ಗಣತಿ ಮೂಲಕ ಹಿಂದೂ ಧರ್ಮ ಒಡೆಯುವ ಉದ್ದೇಶ

| Published : Sep 22 2025, 01:00 AM IST

ಗಣತಿ ಮೂಲಕ ಹಿಂದೂ ಧರ್ಮ ಒಡೆಯುವ ಉದ್ದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಕಾಂತರಾಜು ವರದಿ ಮಾಡಿಸಿದರು. ಆ ವರದಿ ಬಹಿರಂಗ ಮಾಡಲಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಹಿಂದೂ ಧರ್ಮವನ್ನು ಒಡೆಯುವ ಉದ್ದೇಶದಿಂದ ರಾಜ್ಯದ ಕಾಂಗ್ರೆಸ್‌ ಸರ್ಕಾರವು ತರಾತುರಿಯಲ್ಲಿ ಜಾತಿ ಗಣತಿ ಮಾಡುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಸಮಯದಲ್ಲಿ ಜನರು ಬೇರೆ ಕಡೆ ಹೋಗುತ್ತಿರುತ್ತಾರೆ. ಅಧಿಕಾರಿಗಳು ದಸರಾದಲ್ಲಿ ಬ್ಯುಸಿ ಆಗಿರುತ್ತಾರೆ. ಇಂತಹ ಸಮಯದಲ್ಲಿ ನಿಜವಾದ ದತ್ತಾಂಶ ಹೊರ ಬರಲು ಸಾಧ್ಯವೆ? ಎಂದು ಪ್ರಶ್ನಿಸಿದರು.ನಾಳೆಯಿಂದ ಜಾತಿಗಣತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿಂದೆ ಕಾಂತರಾಜು ವರದಿ ಮಾಡಿಸಿದರು. ಆ ವರದಿ ಬಹಿರಂಗ ಮಾಡಲಿಲ್ಲ. ಮೂಲ ವರದಿ ಬಹಿರಂಗ ಮಾಡದೆ ತಮಾಷೆ ಮಾಡಿದರು. ಕಾಂಗ್ರೆಸ್‌ ನ ಕೇಂದ್ರ ವರಿಷ್ಠರು ಈ ವರದಿ ತಿರಸ್ಕಾರಿಸಿದರು. ನಂತರ ಸಿಎಂ ಸಿದ್ದರಾಮಯ್ಯ ತೆಲಂಗಾಣ ಮಾದರಿಯಲ್ಲಿ ಗಣತಿ ಮಾಡಲು ಮುಂದಾಗಿದೆ. ಅದು ಕೂಡ 10 ದಿನಗಳಲ್ಲಿ ವರದಿ ಕೊಡಲು ಸಾಧ್ಯನಾ? ದಸರಾ ಸಮಯದಲ್ಲಿ ತರಾತುರಿಯಲ್ಲಿ ಗಣತಿ ಮಾಡುತ್ತಿರುವುದಾದರೂ ಯಾಕೆ ಎಂದು ಅವರು ಪ್ರಶ್ನಿಸಿದರು.ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಗೌಡ, ಲಿಂಗಾಯತ ಕ್ರಿಶ್ಚಿಯನ್ ಎಂದು ಕೃತಕ ಉಪಜಾತಿಗಳನ್ನು ಸೇರಿಸಿಕೊಂಡಿದ್ದಾರೆ. ಈ ಎಲ್ಲ ಉಪಜಾತಿಗಳನ್ನು ಕೈ ಬಿಡಬೇಕು. ಈ ಬಗ್ಗೆ ಈಗಾಗಲೇ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಸರ್ಕಾರ ಹಿಂದೂ ಸಮಾಜ ಒಡೆಯಲು ಮುಂದಾಗಿದ್ದು, ಇಂತಹ ವಿಭಜನೆ ವಿರುದ್ಧ ನಮ್ಮ ಹೋರಾಟ ಸದಾ ಇರುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು.ರಸ್ತೆ ಗುಂಡಿಗಳನ್ನು ಮುಚ್ಚಲು ಇವರಿಗೆ ಆಗುತ್ತಿಲ್ಲ. ಆದರೆ, ಜಾತಿ ಗಣತಿಗೆ ನೂರಾರು ಕೋಟಿ ವ್ಯಯ ಮಾಡಲು ಹೊರಟಿದ್ದಾರೆ. ಇಂತಹ ಸಮಯದಲ್ಲಿ ಅಷ್ಟೊಂದು ಖರ್ಚು ಮಾಡೋದು ಯಾಕೆ? ಕೇಂದ್ರದಿಂದ ಈಗಾಗಲೇ ಜಾತಿಗಣತಿ ನಡೆಯುತ್ತಿದೆ. ಮತ್ತೆ ರಾಜ್ಯದಲ್ಲಿ ಮಾಡಿ ಹಣ ಪೋಲು ಮಾಡಬೇಡಿ ಎಂದು ಅವರು ಸಲಹೆ ನೀಡಿದರು.