ನಾಗಲಾಪುರ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

| Published : Mar 04 2025, 12:38 AM IST

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಹಲವೆಡೆ ಕೆರೆ ಹೂಳೆತ್ತುವ ಮೂಲಕ ನೀರಿನ ಸಂರಕ್ಷಣೆ, ಪ್ರಾಣಿ-ಪಕ್ಷಿ, ಜಾನುವಾರುಗಳಿಗೆ ನೀರುಣಿಸುವುದು, ಕೃಷಿ ಚಟುವಟಿಕೆಗೆ ಅನುಕೂಲವಾಗುವ ಕಾರ್ಯ ನಿರಂತರವಾಗಿದೆ ಸಾಗಿದೆ.

ಕನಕಗಿರಿ:

ತಾಲೂಕಿನ ಮುಸಲಾಪುರ ವಲಯದ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ನಾಗಲಾಪುರದ ಮರಿಯಮ್ಮದೇವಿ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ಈಚೆಗೆ ಚಾಲನೆ ನೀಡಿದರು.

ಆನಂತರ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಹಲವೆಡೆ ಕೆರೆ ಹೂಳೆತ್ತುವ ಮೂಲಕ ನೀರಿನ ಸಂರಕ್ಷಣೆ, ಪ್ರಾಣಿ-ಪಕ್ಷಿ, ಜಾನುವಾರುಗಳಿಗೆ ನೀರುಣಿಸುವುದು, ಕೃಷಿ ಚಟುವಟಿಕೆಗೆ ಅನುಕೂಲವಾಗುವ ಕಾರ್ಯ ನಿರಂತರವಾಗಿದೆ ಸಾಗಿದೆ. ಜತೆಗೆ ಕೆರೆ ನಿರ್ಮಾಣ, ಗೋಕಟ್ಟೆ, ಹಳ್ಳ-ಕೊಳ್ಳಗಳ ನಿರ್ಮಾಣ ಮಾಡುವುದು ಸೇರಿದಂತೆ ರೈತ ಪರ ಕಾರ್ಯಗಳಿಗೆ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಇಂತಹ ಸಾಮಾಜಿಕ ಕಾರ್ಯದ ಯಶಸ್ಸಿಗೆ ಗ್ರಾಮಸ್ಥರ, ರೈತರು, ಕಾರ್ಮಿಕರ ಸಹಕಾರ ಮುಖ್ಯವಾಗಲಿದೆ ಎಂದರು.

ತಾಲೂಕು ಯೋಜನಾಧಿಕಾರಿ ನಿಂಗಪ್ಪ ಅಗಸರ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ಯಾಮನಗೌಡ್ರ ಮಾತನಾಡಿ, ಕೆರೆ-ಕಟ್ಟೆಗಳಿಂದ ಅಂತರ್ಜಲ ವೃದ್ಧಿಯಾಗಲಿದೆ. ಹೂಳೆತ್ತುವ ಕಾರ್ಯದಿಂದ ಜಲ ಸಂರಕ್ಷಣೆಯಾಗಲಿದೆ. ಧರ್ಮಸ್ಥಳ ಸಂಸ್ಥೆಯಿಂದ ಇಂತಹ ಸಮಾಜ ಸೇವೆಯುಳ್ಳ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಹನುಮವ್ವ, ಕೆರೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜ, ಕೋಶಾಧ್ಯಕ್ಷ ನೀಲಪ್ಪ, ಕೆರೆ ಅಭಿಯಂತರ ಸತೀಶ, ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ, ವಲಯ ಮೇಲ್ವಿಚಾರಕ ಯಲ್ಲರಿ ಶಿವಾಜಿ, ವಲಯದ ಸೇವಾ ಪ್ರತಿನಿಧಿಗಳಾದ ಹಂಪಮ್ಮ, ಶಿವು ಕುಮಾರ, ಅಂಬರೀಶ, ಚನ್ನಬಸವ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು, ಗ್ರಾಪಂ ಸದಸ್ಯರು, ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.