ಸಾಮಾಜಿಕ ಶೈಕ್ಷಣಿಕ ಬುನಾದಿ ಹಾಕಿಕೊಟ್ಟವರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀ

| Published : Feb 21 2024, 02:01 AM IST

ಸಾಮಾಜಿಕ ಶೈಕ್ಷಣಿಕ ಬುನಾದಿ ಹಾಕಿಕೊಟ್ಟವರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕವಾಗಿ ಸಾಮಾಜಿಕವಾಗಿ ಆಸಕ್ತಿ ಉಳ್ಳಂತಹ ಸ್ವಾಮೀಜಿಯವರು ವಿದ್ಯಾರ್ಥಿನಿಲಯ ಮತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯಲ್ಲಿ ರಾಜ್ಯಾದ್ಯಂತ ಉಚಿತ ವಿದ್ಯಾರ್ಥಿನಿಲಯವನ್ನು ಮೊಟ್ಟಮೊದಲ ಬಾರಿಗೆ ತೆರೆದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ, 12ನೇ ಶತಮಾನ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನವರ ತತ್ವ ಆದರ್ಶಗಳು ಸರ್ವಕಾಲದಲ್ಲೂ ಅಜರಾಮರವಾಗಿರುತ್ತವೆ, ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ನಾಂದಿ ಆಗಬೇಕು. ಕರ್ನಾಟಕ ಸಾಂಸ್ಕೃತಿಕ ರಾಯಭಾರಿಯಾಗಿ ಬಸವಣ್ಣ ಅವರನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ

ಕನ್ನಡಪ್ರಭ ವಾರ್ತೆ ರಾವಂದೂರು

ಸಾಮಾಜಿಕ ಶೈಕ್ಷಣಿಕ ಬುನಾದಿ ಹಾಕಿಕೊಟ್ಟವರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಎಂದು ಬಸವ ಪ್ರಭು ಯೋಗೀಶ ಸ್ವಾಮೀಜಿ ಹೇಳಿದರು.

ಪಿರಿಯಾಪಟ್ಟಣ ತಾಲೂಕು ರಾವಂದೂರು ಮುರುಘ ಮಠದ ಆವರಣದಲ್ಲಿ ಏರ್ಪಡಿಸಿದ್ದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳ 30ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧಾರ್ಮಿಕವಾಗಿ ಸಾಮಾಜಿಕವಾಗಿ ಆಸಕ್ತಿ ಉಳ್ಳಂತಹ ಸ್ವಾಮೀಜಿಯವರು ವಿದ್ಯಾರ್ಥಿನಿಲಯ ಮತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯಲ್ಲಿ ರಾಜ್ಯಾದ್ಯಂತ ಉಚಿತ ವಿದ್ಯಾರ್ಥಿನಿಲಯವನ್ನು ಮೊಟ್ಟಮೊದಲ ಬಾರಿಗೆ ತೆರೆದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ, 12ನೇ ಶತಮಾನ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನವರ ತತ್ವ ಆದರ್ಶಗಳು ಸರ್ವಕಾಲದಲ್ಲೂ ಅಜರಾಮರವಾಗಿರುತ್ತವೆ, ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ನಾಂದಿ ಆಗಬೇಕು. ಕರ್ನಾಟಕ ಸಾಂಸ್ಕೃತಿಕ ರಾಯಭಾರಿಯಾಗಿ ಬಸವಣ್ಣ ಅವರನ್ನು ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು.

ಮುರುಗ ಮಠದ ಮೋಕ್ಷ ಪತಿ ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ತಮಗೆ ಭಕ್ತರು ನೀಡಿದ ಹಣದಲ್ಲಿ ಹೋದ ಕಡೆಯಲ್ಲ ಆಸ್ಪತ್ರೆ, ವಿದ್ಯಾರ್ಥಿನಿಲಯಗಳನ್ನು ತೆರೆಯುವ ಮೂಲಕ ಕ್ರಾಂತಿಕಾರಿ ಮಹಾನ್ ಪುರುಷರಾಗಿದ್ದಾರೆ ಹಾಗೂ ಇವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಚಿನ್ನ, ಹಣ ದಾನ ಮಾಡುವ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ಪ್ರೀತಿ ಪಾತ್ರರಾದ ಗುರುಗಳಾಗಿದ್ದರು ಎಂದು ತಿಳಿಸಿದರು.

ಶಿಕ್ಷಕ ಪಿ. ಮೈ. ಕಾಂತರಾಜು ಮಾತನಾಡಿದರು. ಊಟಿ ಕಲಾವಿದರಿಂದ ವಚನ ಗಾಯನ ಮಾಡಿದರು. ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಆರ್.ಎಸ್. ವಿಜಯಕುಮಾರ್, ಆರ್.ಟಿ. ಅನುಶ್ ಪಟೇಲ್, ಆರ್‌.ಪಿ. ಸತೀಶ್ , ಆರ್.ಎಸ್. ಸುರೇಶ್, ಆರ್.ಎಸ್. ಕುಮಾರ್, ವಿಜಯ್, ಆರ್.ಎಸ್. ಮಹೇಶ್ ಇದ್ದರು.