ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ

| Published : Dec 02 2023, 12:45 AM IST

ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ ಕರ್ನಾಟಕ ಸುವರ್ಣ ಸಂಭ್ರಮ ೫೦ರ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ನರೇಗಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಶಿವಮೂರ್ತಿ ಕುರೇರ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಸುವರ್ಣ ಸಂಭ್ರಮ ೫೦ರ ಉಪನ್ಯಾಸ ಮಾಲಿಕೆ ಕಾರ್ಯಕ್ರಮಶಿರಹಟ್ಟಿ: ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಉತ್ತರ ಕರ್ನಾಟಕದ ಅಂದಾನಪ್ಪ ದೊಡ್ಡಮೇಟಿ, ಡೆಪ್ಯೂಟಿ ಚೆನ್ನಬಸಪ್ಪ, ರಾ.ಹ. ದೇಶಪಾಂಡೆ, ಆಲೂರ ವೆಂಕಟರಾವ್, ಹುಯಿಲಗೋಳ ನಾರಾಯಣರಾವ್ ಅವರು ಹೆಸರುವಾಸಿಯಾಗಿದ್ದಾರೆ. ಹೀಗೆ ಅನೇಕರು ತಮ್ಮದೇ ರೀತಿಯಲ್ಲಿ ಏಕೀಕರಣ ಹೋರಾಟಕ್ಕೆ ಧುಮುಕಿದ್ದು, ಅವರ ಸೇವೆ ಅನನ್ಯವಾದದು ಎಂದು ನರೇಗಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಧ್ಯಾಪಕ ಶಿವಮೂರ್ತಿ ಕುರೇರ ಹೇಳಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಏರ್ಪಡಿಸಿದ ಕರ್ನಾಟಕ ಸುವರ್ಣ ಸಂಭ್ರಮ ೫೦ರ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕನ್ನಡಿಗರು ಸಧ್ಯ ಆತಂಕವನ್ನು ಎದುರಿಸುತ್ತಿದ್ದೇವೆ. ಕನ್ನಡ ನಾಡಿನ ಅಸ್ಮಿತೆ, ಶ್ರೀಮಂತಿಕೆ, ಗತವೈಭವ, ಕನ್ನಡ ಕಟ್ಟಲು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಮಹಾನ್ ಚೇತನಗಳ ಕಾರ್ಯವನ್ನು ಸ್ಮರಿಸಿಕೊಳ್ಳಬೇಕಾಗಿದೆ. ಆ ದಿಸೆಯಲ್ಲಿ ಸಾಗುವ ಹೆಚ್ಚಿನ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದು ತಿಳಿಸಿದರು. ನಮ್ಮ ಅಮೂಲ್ಯ ಕನ್ನಡ ಸಂಸ್ಕೃತಿ, ಪರಂಪರೆ ಅರಿಯಬೇಕಾಗಿದೆ. ಅಂದಾಗ ಆತಂಕದಿಂದ ದೂರ ಸರಿಯಲು ಸಾಧ್ಯ. ಭಾರತಕ್ಕೆ ಸ್ವಾತಂತ್ರö್ಯ ಸಿಗುವ ಮುನ್ನ ೧೮ ಅರಸು ಮನೆತನಗಳು ಕರ್ನಾಟಕವನ್ನು ಆಳಿವೆ. ಆಗಿನ ಗತವೈಭವ ಹೆಮ್ಮೆ ಪಡುವಂತದ್ದು. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅದಕ್ಕೆ ಹಲ್ಮಿಡಿ ಶಾಸನವೆ ಸಾಕ್ಷಿ ಎಂದು ಹೇಳಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಬಿ. ಹೊಸೂರ ಕಾರ್ಯಕ್ರಮ ಉದ್ಘಾಟನೆ ಮಾತಿ ಮಾತನಾಡಿ, ಕರ್ನಾಟಕ ಏಕೀಕರಣ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಲ್ಲಿ ಕನ್ನಡದ ಕಿಚ್ಚು ಹಚ್ಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅತ್ಯಂತ ಶ್ಲಾಘನೀಯವಾದುದು. ಕನ್ನಡ ಭಾಷೆಯ ಉಳಿವು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.

ನಮ್ಮ ಭಾಷೆ, ನೆಲ, ಜಲ ಮತ್ತು ಅಸ್ಮಿತೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸಂಘಟನೆ ಮೂಲಕ ಹೋರಾಡಬೇಕಿದೆ. ನೆರೆ ರಾಜ್ಯಗಳ ಉಪಟಳ ಹಾಗೂ ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿದೆ. ಇದು ಖಂಡನೀಯ. ಕನ್ನಡ ಸಂಘಟನೆ ಮತ್ತು ಕನ್ನಡಪರ ಒಕ್ಕೂಟ ಈ ನಿಟ್ಟಿನಲ್ಲಿ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಕಡ್ಡಾಯ ಕನ್ನಡ ಜಾರಿಯಾಗಬೇಕಿದೆ. ಆಂಗ್ಲ ಭಾಷೆಯಲ್ಲಿ ಕಡತಗಳ ವಿಲೇವಾರಿ ಸಂಖ್ಯೆ ಕಡಿಮೆಯಾಗಬೇಕು. ಸರ್ಕಾರದ ಸುತ್ತೋಲೆ ಇದ್ದರೂ ಇನ್ನು ಆಂಗ್ಲ ಭಾಷೆಯಲ್ಲಿ ಕಡತಗಳ ಜಾರಿ ಮಾತ್ರ ಕಡಿಮೆಯಾಗಿಲ್ಲ. ಆದ್ದರಿಂದ ಸರ್ಕಾರ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.

ಶಿರಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯ ಉಮೇಶ ಅರಹುಣಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಚ್.ಎಂ ದೇವಗಿರಿ, ಎಚ್.ಎಂ. ಪಲ್ಲೇದ, ಸತೀಶ ದೇಶಪಾಂಡೆ, ಎಚ್.ಆರ್ ಬೆನಹಾಳ, ಸವಿತಾ ಸಿದ್ದೂನವರ, ಶಂಕರ ಬಾರಕೇರ, ಬಸವರಾಜ ಪರವ್ವನವರ, ಚಂದ್ರು ಕದಡಿ ಮತ್ತಿತರರು ಉಪಸ್ಥಿತರಿದ್ದರು.