ಲಿಂಗಾಯತರಿಗೆ ‘ಇತರೆ’ ಗೊಂದಲ

| Published : Sep 18 2025, 02:00 AM IST

ಸಾರಾಂಶ

ರಾಜ್ಯದಲ್ಲಿ ಸೆ.22ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ನಮೂನೆಯ ಧರ್ಮದ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಆಯ್ಕೆ ನೀಡದೆ ಕೇವಲ ಇತರೆ ಎಂದು ನಮೂದಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಲಿಂಗಾಯತ ಸಮುದಾಯದಲ್ಲಿ ಗೊಂದಲ ಸೃಷ್ಟಿಯಾಗಿದೆ.

- ಧರ್ಮ ಕಾಲಂನಲ್ಲಿ ಲಿಂಗಾಯತ/ವೀರಶೈವ ಆಯ್ಕೆಯೇ ಇಲ್ಲ- ‘ಇತರೆ’ ಕಾಲಂನಲ್ಲಿ ನಮೂದಿಸಲು ಸರ್ಕಾರದಿಂದ ಅವಕಾಶ

===

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಸೆ.22ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ನಮೂನೆಯ ಧರ್ಮದ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಆಯ್ಕೆ ನೀಡದೆ ಕೇವಲ ಇತರೆ ಎಂದು ನಮೂದಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಲಿಂಗಾಯತ ಸಮುದಾಯದಲ್ಲಿ ಗೊಂದಲ ಸೃಷ್ಟಿಯಾಗಿದೆ.

ಸಮೀಕ್ಷೆಯ ನಮೂನೆಯ 8ನೇ ಕಾಲಂನಲ್ಲಿ ಧರ್ಮದ ಹೆಸರು ಹಾಗೂ ಕೋಡ್‌ ಸಂಖ್ಯೆ ನೀಡಲಾಗಿದೆ.

ಹಿಂದು (ಕೋಡ್ ಸಂಖ್ಯೆ- 1), ಇಸ್ಲಾಂ (2), ಕ್ರೈಸ್ತ (3), ಜೈನ್‌ (4), ಸಿಖ್‌ (5), ಬೌದ್ಧ (6), ಪಾರ್ಸಿ (7), ನಾಸ್ತಿಕ (8), ಗೊತ್ತಿಲ್ಲ (9), ಧರ್ಮ ತಿಳಿಸಲು ನಿರಾಕರಿಸುವವರು (10) ಎಂದು ಆಯ್ಕೆ ನೀಡಲಾಗಿದ್ದು, 11ನೇ ಕೋಡ್ ಸಂಖ್ಯೆಯಾಗಿ ‘ಇತರೆ’ (ನಮೂದಿಸಬೇಕು) ಎಂಬ ಆಯ್ಕೆ ನೀಡಲಾಗಿದೆ.

ಹೀಗಾಗಿ ಲಿಂಗಾಯತರಲ್ಲಿ ಹಿಂದು ಎಂದು ನಮೂದಿಸಬೇಕೆ ಅಥವಾ ಇತರೆ ಎಂಬ ಆಯ್ಕೆಯಲ್ಲಿ ಲಿಂಗಾಯತ, ವೀರಶೈವ ಲಿಂಗಾಯತ ಹೀಗೆ ಯಾವ ಧರ್ಮದ ಹೆಸರು ಬಳಸಬೇಕು ಎಂಬ ಗೊಂದಲ ಉಂಟಾಗಿದೆ ಎಂದು ತಿಳಿದುಬಂದಿದೆ.