ಜನರ ಜೀವ ರಕ್ಷಣೆಯೇ ಆದ್ಯತೆ, ದಂಡ ವಸೂಲಿಯಲ್ಲಸಬ್ ಇನ್‌ಸ್ಪೆಕ್ಟರ್ ಉಮಾ ಪಾಟೀಲ್ ಮಾತನಾಡಿ, ದಂಡ ಹಾಕುವ ಉದ್ದೇಶ ದಂಡಕ್ಕೆ ಹೆದರಿಯಾದರೂ ಹೆಲ್ಮೆಟ್ ಹಾಕಿಕೊಂಡು ಓಡಾಡಲಿ ಎನ್ನುವ ಉದ್ದೇಶವೇ ಹೊರತು ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಪೊಲೀಸರು ಹತ್ತಾರು ಜಾಗೃತಿ ಕಾರ್ಯಕ್ರಮಗಳನ್ನ ಮಾಡಿದರೂ ವಾಹನ ಸವಾರರು ಮಾತ್ರ ಪೊಲೀಸರ ಮನವಿಗೆ ಸ್ಪಂದಿಸುತ್ತಿಲ್ಲ. ಹೆಲ್ಮೆಟ್ ಹಾಕಿಕೊಂಡು ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿತ್ತು, ಬೈಕ್ ಅಪಘಾತದಲ್ಲಿ ಮರಣ ಹೊಂದುವವರ ಸಂಖ್ಯೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಿದರು.