ಸಾರಾಂಶ
ಬೀದರ್: ಇದೇ ಏ.11, 12 ಹಾಗೂ 13ರಂದು ಮೂರು ದಿನಗಳ ಕಾಲ ನಗರದ ಲಾವಣ್ಯ ಫಂಕ್ಷನ್ ಹಾಲ್‌ನಲ್ಲಿ ಸ್ಪೈಕಾನ್-4
(Standard Practices In Construction) ಕುರಿತಾಗಿ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್(ಇಂಡಿಯಾ) ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಮಣಗೆ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಮನೆ ಕಟ್ಟಿಸಿಕೊಳ್ಳುವ ಕನಸು ಹೊತ್ತವರಿಗೆ ಹಲವಾರು ಮಾಹಿತಿಗಳು ಇಲ್ಲಿ ಲಭ್ಯ ಆಗಲಿವೆ ಇದೊಂದು ಉತ್ತಮ ಅವಕಾಶ ಎಂದರು.
ಏ.11ರಂದು ಬೆಳಿಗ್ಗೆ 11ಕ್ಕೆ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಸಾನಿಧ್ಯವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ವಹಿಸಲಿದ್ದಾರೆ. ಸಂಸದ ಸಾಗರ ಖಂಡ್ರೆ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪೌರಾಡಳಿತ ಸಚಿವ ರಹೀಮ್‌ಖಾನ್, ಗೌರವ ಅತಿಥಿಗಳಾಗಿ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.ಅಂಚೂರಿ ಹೈದರಾಬಾದ್‌ನ ಮುಖ್ಯ ಕನ್ಸಲ್ಟೆಂಟ್ ಡಾ.ಎಸ್‌ಪಿ ಅಂಚೂರಿ ಪ್ರಾಸ್ತಾವಿಕವಾಗಿ ಮಾತನಾಡುವರು. ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) ಸಂಸ್ಥೆಯ ಹತ್ತನೇ ವರ್ಷದ ವಾರ್ಷಿಕೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ, ಮೂರು ದಿವಸಗಳ ಕಾಲ ಕಟ್ಟಡ ನಿರ್ಮಾಣದ ವಸ್ತುಗಳ ಸಮಗ್ರ ವಸ್ತು ಪ್ರದರ್ಶನ ಹಾಗೂ ವಿವಿಧ ವಿಚಾರ ಸಂಕಿರಣ ಮೂಲಕ ಸಿವಿಲ್ ಅಭಿಯಂತರರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಐಸಿಐ ರಾಷ್ಟ್ರೀಯ ಅಧ್ಯಕ್ಷ ಡಾ.ರಾಮಚಂದ್ರನ್, ಕೆಪಿಸಿಇಎ- ಎಸ್‌ಸಿ ಅಧ್ಯಕ್ಷ ಶ್ರೀಕಾಂತ ಚನಲ್, ಪಿಜಿ ಮನೀಶ, ಡಾ.ರಾಕೇಶರೆಡ್ಡಿ, ಶೇಶಾದ್ರಿ, ಡಾ.ಬ್ರಿಜ್‌ಭೂಷಣ್, ರಾಜೇಶ ಆರ್. ಕಣ್ಣನ್ ಬೆಂಗಳೂರು, ಸೀತಾ ಮಹಾಲಕ್ಷ್ಮಿ, ಎಸ್‌ಪಿಅಂಚುರಿ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಒಳಗೊಂಡಂತೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಸಿವಿಲ್ ಎಂಜಿನಿಯರ್‌ಗಳು ಆಗಮಿಸುತ್ತಿದ್ದಾರೆ. ಈ ಮೂರು ದಿನಗಳ ವಿಚಾರ ಸಂಕಿರಣದಲ್ಲಿ ಜಿಲ್ಲೆಯ ವಿವಿಧ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಕಾರ್ಯದರ್ಶಿ ಅಶೋಕ ಉಪ್ಪೆ ಮಾತನಾಡಿ, ಭೂಕಂಪ ಆದರೂ ಕಟ್ಟಡಗಳು ದೀರ್ಘ ಕಾಲದವರೆಗೆ ಬಾಳಿಕೆ ಬರುವಂತೆ ಅನುಸರಿಸಬೇಕಾದ ಮಾರ್ಗೋಪಾಯಗಳು, ಕಟ್ಟಡಗಳು ಶಿಥಿಲಾವಸ್ಥೆಗೆ ಬರದಂತೆ ತಡೆಯುವ ಕ್ರಮ, ಕಟ್ಟಡ ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಅನುಸರಿಸಬೇಕಾದ ಮಾರ್ಗೋಪಾಯಗಳ ಕುರಿತು ಈ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಲಾಗುತ್ತದೆ. ಕಟ್ಟಡಕ್ಕೆ ಉಪಯುಕ್ತ ತಂತ್ರಜ್ಞಾನ, ಉಪಕರಣ, ಸಿಮೆಂಟ್ ಸೇರಿದಂತೆ ಕಟ್ಟಡಕ್ಕೆ ಬಳಸುವ ಇತರೆ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ಓಂಕಾರ ಪಾಟೀಲ್, ಶಿವಕುಮಾರ ಯಲಾಲ್, ಸಂದೀಪ ಕಾಡವಾದ, ಅಮಿತ ನಾಗೂರೆ, ಮಹೇಶ ಹೊರಂಡೆ, ದಿಲೀಪ ನಿಟ್ಟೂರೆ ಮತ್ತಿತರರಿದ್ದರು.11ಕ್ಕೆ ವಲ್ಲಭಭಾಯಿ ಪಟೇಲ್ ಸೌಹಾರ್ದ
ಸಹಕಾರ ಸಂಘ ಉದ್ಘಾಟನೆ
ಬೀದರ್: ಇದೇ ಏ.11 ರಂದು ಸಂಜೆ 6.30ಕ್ಕೆ ನಗರದ ಚಿಕ್ಕಪೇಟ್ ಸಮೀಪದ ಲಾವಣ್ಯ ಕನ್ವೆನ್ಶನ್ ಹಾಲ್‌ನಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಉದ್ಘಾಟಿಸಲಾಗುತ್ತಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿ ಮಾತನಾಡಿ, ಅಂದು ಕಾರ್ಯಕ್ರಮದ ಸಾನಿಧ್ಯವನ್ನು ಚಿದಂಬರಾಶ್ರಮದ ಡಾ.ಶಿವಕುಮಾರ ಸ್ವಾಮೀಜಿ ವಹಿಸುವರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿಂದೂ ಎಕನಾಮಿಕ್ ಫೋರಂನ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಟಿಆರ್, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು. ಸಹಕಾರಿ ಸಂಘ ನಿಯಮಿತದ ಉಪಾಧ್ಯಕ್ಷ ವೀರಶೆಟ್ಟಿ ಮಣಗೆ, ನಿರ್ದೇಶಕರಾದ ಶಂಕರರಾವ ಕೊಟಾರ್ಕಿ, ವೀರೇಂದ್ರ ಶಾಸ್ತ್ರೀ, ಸಿದ್ಧರಾಜ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.