ಮನೆ ಮನೆಗೆ ಹೋಗಿ ಗಣತಿ ಮಾಡಲು ಆಗಲ್ಲ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಇದನ್ನು ಮಾಡುತ್ತಿದೆ. ಅವರಲ್ಲೇ ಎಷ್ಟೋ ಮಂತ್ರಿಗಳು ಇದನ್ನು ಒಪ್ಪುತ್ತಿಲ್ಲ. ಇದು ಮತ್ತೊಂದು ಕಾಂತರಾಜು ವರದಿ ಆಗಬಾರದು. ೧೪೦ ಕೋಟಿ ವೆಚ್ಚದ ವರದಿ ಕಸದ ಬುಟ್ಟಿ ಸೇರಿದೆ. ಈಗ ೪೦೦ ಕೋಟಿ ಖರ್ಚಾಗುತ್ತಿದೆ. ಇದೆಲ್ಲವೂ ಜನರ ತೆರಿಗೆ ಹಣ. ಇದನ್ನು ಪೋಲು ಮಾಡೋದು ಬೇಡ ಎಂದು ಆಗ್ರಹಿಸಿದರು. ಕಾಂಗ್ರೆಸ್ ವರಿಷ್ಠರು ಇರೋದು ಪಕ್ಷಕ್ಕೆ. ಸಿಎಂ, ಡಿಸಿಎಂ ಇರೋದು ನಮ್ಮ ಜನರ ಸಮಸ್ಯೆ ಬಗೆಹರಿಸಲು. ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದು ಮಾಡಲು ಅಲ್ಲ. ಸಿದ್ದರಾಮಯ್ಯ ಮತಾಂತರಕ್ಕೆ ವೇದಿಕೆ ಕಲ್ಪಿಸುತ್ತಿದ್ದಾರೆ. ಕ್ರಿಶ್ಚಿಯನ್ ಅಲ್ಲಿ ಉಪ ಜಾತಿ ಯಾಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಇದಕ್ಕೆ ಉತ್ತರ ಕೊಡಬೇಕು ಎಂದರು.ಬಿಜೆಪಿಯಲ್ಲಿ ಒಡಕಿನ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ನಲ್ಲೇ ಗೊಂದಲ ಇದೆ. ಸಿಎಂ ಖುರ್ಚಿಗೆ ಜಟಾಪಟಿ ನಡೆಯುತ್ತಿದೆ. ನಮ್ಮಲ್ಲಿ ಆ ರೀತಿಯ ವಾತಾವರಣ ಇಲ್ಲ. ಒಗ್ಗಟ್ಟಾಗಿ ಗಣತಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಪ್ರತಿಭಟಿಸುವುದಿಲ್ಲಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ನಾವು ಬಾನು ಮುಷ್ತಾಕ್ ನಡವಳಿಕೆ ವಿರುದ್ಧ ಧ್ವನಿ ಎತ್ತಿದ್ದೇವೆ. ನಾಡಹಬ್ಬ ದಸರಾ ದೇಶವೇ ನೋಡುವ ಹಬ್ಬ. ದಸರಾ ನಮ್ಮೂರ ಹಬ್ಬ ಆಗಿರುವುದರಿಂದ ನಾಳಿನ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತೇವೆ. ಬಿಜೆಪಿಯಿಂದ ಯಾವುದೇ ಪ್ರತಿಭಟನೆ ಇರಲ್ಲ. ಉದ್ಘಾಟನೆ ವೇಳೆ ಬಾನು ಮುಷ್ತಾಕ್ ನಡವಳಿಕೆ ನೋಡುತ್ತೇವೆ. ನಮ್ಮ ಧರ್ಮಕ್ಕೆ ಧಕ್ಕೆ ಬರುವ ರೀತಿ ನಡೆದುಕೊಂಡರೆ ಮುಂದಿನ ವಿಚಾರದ ಬಗ್ಗೆ ತೀರ್ಮಾನ ಮಾಡುತ್ತೇವೆ. ಯಾವುದೇ ಪ್ರತಿಭಟನೆ ನಮ್ಮ ಕಡೆಯಿಂದ ಮಾಡುವುದಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಗಿರಿಧರ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು.---ಕೋಟ್ಧಾರ್ಮಿಕ ವಿಚಾರವಾಗಿ ಬಾನು ಮುಷ್ತಾಕ್ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ ನಮ್ಮ ಆಚರಣೆಗೆ ಧಕ್ಕೆ ಬರದಂತೆ ನಡೆದುಕೊಂಡರೆ ಅದೇ ಅವರ ಸ್ಪಷ್ಟನೆ.- ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು.-------------------eom/mys/dnm/