹರ ಕೋಟ್ಯಾನ್ ನಿರೂಪಿಸಿದರು.