ಸಾರಾಂಶ
ಬೆಂಗಳೂರು : ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ನೇಪಾಳದ ಮಹಿಳೆಯೊಬ್ಬಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಪೂಜಾ ಬಿಸ್ತಾ ಬಂಧಿತಳಾಗಿದ್ದು, ಆರೋಪಿಯಿಂದ 7 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
ಕಳೆದ ಮಾರ್ಚ್ ತಿಂಗಳಿಂದ ಸಿದ್ದಾಪುರ ಸಮೀಪದ ನಿವಾಸಿ ಪೂಜಾ ದ್ವಿವೇದಿ ಎಂಬುವರ ಮನೆಯಲ್ಲಿ ಬಿಸ್ತಾ ಕೆಲಸ ಮಾಡುತ್ತಿದ್ದಳು. ಕೆಲ ದಿನಗಳ ಹಿಂದೆ ತಮ್ಮ ಕುಟುಂಬ ಸಮೇತ ಮಹಾರಾಷ್ಟ್ರದ ಪುಣೆಗೆ ತೆರಳಿದ್ದ ಪೂಜಾ ಅವರಿಗೆ ಮನೆಗೆ ಮರಳಿದ ಬಳಿಕ ಲಾಕರ್‌ನಲ್ಲಿಟ್ಟಿದ್ದ ಆಭರಣ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ತಮ್ಮ ಮನೆ ಕೆಲಸದಾಳು ಮೇಲೆ ಶಂಕಿಸಿ ಪೊಲೀಸರಿಗೆ ಅವರು ದೂರು ಕೊಟ್ಟಿದ್ದರು. ಆದರೆ ಅಷ್ಟರಲ್ಲಿ ಮನೆ ಖಾಲಿ ಮಾಡಿಕೊಂಡು ಪೂಜಾ ಬಿಸ್ತಾ ನಾಪತ್ತೆಯಾಗಿದ್ದಳು. ಕೊನೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳ್ಳತನ ಬಯಲಾಗಿದೆ.
ಕೆಲ ವರ್ಷಗಳ ಹಿಂದೆ ಕೂಲಿ ಅರಸಿಕೊಂಡು ನಗರಕ್ಕೆ ನೇಪಾಳ ಮೂಲದ ಪೂಜಾ ಬಿಸ್ತಾ ಬಂದಿದ್ದಳು. ಜಯನಗರದ 2ನೇ ಹಂತದಲ್ಲಿ ನೆಲೆಸಿದ್ದ ಆಕೆ, ಆ ಪ್ರದೇಶದ ಅಪಾರ್ಟ್‌ಮೆಂಟ್ ಹಾಗೂ ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಹಣದಾಸೆಗೆ ಬಿದ್ದು ಮನೆಯೊಡತಿ ಮನೆಯಲ್ಲಿ ಕದ್ದು ಆಕೆಗೆ ಜೈಲು ಸೇರುವಂತಾಗಿದೆ.
;Resize=(128,128))
;Resize=(128,128))