ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ಗುರುತಿಸುವ ಕಾರ್ಯ ನೆನೆಗುದಿಗೆ ಬಿದ್ದಿದು, ನಾಮಕವಸ್ಥೆಗೆ ಅನಧಿಕೃತ ಕಟ್ಟಡ ಸರ್ವೇ ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದಂತೆ ಕಾಣುತ್ತಿದೆ.
ಅಕ್ಟೋಬರ್‌ನಲ್ಲಿ ಮಹದೇವಪುರದ ಬಾಬುಸಾಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿತದಿಂದ 9 ಮಂದಿ ಕಾರ್ಮಿಕರು ಮೃತಪಟ್ಟ ಹಿನ್ನೆಲೆ ನಗರದ ಎಲ್ಲ ನಿರ್ಮಾಣ ಹಂತದಲ್ಲಿರುವ ಅನಧಿಕೃತ ಕಟ್ಟಡಗಳನ್ನು 1 ವಾರದಲ್ಲಿ ಗುರುತಿಸಿ ವರದಿ ನೀಡುವಂತೆ ಬಿಬಿಎಂಪಿಯ ಎಲ್ಲಾ 8 ವಲಯದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು.
ಬಿಬಿಎಂಪಿಯು ನ.28ರಿಂದ ಅಧಿಕೃತವಾಗಿ ಸರ್ವೇಕಾರ್ಯ ಆರಂಭಿಸಿದ್ದು, 1.5 ತಿಂಗಳು ಕಳೆದರೂ ಅನಧಿಕೃತ ಕಟ್ಟಡ ಸರ್ವೇ ಕಾರ್ಯ ಪ್ರಗತಿ ಕಂಡಿಲ್ಲ.
ಈವರೆಗೆ ಬಿಬಿಎಂಪಿಯ 8 ವಲಯದಲ್ಲಿ ಕೇವಲ 2,280 ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳು ಎಂದು ಗುರುತಿಸಿದ್ದಾರೆ.
ಈ ಪೈಕಿ ನಕ್ಷೆ ಮಂಜೂರಾತಿಯನ್ನು ಬಿಬಿಎಂಪಿಯಿಂದ ಪಡೆದುಕೊಂಡು ಉಲ್ಲಂಘಿಸಿದ ಕಟ್ಟಡಗಳು ಹಾಗೂ ಬಿ ಖಾತಾ ಆಸ್ತಿಯಲ್ಲಿ ಹಾಗೂ ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಾಣ ಮಾಡುತ್ತಿರುವ ಎಂಬ 2 ಭಾಗ ಮಾಡಲಾಗಿದೆ.
ವಲಯ ಆಯುಕ್ತರಿಂದ ನೋಟಿಸ್ ಇಲ್ಲ: ಅನಧಿಕೃತ ಕಟ್ಟಡಗಳ ಸರ್ವೇ ಹಾಗೂ ನೋಟಿಸ್ ಜಾರಿ ಮಾಡಿ ಕ್ರಮಕೈಗೊಳ್ಳುವ ಅಧಿಕಾರಿವನ್ನು ವಲಯ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ, ವಲಯ ಮಟ್ಟದ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ. ಅನಧಿಕೃತ ಕಟ್ಟಡ ಎಂದು ಗುರುತಿಸಿರುವ ಕಟ್ಟಡಗಳಿಗೂ ನೋಟಿಸ್ ಮಾಡುವ ಕೆಲಸವನ್ನು ವಲಯ ಆಯುಕ್ತರು ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಪಟ್ಟಿಯಿಂದ ಕೈ ಬಿಡುವ ಕೆಲಸ: ಅನಧಿಕೃತ ಕಟ್ಟಡ ಎಂದು ಗುರುತಿಸಿರುವ ಪಟ್ಟಿಯಿಂದ ಕೆಲವು ಅನಧಿಕೃತ ಕಟ್ಟಡಗಳನ್ನು ಕೈ ಬಿಡಲಾಗುತ್ತದೆ. ಹೀಗಾಗಿ, ದಿನದಿಂದ ದಿನಕ್ಕೆ ಅನಧಿಕೃತ ಕಟ್ಟಡ ಎಂದು ಗುರುತಿಸಲಾದ ಪಟ್ಟಿಯಲ್ಲಿನ ಸಂಖ್ಯೆ ಕಡಿಮೆಯಾಗುತ್ತಿದೆ.
ವಲಯವಾರು ಗುರುತಿಸಲಾದ ಅಕ್ರಮ ಕಟ್ಟಡ ವಿವರ
ವಲಯಕಟ್ಟಡ ಸಂಖ್ಯೆಮಹದೇವಪುರ586
ಯಲಹಂಕ488ದಾಸರಹಳ್ಳಿ203ಪೂರ್ವ240ದಕ್ಷಿಣ143ಪಶ್ಚಿಮ194ಬೊಮ್ಮನಹಳ್ಳಿ230ಆರ್ ಆರ್ ನಗರ196ಒಟ್ಟು2,280