ಸೇತುವೆಗಳ ಸ್ವಚ್ಛಗೊಳಿಸಿದ ಎನ್‌ಎಸ್‌ಎಸ್‌ ಶಿಬಿರಾರ್ಥಿಗಳು

| Published : Jan 12 2025, 01:19 AM IST

ಸೇತುವೆಗಳ ಸ್ವಚ್ಛಗೊಳಿಸಿದ ಎನ್‌ಎಸ್‌ಎಸ್‌ ಶಿಬಿರಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳು ಕೊಡಗು ಮೈಸೂರು ಜಿಲ್ಲೆಯ ಗಡಿ ಭಾಗದ ಕಾವೇರಿ ನದಿಯ ಎರಡು ಸೇತುವೆಗಳನ್ನು ಸ್ವಚ್ಛ ಮಾಡಿ ಬಣ್ಣ ಬಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳು ಕೊಡಗು ಮೈಸೂರು ಜಿಲ್ಲೆಯ ಗಡಿ ಭಾಗದ ಕಾವೇರಿ ನದಿಯ ಎರಡು ಸೇತುವೆಗಳನ್ನು ಸ್ವಚ್ಛ ಮಾಡಿ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿಸಿಕೊಂಡರು.

ಕಳೆದ ಒಂದು ವಾರದಿಂದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಶಿಬಿರಾರ್ಥಿಗಳು 177 ವರ್ಷಗಳ ಹಿಂದೆ ಕಾವೇರಿ ನದಿಗೆ ನಿರ್ಮಾಣವಾದ ಹಳೆಯ ಸೇತುವೆಯ ಸ್ವಚ್ಛತೆ ಮತ್ತು ಎರಡು ಬದಿಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಿದರು.

ಭಾರತ್ ಮಾತಾ ಪದವಿ ಕಾಲೇಜಿನ ಪ್ರಾಂಶುಪಾಲ ಫಾ. ಎಬಿನ್ ಮತ್ತು ಶಿಬಿರಾಧಿಕಾರಿ ಎಚ್ ಆರ್ ದಿನೇಶ್ ನೇತೃತ್ವದಲ್ಲಿ ಹಗಲು ರಾತ್ರಿ ಕೆಲಸ ನಿರ್ವಹಿಸಿ ನೂತನ ಸೇತುವೆಗೆ ಬಣ್ಣ ಬಳಿದರು.

ಹಗಲು ವೇಳೆ ಸೇತುವೆಯ ಮೇಲೆ ವಾಹನಗಳ ಸಂಚಾರದ ಒತ್ತಡ ಇದ್ದ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆ ಯಿಂದ ತಡರಾತ್ರಿ ಒಂದು ಗಂಟೆಯ ತನಕ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಶಿಬಿರದ 50ಕ್ಕೂ ಅಧಿಕ ಶಿಬಿರಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ದೃಶ್ಯ ಕಂಡು ಬಂತು.

ಸ್ವಚ್ಛತಾ ಕಾರ್ಯಕ್ಕೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ ಎನ್ ಚಂದ್ರಮೋಹನ್ ಚಾಲನೆ ನೀಡಿದರು.

ಬೈಲುಕುಪ್ಪೆ ಮತ್ತು ಕುಶಾಲನಗರ ಭಾಗದ ಪೊಲೀಸರು, ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಿಬ್ಬಂದಿ ಈ ಸಂದರ್ಭ ಸ್ಥಳದಲ್ಲಿ ಇದ್ದು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.

ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಅಧಿಕಾರಿ ಟಿಟ್ಟೋ ಥಾಮಸ್ ಶಿಬಿರದ ನಿರ್ವಹಣಾಧಿಕಾರಿಗಳಾದ ಕೀರ್ತನ ಕುಟ್ಟಪ್ಪ, ಬಿ ಡಿ ಶೃತಿ ಬೃಂದಾ, ಮಂಜುನಾಥ್, ಲೀನಾ ಮತ್ತಿತರರು ಇದ್ದರು.